ನವದೆಹಲಿ: ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಧೂಮಪಾನ ಮಾಡುವುದುರಿಂದ ದೇಹದ ಕೊಬ್ಬು ಕರಗಿ ತೂಕ ಕಡಿಮೆಯಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
ಇಲಿಯ ಮೇಲೆ ವಿಜ್ಞಾನಿಗಳು ನಡೆಸಿದ ಪ್ರಯೋಗದಿಂದ ಇದು ಸಾಬೀತಾಗಿದೆ, ನಿಕೋಟಿನ್ ಸೇವನೆಯಿಂದಾಗಿ ದೇಹದ ತೂಕ ಕಡಿಮೆಯಾಗುತ್ತದೆಂದು ಅವರು ತಿಳಿಸಿದ್ದಾರೆ.
ನಿಕೋಟಿನ್ ಪ್ರಮಾಣವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ನಿಕೋಟಿನ್ ಸೇವೆನೆ ದೇಹದ ತೂಕವನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಅತಿ ಹೆಚ್ಚಿನ ಪ್ರಮಾಣದ ನಿಕೋಟಿನ್ ಸೇವಿಸಿದ ಇಲಿಗಳ ದೇಹದ ತೂಕ 20 ದಿನಗಳಲ್ಲೇ ಹೆಚ್ಚಾಗಿತ್ತು, ಆದರೆ ಇನ್ನೂ ಕೆಲ ಇಲಿಗಳಿಗೆ ಕಡಿಮೆ ಪ್ರಮಾಣದಲ್ಲಿ ನಿಯಮಿತವಾಗಿ ನಿಕೋಟಿನ್ ನೀಡಿದ ಪರಿಣಾಮ ಅವುಗಳ ದೇಹದ ತೂಕ ಕಡಿಮೆಯಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನೂ ಸಿಗರೇಟ್ ನಲ್ಲಿರುವ ಕಡಿಮೆ ಪ್ರಮಾಣದ ನಿಕೋಟಿನ್ ತೂಕವನ್ನು ಕಡಿಮೆ ಮಾಡುತ್ತದೆ. ಆದರೆ ನಿಕೋಟಿನ್ ಪ್ರಮಾಣ ಹೆಚ್ಚಾದಂತೆ ತೂಕವು ಏರುತ್ತದೆ ಎಂಬುದು ಪ್ರಯೋಗದಿಂದ ಸಾಬೀತಾಗಿದೆ.