ಆರೋಗ್ಯ-ಜೀವನಶೈಲಿ

40 ರ ನಂತರ ಸೆಕ್ಸ್ ಜೀವನ ಸುಖಮಯವಾಗಿರುತ್ತದೆ: ಸಂಶೋಧನೆ

Shilpa D

ಟೊರಾಂಟೋ: ವಾಸ್ತವವಾಗಿ ವಯಸ್ಸು ನಲವತ್ತು ದಾಟಿದ ನಂತರ ಲೈಂಗಿಕ ಜೀವನ ಉತ್ತಮವಾಗಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಕೆನಡಾದ ಗುಲ್ಫ್ ವಿವಿ 40 ರಿಂದ 50 ವರ್ಷದ  ಸುಮಾರು 2.400 ಕೆನಡಿಯನ್ಸ್ ಮೇಲೆ ನಡೆಸಿದ ಸಂಶೋಧನೆಯಿಂದ ಈ ಮಾಹಿತಿ ಬಹಿರಂಗವಾಗಿದೆ.

40ರ ನಂತರ ತಮ್ಮ ಜೀವನದ ಲೈಂಗಿಕ ಸಂತೋಷಗಳು, ವರ್ತನೆ ಹಾಗೂ ನಡವಳಿಕೆಗಳು ಹಾಗೂ ಲೈಂಗಿಕ ಕ್ರಿಯೆ ಹೆಚ್ಚು ಸುಖಮಯವಾಗಿರುತ್ತದೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ಜೋಡಿಗಳು ತಮ್ಮ ಅಭಿಪ್ರಾಯ ತಿಳಿಸಿವೆ.

ವಯಸ್ಸು 40 ದಾಟಿದ ನಂತರ ಸೆಕ್ಸ್ ಜೀವನದಲ್ಲಿ ಆಸಕ್ತಿ ಇರುವುದಿಲ್ಲ, ಲೈಂಗಿಕ ಜೀವನ ಕಡಿಮೆ ಮಹತ್ವ ಪಡೆದುಕೊಳ್ಳುತ್ತದೆ, ಸೆಕ್ಸ್ ಜೀವನದ ಬಗ್ಗೆ ವರ್ತನೆ ಹಾಗೂ ಅದರ ನಡವಳಿಕೆಗಳ ಬಗ್ಗೆ ಆಸಕ್ತಿ ಇರುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ, ಇದು ತಪ್ಪು ತಿಳುವಳಿಕೆ ಎಂದು ಕೆನಡಾದ ವಿವಿ ಸಂಶೋಧಕ ತಿಳಿಸಿದ್ದಾರೆ.

40ರ ನಂತರದ ಲೈಂಗಿಕ ಜೀವನ ತಮಗೆ ಹೆಚ್ಚು ಸುಖ ಸಂತೋಷ ನೀಡಿದೆ ಎಂದು ಹೆಚ್ಚಿನ ಕೆನಡಿಯನ್ಸ್ ಹೇಳಿದ್ದಾರೆ. ಲೈಂಗಿಕ ಸುಖ ಪಡೆಯಲು ವಯಸ್ಸು ಮುಖ್ಯವಾಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

SCROLL FOR NEXT