ನವದೆಹಲಿ: ಕಳೆದ ವರ್ಷ ಇಡೀ ವಿಶ್ವವನ್ನು ದೊಡ್ಡದಾಗಿ ಕಾಡಿದ್ದ ಮಾರಣಾಂತಿಕ 'ಝಿಕಾ ವೈರಸ್' ಇದೀಗ ಭಾರತಕ್ಕೂ ಕಾಲಿಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
ಮಾರಣಾಂತಿಕ ಝಿಕಾ ವೈರಸ್ ಇದೇ ಮೊದಲ ಬಾರಿಗೆ ಭಾರತಕ್ಕೂ ಕಾಲಿಟ್ಟಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿ ಗರ್ಭಿಣಿ ಸೇರಿ ಮೂವರಿಗೆ ಸೋಂಕು ತಗುಲಿರುವ ಬಗ್ಗೆ ವರದಿಗಳಾಗಿವೆ.
ಕಳೆದ ಜನವರಿಯಲ್ಲೇ ಝಿಕಾ ವೈರಸ್ ತಗುಲಿರುವುದರ ಬಗ್ಗೆ ಭಾರತದ ಆರೋಗ್ಯ ಸಚಿವಾಲಯ ವರದಿ ಮಾಡಿತ್ತು. ಮೂರು ಪ್ರಯೋಗಾಲಯ ವರದಿಗಳು ವೈರಸ್ ಇರುವಿಕೆ ಖಚಿತಪಡಿಸಿದ್ದವು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಅಹಮದಾಬಾದ್ ನ ಬಾಪುನಗರ ಪ್ರದೇಶದಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ವೈರಸ್ ಗಳನ್ನು ತಪಾಸಣೆಗೆ ಕಳಿಸಿದಾಗ ದೇಶದ ವಿವಿಧ ಪ್ರಯೋಗಾಲಯಗಳು ವೈರಸ್ ಇರುವಿಕೆಯನ್ನು ದೃಢಪಡಿಸಿದೆ. ಈಗಷ್ಟೇ ನಮಗೆ ಈ ವಿಷಯ ತಿಳಿಸಿದಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಹಮದಾಬಾದ್ ನಗರಪಾಲಿಕೆಯ ಹಿರಿಯ ಕೀಟಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics