ಆರೋಗ್ಯ-ಜೀವನಶೈಲಿ

ಕ್ಯಾನ್ಸರ್ ನಿಮ್ಮ ಜೀವ ತೆಗೆಯಲು ಬಿಡಬೇಡಿ

ವಿಶ್ವಾದ್ಯಂತ ಕ್ಯಾನ್ಸರ್ ಪ್ರಕರಣಗಳು ಗಾಬರಿಗೊಳಿಸುವಷ್ಟು ಹೆಚ್ಚಾಗಿವೆ, ಗ್ಲೊಬೊಕ್ಯಾನ್ ತಿಳಿಸುವಂತೆ. ವಾಸ್ತವವಾಗಿ, 2008ರಲ್ಲಿ ಪ್ರಕಟಿಸಲಾದ ಅಂಕಿಅಂಶಗಳಿಗೆ ಹೋಲಿಸಿದಂತೆ...

ವಿಶ್ವಾದ್ಯಂತ ಕ್ಯಾನ್ಸರ್ ಪ್ರಕರಣಗಳು ಗಾಬರಿಗೊಳಿಸುವಷ್ಟು ಹೆಚ್ಚಾಗಿವೆ, ಗ್ಲೊಬೊಕ್ಯಾನ್ ತಿಳಿಸುವಂತೆ. ವಾಸ್ತವವಾಗಿ, 2008ರಲ್ಲಿ ಪ್ರಕಟಿಸಲಾದ ಅಂಕಿಅಂಶಗಳಿಗೆ ಹೋಲಿಸಿದಂತೆ ಹೊಸ ಪ್ರಕರಣಗಳಲ್ಲಿ 7.05%ರಷ್ಟು ಹೆಚ್ಚಾಗಿವೆ. ಭಾರತದಲ್ಲಿ ಕ್ಯಾನ್ಸರ್ ನ ಹೆಚ್ಚಳ ಚಿಂತಾಜನಕವಾಗಿದೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ಗಾಳಿ ಮತ್ತು ಜಲ ಮಾಲಿನ್ಯ, ಕೀಟನಾಶಕಗಳು, ಜೀವನಶೈಲಿ, ಆಹಾರ, ತಂಬಾಕು, ಮದ್ಯ ಮತ್ತು ಪಾನ್ ಮಸಾಲ. ಹೃದಯಾಘಾತದ ನಂತರ, ಕ್ಯಾನ್ಸರ್ ದೇಶದಲ್ಲಿ ಮರಣಗಳ ಅತಿ ದೊಡ್ಡ ಕಾರಣವಾಗಿದೆ.
ರೋಗನಿರ್ಣಯ ಮತ್ತು ನಿರ್ವಹಣೆಯಲ್ಲಿ ಉತ್ತಮ ಪ್ರಗತಿಯಾಗಿದ್ದರೂ, ಕ್ಯಾನ್ಸರ್ ಇನ್ನೂ ಸಮಾಜಕ್ಕೆ ದೊಡ್ಡ ಕಂಟಕವಾಗಿದೆ. ಪ್ರತಿ ವರ್ಷವೂ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 6 ಲಕ್ಷಕ್ಕೂ ಹೆಚ್ಚು ಮರಣಗಳು ವರದಿಯಾಗುತ್ತಿದ್ದು, ಭಾರತವು ಕ್ಯಾನ್ಸರ್ ನ ಭಾರಿ ಹೊರೆ ಹೊತ್ತಿದೆ. ಈಗಿನ ವಿದ್ಯಮಾನಗಳನ್ನು ಗಮನಿಸಿದರೆ, 2020ರವೇಳೆಗೆ ಪ್ರಕರಣ ಮತ್ತು ಮರಣಗಳ ಪ್ರಮಾಣ ಅನುಕ್ರಮವಾಗಿ >12 ಲಕ್ಷ ಮತ್ತು >8 ಲಕ್ಷ ತಲುಪಲಿವೆ. ಭಾರತದಲ್ಲಿ ವಿಳಂಬವಾದ ಪತ್ತೆಯು 70%ರಷ್ಟು ಕ್ಯಾನ್ಸರ್ ಮರಣಗಳ ಕಾರಣವಾಗಿದೆ. US ನಲ್ಲಿ 50%ರಷ್ಟು ಮರಣಗಳು 70 ವರ್ಷ ವಯಸ್ಸು ಮೀರಿದವರದ್ದಾಗಿದ್ದರೆ, ಭಾರತದಲ್ಲಿ 71%ರಷ್ಟು ಮರಣಗಳು ಉತ್ಪಾದಕ ವಯಸ್ಸಾದ 30 ರಿಂದ 69 ವರ್ಷ ವಯಸ್ಸಿನವರದು. ವಿಷಾದವೆಂದರೆ, 0.5%ರಷ್ಟು ಜಾಗತಿಕ ಸರಾಸರಿಗೆ ಹೋಲಿಸಿದರೆ, 15%ರಷ್ಟು ರೋಗಿಗಳು ಮಕ್ಕಳಾಗಿದ್ದಾರೆ.

ಖ್ಯಾತ ಕ್ರೀಡಾಪಟುಗಳು ಮತ್ತು ಇತರರಲ್ಲಿ ಹೆಚ್ಚಿದ ಕ್ಯಾನ್ಸರ್ ನ ಪ್ರಮಾಣದಿಂದಾಗಿ ಇದರ ಬಗ್ಗೆ ಹೆಚ್ಚು ಜಾಗೃತಿಯಿದ್ದರೂ, ಸಮಾನ್ಯರು ತಪಾಸಣೆ, ಮತ್ತು ರೋಗನಿರ್ಣಯ ಮಾಡಿಸಿಕೊಳ್ಳಲು ಈಗಲೂ ಹಿಂಜರಿಯುತ್ತಾರೆ. ತಪಾಸಣೆಯಿಂದ ವೈದ್ಯರು ಮೊದಲ ಹಂತದಲ್ಲೇ ರೋಗವನ್ನು ಪತ್ತೆ ಮಾಡಬಹುದು ಮತ್ತು ಆ ಸಮಯದಲ್ಲಿ ಅದನ್ನು ಗುಣಪಡಿದುವುದು ಸುಲಭವಾಗುತ್ತದೆ. ಬಹಳಷ್ಟು ಬಾರಿ, ದೈಹಿಕ ತಪಾಸಣೆಯಿಂದ ಅಥವಾ ಸಾಮಾನ್ಯ ಪರೀಕ್ಷೆಗಳಿಂದ ವೈದ್ಯರು ಮೊದಲ ಹಂತದ ಕ್ಯಾನ್ಸರ್ ಅನ್ನು ಪತ್ತೇಮಾಡಬಹುದು, ರೋಗಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ. ಇವುಗಳಲ್ಲಿ ದೇಹದ ಆಂತರಿಕ ಭಾಗಗಳ ಚಿತ್ರ ತೆಗೆಯುವ ಇಮೇಜಿಂಗ್ ಪ್ರಕ್ರಿಯೆಗಳಿರಬಹುದು. ಉದಾ. ಸೊನೂಗ್ರಫಿ, ಕ್ಷ-ಕಿರಣ, ಒಖI ಅಥವಾ ಎಂಡೊಸ್ಕೊಪಿ. ಇವುಗಳಿಂದ ವೈದ್ಯರು ನೇರವಾಗಿ ಕೆಲವು

ಅಂಗಾಂಗಗಳನ್ನು ನೋಡಬಹುದು. ಇದರ ಜೊತೆಗೆ ಪ್ರಯೋಗಾಲಯದ ಪರೀಕ್ಷೆಗಳೂ ಇವೆ. ಬಹಳಷ್ಟು ಪ್ರಕರಣಗಳಲ್ಲಿ, ವೈದ್ಯರು ಬಯಾಪ್ಸಿಯನ್ನು ಮಾಡಿಸುತ್ತಾರೆ; ಇಲ್ಲಿ ಜೀವಕೋಶದ ಕೆಲವು ಮಾದರಿಗಳನ್ನು ಹೊರತೆಗೆಯಲಾಗುತ್ತದೆ. ನಂತರ ಪ್ಯಾಥೊಲಜಿಸ್ಟ್ ಅದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿ, ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡುತ್ತಾರೆ.

ಡಾ||  ಕೆ.ಸಿ. ಲಕ್ಷ್ಮಯ್ಯ, ಪ್ರೇಫೆಸರ್ ಮತ್ತು ಮುಖ್ಯಸ್ಥರು, ವೈದ್ಯಕೀಯ ಆನ್ಕಾಲಜಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ನಗರದ ಅಗ್ರ ಕ್ಯಾನ್ಸರ್ ತಜ್ಞರು ಹೇಳುತ್ತಾರೆ – “ಅಜ್ಞಾನದ ಕಾರಣದಿಂದಾಗಿ, ಜನರು ಕ್ಯಾನ್ಸರ್ ಎಂಬುದನ್ನು ಕೇಳಿದೊಡನೆಯೇ ಭಯಪಟ್ಟು, ಕೆಲವರು ಅದನ್ನು ಮುಚ್ಚಿಡುತ್ತಾರೆ ಮತ್ತು ಕೆಲವರು ಸಾಂಪ್ರದಾಯಿಕ ಔಷಧಗಳನ್ನು ಬಳಸುತ್ತಾರೆ; ಇದರಿಂದ ಚಿಕಿತ್ಸೆಗೆ ಬಹಲ ವಿಳಂಬವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಕ್ಯಾನ್ಸರ್ ರೋಗಿಗಳನ್ನು ಅಸ್ಪೃಶ್ಯರಂತೆ ಕಾಣಲಾಗುತ್ತದೆ, ಮತ್ತು ಹತ್ತಿರದ ಸಂಬಂಧಿಗಳೂ ಅವರನ್ನು ದೂರವಿಡುತ್ತಾರೆ. ಒಮ್ಮೆ ಪತ್ತೆಯಾದರೆ, ರೋಗಿಗಳು ಬೇಗನೆ ಸಾಯುತ್ತಾರೆ ಎಂದು ಜನ ಭಾವಿಸುತ್ತಾರೆ, ಆದರೆ ವಾಸ್ತವವಾಗಿ ವೈದ್ಯರ ಸರಿಯಾದ ಮಾರ್ಗದರ್ಶನ ಮತ್ತು ಕುಟುಂಬದ ಬೆಂಬಲದಿಂದ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.
ಮುಂದುವರೆಸುತ್ತಾ ಅವರು ಹೇಳಿದರು – “ಗ್ರಾಮೀಣ ಭಾಗಗಳಲ್ಲಿ ರೋಗನಿರ್ಣಯ ಮಾಡಿಸಿಕೊಳ್ಳದ ದೊಡ್ಡ ವರ್ಗವೇ ಇದೆ; ರೋಗವು ಉಲ್ಬಣಗೊಂಡಾಗ ಇವರು ನಮ್ಮಲ್ಲಿಗೆ ಬರುತ್ತಾರೆ.”

ಕ್ಯಾನ್ಸರ್ ಗೆ ಅಂಟಿದ ಕಳಂಕವನ್ನು ನಿವಾರಿಸುವಲ್ಲಿ ಮತ್ತು ಅದರ ವಿರುದ್ಧದ ಹೋರಾಟವನ್ನು ಜಾಗತಿಕವಾಗಿಸುವಲ್ಲಿ ವಿಶ್ವ ಕ್ಯಾನ್ಸರ್ ದಿನವು ಬಹಳ ದೊಡ್ಡ ಹೆಜ್ಜೆಯಾಗಿದೆ. ಒಬ್ಬ ವ್ಯಕ್ತಿಯ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಕ್ಯಾನ್ಸರ್ ಗಂಭೀರವಾದ ಪ್ರಭಾವ ಬೀರುವುದರಿಂದ, ರೋಗನಿರ್ಣಯದ ಹಲವು ವರ್ಷಗಳವರೆಗೆ ರೋಗಿಗಳು ಕುಂದಿದ ಜೀವನ ಗುಣಮಟ್ಟವನ್ನು ಅನುಭವಿಸುವ ಅಪಾಯವನ್ನು ಹೊಂದಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಇಬ್ಬರಿಗೂ ಸಾಮಾಜಿಕ ಬೆಂಬಲದ ಜಾಲಗಳನ್ನು ನಿರ್ವಹಿಸುವುದು ಮತ್ತು ಕ್ಯಾನ್ಸರ್ ಬಗ್ಗೆ ಮಾತನಾಡುವುದು ಬಹಳ ಮುಖ್ಯವಾಗಿದೆ.
ಚಿಕಿತ್ಸೆಯಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ಕೆಲವೊಮ್ಮೆ ನಿತ್ರಾಣವಾಗಬಹುದು. ಚಿಕಿತ್ಸೆಯ ಮುನ್ನ ಅವರು ಮಾಡುವ ಕೆಲವು ಚಟುವಟಿಕೆಗಳನ್ನು ಈಗ ಅವರು ಮಾಡಲಾಗದಿರುವುದು ಅವರಿಗೆ ಹತಾಶೆಯ ಭಾವನೆ ನೀಡಬಹುದು. ಮಿತಿಗಳನ್ನು ಅರಿಯುವುದರಿಂದ ಮತ್ತು ನಿರೀಕ್ಷೆಗಳನ್ನು ಪುನಃ ಸ್ಥಾಪಿಸುವುದರಿಂದ ಹತಾಶೆಯನ್ನು ಕಡಿಮೆ ಮಾಡಬಹುದು. ನಿಮ್ಮನ್ನು ಶಾಂತವಾಗಿಸುವ ಕೆಲಸಗಳನ್ನು ಮಾಡಲು ಯತ್ನಿಸಿ; ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳದಿರಿ. ಅದನ್ನು ಅನುಭವಿಸಿದವರೊಡನೆ ಮತ್ತು ಪರಿಸ್ಥಿತಿಗೆ ಹೊಂದಿಕೊಂಡವರೊಡನೆ ಮಾತನಾಡಿ ಮತ್ತು ಸಹಜ ಜೀವನ ನಡೆಸಿ.

 ಡಾ|| ಶೇಖರ್ ಪಾಟೀಲ್, ಸಲಹೆಗಾರ ವೈದ್ಯಕೀಯ ಆನ್ಕೊಲೊಜಿಸ್ಟ್, ಎಚ್ ಸಿ ಜಿ ಆಸ್ಪತ್ರೆ ಮತ್ತು ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹೇಳುತ್ತಾರೆ – “ಯಾರೇ ಆದರೂ ತಾವಾಗಿಯೇ ಒಬ್ಬರೇ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡಿಸಿಕೊಳ್ಳಬಾರದು. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಮುಖ್ಯವಾದುದು. ಚಿಕಿತ್ಸೆಯ ಸಮಯದಲ್ಲಿ, ಒಬ್ಬ ವೃತ್ತಿಪರ ಗುಪ್ತಸಮಾಲೋಚಕರೊಂದಿಗೆ ಇದನ್ನು ನಿರ್ವಹಿಸುವ ತಂತ್ರಗಳ ಬಗ್ಗೆ ಚರ್ಚಿಸುವುದರಿಂದ ಸಹಾಯವಾಗಬಹುದು. ಚಿಕಿತ್ಸೆಯು ತಮ್ಮ ಕ್ಯಾನ್ಸರ್ ಕಣಗಳನ್ನು ನಾಶಮಾಡಿದಂತೆ ದೃಶ್ಯೀಕರಣ ತಂತ್ರಗಳನ್ನು ಬಳಸಿದ್ದಾರೆ ಮತ್ತು ತಮ್ಮ ಸಮಸ್ಯೆಗಳನ್ನು ಉತ್ತಮವಾಗಿ ಗುರುತಿಸಿದ್ದಾರೆ. ನಿಮಗೆ ಆಗುತ್ತಿರುವಂಥ ಯಾವುದೇ ಅಡ್ಡ ಪರಿಣಾಮಗಳ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ. ಅದನ್ನು ನಿರ್ವಹಿಸಲು ಅಥವಾ ನಿವಾರಿಸಲು ನಿಮ್ಮ ವೈದ್ಯರು ನಿಮಗೆ ಸಹಾವಾಗುತ್ತಾರೆ”.

ಆರೈಕೆಯ ಅವಧಿಯಲ್ಲಿ ಇದನ್ನು ನಿಭಾಯಿಸಲು ಆರೈಕೆದಾರರು ಬಹಳ ಮುಖ್ಯವಾದ ಸಂಪನ್ಮೂಲವಾಗಿರುತ್ತಾರೆ. ಆರೈಕೆದಾರರಾಗುವುದು ನಿಮಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದಣಿವಾದರೂ, ನಿಮ್ಮ ಜೀವನದಲ್ಲಿ ನಿಮ್ಮ ಮನಸ್ಸಿಗೆ ನಾಟುವಂಥ ಕೆಲಸವಾಗಿರುತ್ತದೆ. ಇದನ್ನು ನೀವು ನಿಮ್ಮ ವೃತ್ತಿಯನ್ನಾಗಿ ಸ್ವೀಕರಿಸಬಹುದು ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಅದರ ಅಗತ್ಯವಾದಾಗ ಇದನ್ನು ನಿಮ್ಮ ಮೇಲೆ ಹೇರಬಹುದು, ಹೇಗಿದ್ದರೂ ಸರಿ. ಇಲ್ಲಿ ಮುಖ್ಯವಾದದ್ದು ಜೀವನದಲ್ಲಿ ವಿಶ್ವಾಸವನ್ನು ಕಳೆದುಕೊಂಡತಹ ವ್ಯಕ್ತಿಗೆ ಜೀವನದಲ್ಲಿ ಹೊಸ ಹುಮ್ಮಸ್ಸು ನೀಡುವುದು.
ಕ್ಯಾನ್ಸರ್ ಎಂಬುದು ಈಗಲೂ ಬಹಳ ಭಯಾನಕ ಪದವಾದರೂ, ಶೀಘ್ರ ಪತ್ತೆಯಿಂದ ಮತ್ತು ಸುಧಾರಿತ ಚಿಕಿತ್ಸೆಯಿಂದ, ರೋಗಿಗಳು ಸರಿಸುಮಾರು ಸಹಜ ಜೀವನವನ್ನೇ ನಡೆಸಬಹುದು. ಕ್ಯಾನ್ಸರ್ ಬೆಳೆಯುತ್ತಿರುವ ಸಂಶಯ ನಿಮಗೆ ಉಂಟಾದರೆ, ಲಕ್ಷಣಗಳನ್ನು ಉಪೇಕ್ಷಿಸಬೇಡಿ. ನಂತರಕ್ಕಿಂತ ಮುಂಚಿತವಾಗಿಯೇ ವೈದ್ಯರನ್ನು ಕಂಡು ಅವರ ಸಲಹೆ ಪಡೆಯುವುದು ಸೂಕ್ತವಾಗಿದೆ. ಸಮಸ್ಯೆಯನ್ನು ಸೂಚಿಸುವ ಲಕ್ಷಣಗಳನ್ನು ಅವರು ಗುರುತಿಸಿದಲ್ಲಿ, ಅಗತ್ಯವಾದ ಪರೀಕ್ಷೆಗಳನ್ನು ನಡೆಸಿ, ಸರಿಯಾದ ಸಮಯದಲ್ಲೇ ಚಿಕಿತ್ಸೆಯನ್ನು ಆರಂಬಿಸಬಹುದು.

ನೀವು ಏನು ಮಾಡಬಹುದು ಎಂಬುದರ ಬಗ್ಗೆ ಆಲೋಚಿಸಲು ವಿಶ್ವ ಕ್ಯಾನ್ಸರ್ ದಿನವು ಒಂದು ಅವಕಾಶವಾಗಿದೆ - ಹಾಗಾಗಿ ಪ್ರತಿಜ್ಞೆ ಮಾಡಿ ಮತ್ತು ಕ್ರಮ ಕೈಗೊಳ್ಳಿ. ನೀವು ಏನು ಮಾಡಲೂ ಆಯ್ದುಕೊಂಡರೂ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಬದಲಾವಣೆ ತರಬಹುದು. ಹೌದು ಈ ವಿಶ್ವ ಕ್ಯಾನ್ಸರ್ ದಿನದಂದು ನೀವು ನಿಮ್ಮ ಅಲ್ಪ ಸಹಾಯ ಮಾಡಬಹುದು, ಮತ್ತು ನಂತರವೂ.

ಮನುಷ್ಯನಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಗೆ ತುತ್ತಾಗುವ ಜಾಗಗಳು
ಪುರುಷರಲ್ಲಿ                        ಮಹಿಳೆಯರಲ್ಲಿ
1.    ತುಟಿ, ಬಾಯಿ              1.    ಸ್ತನಗಳು
2.    ಶ್ವಾಸಕೋಶ               2.    ಸೆರ್ವಿಕ್ಸ್ ಯುಟೆರಿ
3.    ಹೊಟ್ಟೆ                       3.    ಕೊಲೊರೆಕ್ಟಂ
4.    ಕೊಲೊರೆಕ್ಟಂ              4.    ಅಂಡಾಶಯ
5.    ಇತರ ಫ್ಯಾರಿಂಕ್ಸ್         5.    ತುಟಿ, ಬಾಯಿ

ಕ್ಯಾನ್ಸರ್ ನಿಗ್ರಹಿಸಲು ಕೆಲವು ಮಾರ್ಗಗಳು
•    ಧೂಮಪಾನ ನಿಲ್ಲಿಸಿ ಮತ್ತು ತಂಬಾಕು/ಘುಟ್ಕಾ ಸೇವನೆ ಮಾಡಬೇಡಿ
•    ಮದ್ಯಪಾನ ಮಾಡಬೇಡಿ ಮತ್ತು ಹೆಚ್ಚು ಕೊಬ್ಬಿನ ಆಹಾರ ಸೇವಿಸಬೇಡಿ
•    ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್ ಗಳುಳ್ಳ ಆರೋಗ್ಯಕರವಾದ ಆಹರವನ್ನೇ ಸೇವಿಸಿ
•    ಸಕ್ರಿಯ ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ. ದೈಹಿಕೆ ಚಟುವಟಿಯಲ್ಲಿ ಮಗ್ನರಾಗಿ ಮತ್ತು ಸ್ಥೂಲಕಾಯವನ್ನು ತಪ್ಪಿಸಿ
•    30 ವರ್ಷ ವಯಸ್ಸನ್ನು ದಾಟಿದ ಪುರುಷರು ಮತ್ತು ಮಹಿಳೆಯರು ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ

ಉಲ್ಲೇಖ:
1. ಗ್ಲೊಬೊಕ್ಯಾನ್ 2012
2. ಗ್ಲೊಬೊಕ್ಯಾನ್ ಭವಿಷ್ಯವಾಣಿ 2012

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ