ಇಂಗ್ಲೆಂಡ್ ಮೂಲದ ಪ್ಲಾಸ್ಟಿಕ್ ಸರ್ಜನ್ ಚಾರ್ಲ್ಸ್ ವಿವಾ. 
ಆರೋಗ್ಯ-ಜೀವನಶೈಲಿ

ಆಸಿಡ್ ದಾಳಿ, ಸುಟ್ಟಗಾಯಕ್ಕೆ ಉಚಿತ ಸರ್ಜರಿ ನೀಡುವ ಇಂಗ್ಲೆಂಡ್ ಮೂಲದ ವೈದ್ಯ

ವಿಶ್ವಾದ್ಯಂತ ಆಸಿಡ್ ದಾಳಿಗೆ ಬಲಿಯಾದವರ ವಿಕಾರ ಮತ್ತು ಸುಟ್ಟ ದೇಹಗಳನ್ನು ಉಚಿತವಾಗಿ ಸರ್ಜರಿ ಮಾಡುವುದರಲ್ಲಿ ದಶಕಗಳನ್ನು...

ನವದೆಹಲಿ: ವಿಶ್ವಾದ್ಯಂತ ಆಸಿಡ್ ದಾಳಿಗೆ ಬಲಿಯಾದವರ ವಿಕಾರ ಮತ್ತು ಸುಟ್ಟ ದೇಹಗಳನ್ನು ಉಚಿತವಾಗಿ ಸರ್ಜರಿ ಮಾಡುವುದರಲ್ಲಿ ದಶಕಗಳನ್ನು ಕಳೆದ ಇಂಗ್ಲೆಂಡ್ ಮೂಲದ ಪ್ಲಾಸ್ಟಿಕ್ ಸರ್ಜನ್ ಚಾರ್ಲ್ಸ್ ವಿವಾ, ಅಮಾನವೀಯ ಕೃತ್ಯ  ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ವಿವಾ, ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ ಎಚ್ಎಸ್)ಯ ನಿವೃತ್ತ ವೈದ್ಯರಾಗಿದ್ದು, ಶ್ರೀಲಂಕಾ ಮೂಲದವರು. ಶಸ್ತ್ರಚಿಕಿತ್ಸಕರು ಮತ್ತು ವೈದ್ಯರ ಸ್ವಯಂಸೇವಕ ತಂಡದೊಂದಿದೆ ಯುಕೆಯಿಂದ ಇತ್ತೀಚೆಗೆ ದೆಹಲಿಗೆ ಬಂದಿದ್ದು, ಆಸಿಡ್ ದಾಳಿ ಮತ್ತು ಬೆಂಕಿ ಅವಘಡ ಸಂತ್ರಸ್ತರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ವಿಶ್ವದ ಯಾವುದೇ ದೇಶಗಳಲ್ಲಿ ಆಸಿಡ್  ದಾಳಿಗೆ ತುತ್ತಾದವರು ಒಂದೇ ರೀತಿಯ ನೋವು ಅನುಭವಿಸುತ್ತಿರುತ್ತಾರೆ. ಆಸಿಡ್ ಎರಚಿದವರನ್ನು 10ರಿಂದ 15 ವರ್ಷಗಳವರೆಗೆ ಜೈಲಿನಲ್ಲಿ ಇರಿಸುವ ಕಾನೂನು ನಮ್ಮಲ್ಲಿದೆ. ಇದಕ್ಕಿಂತಲೂ ಪ್ರಬಲ ಕಾನೂನು ಅಗತ್ಯವಿದೆ ಎನ್ನುತ್ತಾರೆ ವಿವಾ.

ದೆಹಲಿ ಬಳಿಯ ಗುರಂಗಾವ್ ನ ಪ್ರತೀಕ್ಷಾ ಆಸ್ಪತ್ರೆಯಲ್ಲಿ ಬೆಂಕಿಯಿಂದ ಸುಟ್ಟ, ಆಸಿಡ್ ದಾಳಿಗೊಳಗಾದ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಸೀಳು ತುಟಿ ಸಂತ್ರಸ್ತರು ಸೇರಿದಂತೆ 30ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಇಂಗ್ಲೆಂಡಿನ ಈ ವೈದ್ಯರ ತಂಡ ಮಾಡಿದೆ. ಇವರ ಪ್ರಾಜೆಕ್ಟ್ ರಿವೈವ್ ಗೆ ಭಾರತ ಆಸಿಡ್ ಸರ್ವೈವರ್ ಫೌಂಡೇಶನ್ ಮತ್ತು ಸರ್ಕಾರೇತರ ಸಂಸ್ಥೆ ರಿತಿಂಜಲಿಯಿಂದ ಪ್ರೋತ್ಸಾಹ ಸಿಕ್ಕಿದೆ.

ವೈದ್ಯ ವೀವಾ ಅವರ ಪ್ರಕಾರ, ಎಲ್ಲಾ ರೀತಿಯ ಸುಟ್ಟ ಗಾಯಗಳನ್ನು ಗುಣಪಡಿಸಬಹುದು. ಆದರೆ ಜನರು ವಿದ್ಯಾವಂತರಾಗಬೇಕಷ್ಟೆ. ಇಂಗ್ಲೆಂಡಿನಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಕೇವಲ ದೊಡ್ಡವರಿಗೆ ಮಾತ್ರವಲ್ಲದೆ ಮಕ್ಕಳಿಗೂ ಈ ನಿಟ್ಟಿನಲ್ಲಿ ಅರಿವು ನೀಡಬಹುದು ಎನ್ನುತ್ತಾರೆ ಅವರು.

ಆಸ್ಫಿ ಎಂಬ ಸರ್ಕಾರೇತರ ಸಂಘಟನೆ ಕಳೆದ ವರ್ಷ ಜಾಗತಿಕ ಟ್ರಾಮಾ ಮಾಹಿತಿ ಕೇರ್ ಕಿಟ್ ನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಆಸಿಡ್ ದಾಳಿಗೆ ಒಳಗಾದವರು ಅಥವಾ ಸುಟ್ಟ ಗಾಯವಾದವರು ತಕ್ಷಣಕ್ಕೆ ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು, ಯಾವ ಕಾನೂನು ನೆರವು ಪಡೆದುಕೊಳ್ಳಬೇಕು ಎಂಬುದನ್ನು ನೀಡಲಾಗಿತ್ತು.

ನಮ್ಮ ದೇಶದಲ್ಲಿ ಉತ್ತರ ರಾಜ್ಯಗಳಲ್ಲಿ ಹೆಚ್ಚು ಆಸಿಡ್ ದಾಳಿ ಪ್ರಕರಣ ನಡೆಯುತ್ತವೆ. ಅಲ್ಲಿ ಶೇಕಡಾ 58ರಷ್ಟಿದ್ದರೆ, ಪೂರ್ವ ಪ್ರಾಂತ್ಯಗಳಲ್ಲಿ ಶೇಕಡಾ 18, ಪಶ್ಚಿಮದಲ್ಲಿ ಶೇಕಡಾ 16 ಮತ್ತು ದಕ್ಷಿಣದಲ್ಲಿ ಶೇಕಡಾ 8ರಷ್ಟಿರುತ್ತದೆ. ದಾಳಿಗೀಡಾದಾಗ ಮೊದಲಿಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಜನರು ತಿಳಿದಿರಬೇಕು. ರೋಗಿಗೆ ತಕ್ಷಣವೇ ಚಿಕಿತ್ಸೆ ನೀಡಿದರೆ ಫಲಿತಾಂಶ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಜನರಿಗೆ ಚಿಕಿತ್ಸೆ ಸಿಗುವುದು ನಿಧಾನವಾಗುತ್ತದೆ. ಇದು ಬೇರೆ ದೇಶಗಳಲ್ಲಿಯೂ ಸಾಮಾನ್ಯ. ಹಳ್ಳಿಯ ಜನರು ಇಂತಹ ಪರಿಸ್ಥಿತಿ ಎದುರಾದಾಗ ಏನು ಮಾಡಬೇಕೆಂದು ತಿಳಿದಿರುವುದಿಲ್ಲ ಎನ್ನುತ್ತಾರೆ ಚಾರ್ಲ್ಸ್ ವಿವಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್