ಸೊಳ್ಳೆ ಬ್ಯಾಟ್ 
ಆರೋಗ್ಯ

ಎಚ್ಚರ ಗ್ರಾಹಕರೇ, ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಡೇಂಜರ್!

ಭಾರತದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆ. ಅಂತೆ ಸೊಳ್ಳೆಗಳ ನಿರ್ಮೂಲನೆಗಾಗಿ ಸರ್ಕಾರಗಳು ಏನೆಲ್ಲಾ ಕಸರತ್ತು ನಡೆಸಿದರು ಪ್ರಯೋಜನವಾಗುತ್ತಿಲ್ಲ...

ಹೈದರಾಬಾದ್: ಭಾರತದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆ. ಅಂತೆ ಸೊಳ್ಳೆಗಳ ನಿರ್ಮೂಲನೆಗಾಗಿ ಸರ್ಕಾರಗಳು ಏನೆಲ್ಲಾ ಕಸರತ್ತು ನಡೆಸಿದರು ಪ್ರಯೋಜನವಾಗುತ್ತಿಲ್ಲ. ಈ ಮಧ್ಯೆ ಚೀನಾ ಅಗ್ಗದ ದರದಲ್ಲಿ ಸೊಳ್ಳೆ ಬ್ಯಾಟ್ ಗಳನ್ನು ತಯಾರಿಸಿದ್ದು ಈ ಬ್ಯಾಟ್ ಗಳು ಅಪಾಯಕಾರಿ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.  
ಚೀನಾ ನಿರ್ಮಿತ ಅಗ್ಗದ ಸೊಳ್ಳೆ ಬ್ಯಾಟುಗಳಲ್ಲಿ ಮಿತಿ ಮೀರಿದ ಸೀಸದ ಅಂಶವು ಪರಿಸರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ನ ಸೆಂಟರ್ ಫಾರ್ ಮಟೀರಿಯಲ್ಸ್ ಫಾರ್ ಇಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ. 
ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಮೀತಿ ಮೀರಿದ ಸೀಸದ ಅಂಶ ಇರುವುದು ದೃಢಪಟ್ಟಿದೆ. ಇನ್ನು ಯೂರೋಪ್ ಒಕ್ಕೂಟದ ತಜ್ಞರು ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಸೊಳ್ಳೆ ಬ್ಯಾಟ್ ಗಳಲ್ಲಿ ಸೀಸದ ಅಂಶವು ಗರಿಷ್ಠ 1000 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಇದರ ಅಂಶ 3000 ಪಿಪಿಎಂನಿಂದ 82 ಸಾವಿರ ಪಿಪಿಎಂವರೆಗೂ ಇದೆ ಎಂದು ತಿಳಿದುಬಂದಿದೆ. 
ಅಂಕಿ-ಅಂಶದ ಪ್ರಕಾರ ಫೆಬ್ರವರಿಯಿಂದ ನವೆಂಬರ್ 2016ರವರೆಗೆ ಚೀನಾದಿಂದ 2 ಲಕ್ಷ ಸೊಳ್ಳೆ ಬ್ಯಾಟ್ ಗಳನ್ನು ಭಾರತ ಆಮದು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT