ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ತಿನ್ನಬೇಕೆನಿಸುವ ಅಪಾಯ ಅಧಿಕ! 
ಆರೋಗ್ಯ-ಜೀವನಶೈಲಿ

ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ತಿನ್ನಬೇಕೆನಿಸುವ ಅಪಾಯ ಅಧಿಕ!

ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಅದೇನು ಉಪಯೋಗವಾಗುತ್ತದೋ ಇಲ್ಲವೋ ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂತಾಗುವುದಂತೂ ಖಂಡಿತಾ ಎನ್ನುತ್ತಿದೆ ಹೊಸ ಸಂಶೋಧನೆ.

ವಾಷಿಂಗ್ ಟನ್: ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಅದೇನು ಉಪಯೋಗವಾಗುತ್ತದೋ ಇಲ್ಲವೋ ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂತಾಗುವುದಂತೂ ಖಂಡಿತಾ ಎನ್ನುತ್ತಿದೆ ಹೊಸ ಸಂಶೋಧನೆ.
ಫ್ಯಾಷನ್ ಮ್ಯಾಗಜೀನ್ ಹಾಗೂ ಟಿವಿ ಸೇರಿದಂತೆ ಸಾಂಪ್ರದಾಯಿಕ ಮಾಧ್ಯಮಗಳು ಹೆಚ್ಚು ತಿನ್ನಬೇಕೆನಿಸುವ ಅಪಾಯ ಉಂಟು ಮಾಡುತ್ತವೆ ಎಂಬುದು ತಿಳಿದಿತ್ತು. ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ಮ್ಯಾಗಜೀನ್ ಹಾಗೂ ಟಿವಿಗಳ ದೃಶ್ಯಗಳು ಕಂಡುಬರುತ್ತಿದ್ದು ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಇರುವುದರಿಂದ ಯುವ ಜನತೆಯಲ್ಲಿ ತಿನ್ನುವ ವಿಷಯದಲ್ಲಿ ಹಾಗೂ ದೇಹದ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದುವ ಅಪಾಯ ಉಂಟಾಗಲು ಕಾರಣವಾಗುತ್ತಿದೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ.
ಈ ಸಂಶೋಧನೆಗಾಗಿ 19 -32 ವಯಸ್ಸಿನ ಸುಮಾರು 1 ,765  ಜನರನ್ನು 2014 ರಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದ್ದು ತಿನ್ನುವುದು ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಕುರಿತು ಪ್ರಶ್ನೆ ಮಾಡಲಾಗಿದೆ. ಇಷ್ಟು ಜನರಿಂದ ಬಂದ ಪ್ರತಿಕ್ರಿಯೆಯನ್ನು ಕೇವಲ ತಿನ್ನುವ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಂದ ಬಂದ ಪ್ರತಿಕ್ರಿಯೆಗೆ ಹೋಲಿಕೆ ಮಾಡಲಾಗಿದ್ದು ಎರಡೂ ಹೊಂದಾಣಿಕೆಯಾಗುತ್ತಿವೆ ಎಂದಿದ್ದಾರೆ ಸಂಶೋಧಕರು.
ಹೆಚ್ಚು ತಿನ್ನಬೇಕೆನಿಸುವ ಸಮಸ್ಯೆ ಹೆಚ್ಚು ಸಾಮಾಜಿಕ ಜಾಲತಾಣಗಳ ಬಳಕೆಗೆ ಉತ್ತೇಜನ ನೀಡುತ್ತಿದೆಯೋ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯೇ ತಿನ್ನುವ ವಿಷಯದಲ್ಲಿ ಅಸ್ಥಿರತೆಗೆ ಕಾರಣವಾಗುತ್ತಿದೆಯೋ ತಿಳಿಯುತ್ತಿಲ್ಲ ಅಥವಾ ಎರಡೂ ಒಂದಕ್ಕೆ ಒಂದು ಪೂರಕವಾಗಿರಬಹುದು ಎಂದು ಅಕಾಡೆಮಿ ಆಫ್ ನ್ಯೂಟ್ರೀಷನ್ ಹಾಗೂ ಡಯೆಟ್ ಕುರಿತ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ