ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಸರಾಸರಿಗಿಂತ ಹೆಚ್ಚು ಮತ್ತು ಕಡಿಮೆ ಅವಧಿ ನಿದ್ದೆ ಮಧುಮೇಹಕ್ಕೆ ರಹದಾರಿ

ಸರಾಸರಿ ಅವಧಿಗಿಂತ ಹೆಚ್ಚು ಅಥವಾ ಕಡಿಮೆ ಹೊತ್ತು ನಿದ್ದೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿದೆ ...

ವಾಷಿಂಗ್ಟನ್: ಸರಾಸರಿ ಅವಧಿಗಿಂತ ಹೆಚ್ಚು ಅಥವಾ ಕಡಿಮೆ ಹೊತ್ತು ನಿದ್ದೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಇಂದು ವಿಶ್ವದಾದ್ಯಂತ ಸುಮಾರು 29 ದಶಲಕ್ಷ ಜನ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಎಂಡೋಕ್ರೈನ್ ಸೊಸೈಟಿಯ ಎಂಡೋಕ್ರೈನ್ ಅಂಕಿಅಂಶ ತಿಳಿಸುತ್ತದೆ. ಕಳೆದ 50 ವರ್ಷಗಳಲ್ಲಿ ವ್ಯಕ್ತಿಗಳ ಸರಾಸರಿ ನಿದ್ದೆಯ ಅವಧಿ ಸುಮಾರು 2 ಗಂಟೆಯವರೆಗೆ ಕಡಿಮೆಯಾಗಿದೆ ಎನ್ನುತ್ತಾರೆ ಹಿರಿಯ ಲೇಖಕ ಫೆಮ್ಕೆ ರುಟ್ಟರ್ಸ್. ಇದರೊಟ್ಟಿಗೆ ಮಧುಮೇಹಿಗಳ ಸಂಖ್ಯೆ ಜಾಸ್ತಿಯಾಗಿದೆಯಂತೆ.

ಅಧ್ಯಯನಕ್ಕಾಗಿ ಸುಮಾರು 800 ಆರೋಗ್ಯ ವ್ಯಕ್ತಿಗಳನ್ನು ಒಳಪಡಿಸಲಾಯಿತಂತೆ. ಪುರುಷರಲ್ಲಿ ಅಧಿಕ ಮತ್ತು ಕಡಿಮೆ ನಿದ್ದೆ ಇನ್ಸುಲಿನ್ ಗೆ ದೇಹದ ಕೋಶಗಳು ಪ್ರತಿಕ್ರಿಯಿಸುವುದರ ಮೇಲೆ ಪರಿಣಾಮ ಬೀರುತ್ತಿದ್ದು, ಡಯಾಬಿಟಿಸ್ ಹೆಚ್ಚಲು ಕಾರಣವಾಗುತ್ತದೆ. ಮಹಿಳೆಯರಲ್ಲಿ ಇಂತಹ ಯಾವುದೇ ಲಕ್ಷಣ ಕಂಡುಬರುವುದಿಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಸರಾಸರಿಗಿಂತ ಹೆಚ್ಚು-ಕಡಿಮೆ ಅವಧಿ ನಿದ್ದೆ ಮಾಡುವವರಲ್ಲಿ ರಕ್ತದೊತ್ತಡ ಪ್ರಮಾಣ ಹೆಚ್ಚಿರುತ್ತದೆ ಎಂದು ಗೊತ್ತಾಗಿದೆ.

ಇನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಅಥವಾ ಕಡಿಮೆ ಅವಧಿ ನಿದ್ದೆ ಮಾಡುವ ಮಹಿಳೆಯರಲ್ಲಿ ಇನ್ಸುಲಿನ್ ಹಾರ್ಮೋನ್ ಪ್ರತಿಕ್ರಿಯೆ ಹೆಚ್ಚು. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ನಿದ್ದೆಯ ಏರಿಳಿತದಿಂದ ಡಯಾಬಿಟಿಸ್ ಗೆ ಒಳಗಾಗುವವರ ಸಂಖ್ಯೆ ಕಡಿಮೆ.

ಮನುಷ್ಯ ಆರೋಗ್ಯವಾಗಿದ್ದಾಗಲೂ ನಿಗದಿಗಿಂತ ಹೆಚ್ಚು ಅಥವಾ ಕಡಿಮೆ ಅವಧಿ ನಿದ್ದೆ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದು ರುಟ್ಟರ್ಸ್ ಹೇಳುತ್ತಾರೆ. ನಮ್ಮ ದೇಹದ ಆರೋಗ್ಯ ಕಾಪಾಡಲು, ದೇಹಕ್ಕೆ ಶಕ್ತಿ ನೀಡಲು ನಿದ್ದೆ ಹೇಗೆ ಪ್ರಮುಖವಾಗಿದೆ ಎಂಬುದನ್ನು ಈ ಅಧ್ಯಯನ ಸಾರುತ್ತದೆ.

ಈ ಅಧ್ಯಯನ ಕ್ಲಿನಿಕಲ್ ಎಂಡೋಕ್ರಿನಾಲಜಿ ಅಂಡ್ ಮೆಟಬಾಲಿಸಮ್ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್

ಮೆಟ್ರೋ ರೈಲಿನಲ್ಲೇ ಮಹಿಳೆಯ ಪುಲ್‌ಅಪ್ಸ್‌ ಕಸರತ್ತು; ಹೊಸ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ!