ಸಂಗ್ರಹ ಚಿತ್ರ 
ಆರೋಗ್ಯ

ಬೊಜ್ಜು ಸಮಸ್ಯೆಯಿಂದ ದೂರವಿರಲು ಆರೋಗ್ಯಕರ ಆಹಾರ ಸೇವನೆ ಅತಿ ಮುಖ್ಯ

ಜನರಲ್ಲಿ ಬೊಜ್ಜು ಸಮಸ್ಯೆ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೊಜ್ಜು ಸಮಸ್ಯೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ...

ಜನರಲ್ಲಿ ಬೊಜ್ಜು ಸಮಸ್ಯೆ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೊಜ್ಜು ಸಮಸ್ಯೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 
ಬೊಜ್ಜು ಸಮಸ್ಯೆಗಳಿದ್ದರೂ ಸಾಕಷ್ಟು ಮಂಡಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹಾಗೂ ಜಂಕ್ ಫುಡ್ ಗಳ ಸೇವನೆಯನ್ನು ಮಾತ್ರ ಕಡಿಮೆ ಮಾಡಿಲ್ಲ. ಇದರಿಂದ ಜನರಲ್ಲಿ ಬೊಜ್ಜು ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಟ್ಟೆಯ ಸುತ್ತಲೂ ಇರುವ ಬೊಜ್ಜು ದೇಹದ ಅನೇಕ ಗಂಭೀರ ಪರಿಣಾಮಗಳನ್ನು ಬೀರುತ್ತದೆ. 
ದೇಹದ ತೂಕ ಹೆಚ್ಚಾದಷ್ಟು ಮನುಷ್ಯನ ಹೃದಯ ರಕ್ತನಾಳದ ಕಾಯಿಲೆ, ಮಧುಮೇಹ, ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಸಮಸ್ಯೆಗಳು ಎದುರಾಗುತ್ತವೆ ಎಂದು ಡಾ. ಪಿಲ್ಲೋಲ ಅವರು ಹೇಳಿದ್ದಾರೆ. 
ಈ ರೋಗಗಳು ಪ್ರಮುಖವಾಗಿ ಒಳಗಾಂಗಗಳ ಅಡಿಪೋಸ್ ಅಂಗಾಂಶಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಸ್ನಾಯುಗಳ ಕೆಳಗೆ ಸಂಗ್ರಹವಾಗಿರುವ ಕೊಬ್ಬು ಆಂತರಿಕ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಸಿದ್ದಾರೆ. 
 ಆದರೆ, ಇಂತಹ ಬೊಜ್ಜು ಸಮಸ್ಯೆಯಿಂದ ದೂರವಿರಲು ಆರೋಗ್ಯಕರವಾದ ಆಹಾರ ಸೇವನೆ ಅತೀ ಮುಖ್ಯವಾಗುತ್ತದೆ. ಬೊಜ್ಜಿನಿಂದ ಬಳಲುತ್ತಿರುವವರು ಹೃದಯಕ್ಕೆ ಆರೋಗ್ಯಕರವಾದ ಡಯೆಟ್ ಅನುಸರಿಸಬೇಕು. ಅತೀ ಹೆಚ್ಚು ಫೈಬರ್ ಇರುವಂತಹ ಹಾಗೂ ಫ್ಯಾಟ್ ಗಳಿಲ್ಲದ ಆಹಾರವನ್ನು ಸೇವನೆ ಮಾಡುವುದರಿಂದ ಬೊಜ್ಜು ಸಮಸ್ಯೆಯಿಂದ ದೂರವಿರಬಹುದು ಎಂದು ಅಧ್ಯಯನವೊಂದು ಹೇಳಿದೆ. 
ಎಷ್ಟೋ ಮಂದಿ ಬೊಜ್ಜಿನಿಂದ ದೂರ ಉಳಿಯುವ ಸಲುವಾಗಿ ಆಹಾರವನ್ನೇ ಸೇವನೆ ಮಾಡದಿರುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದು, ಅತೀ ಮಿತವಾಗಿ ಆಹಾರ ಸೇವನೆ ಮಾಡುತ್ತಾರೆ. ಇದು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. 
ಬೊಜ್ಜನ್ನು ಅನೇಕ ರೀತಿಯಲ್ಲಿ ಅಳತೆ ಮಾಡಲಾಗುತ್ತದೆ. ಕಿಬ್ಬೊಟ್ಟೆಯ ಸ್ಥೂಲಕಾಯವನ್ನು ಮಹಿಳೆಯರಲ್ಲಿ 34 ಇಂಟುಗಳು ಹಾಗೂ ಪುರುಷರಲ್ಲಿ 40 ಅಂಗುಲಗಳ ಸೊಂಟದ ಸುತ್ತಳತೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಬೊಜ್ಜು ಸಮಸ್ಯೆ ಅಳತೆ ಮಾಡುವಾಗ ಸಾಮಾನ್ಯವಾದಿ ಕಿಬ್ಬೊಟ್ಟೆಯ ಭಾಗವನ್ನು ಅಳತೆ ಮಾಡಲಾಗುತ್ತದೆ. ಇದಲ್ಲದೆ. ಎಕ್ಸ್'ರೇ, ಸಿಟಿ/ಎಂಆರ್'ಐ ಸ್ಕ್ಯಾನ್ ಗಳನ್ನೂ ಅಳತೆ ಮಾಡಲಾಗುತ್ತದೆ. ವಯಸ್ಸಿಗೆ ತಕ್ಕಂತೆ ಕಿಬ್ಬೊಟ್ಟೆಯ ಬೊಜ್ಜನ್ನು ಅಳತೆ ಮಾಡಲಾಗುತ್ತದೆ. 
ಡಯೆಟ್ ನಿಂದ ಬೊಜ್ಜು ಸಮಸ್ಯೆಯಿಂದ ದೂರವಿರಬಹುದೇ? ಈ ಕುರಿತು ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಗಳಲ್ಲಿ ಸಾಕಷ್ಟು ಸಲಹೆಗಳನ್ನು ನೋಡಬಹುದು. ಸ್ಥೂಲಕಾಯ ಕಡಿಮೆ ಮಾಡಲು ಉಪವಾಸ ಮಾಡುವುದು, ಉತ್ತಮ ಪ್ರೊಟೀನ್ ಇರುವ ಆಹಾರ, ಪಾಲಿಯಾ ಆಹಾರ ಹಾಗೂ ಗ್ರೀನ್ ಟೀ ಗಳನ್ನು ಕುಡಿಯುವ ಸಲಹೆಗಳನ್ನು ನೀಡಲಾಗಿರುತ್ತದೆ. ಆದರೆ, ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ಪರಿಣಾಮಕಾರಿಯಾದ ಫಲಿತಾಂಶ ಪಡಂದಿರುವ ಯಾವುದೇ ವರದಿಗಳಾಗಿಲ್ಲ. 
ಬೊಜ್ಜು ಸಮಸ್ಯೆಯಿಂದ ದೂರವಿರಲು ಕೆಲ ಆಹಾರ ಪದಾರ್ಥಗಳು ಸಹಾಯಕವಾಗಿದ್ದು, ಇವು ಕೊಬ್ಬೆಟ್ಟೆಯ ಕೆಳಗೆ ಶೇಖರಣೆಯಾಗಿರುವ ಬೊಜ್ಜನ್ನು ಕಡಿಮೆಮಾಡುತ್ತವೆ. ನಾರಿನ ಪದಾರ್ಥಗಳು ಹೆಚ್ಚಾಗಿರುವ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಬೊಜ್ಜು ಸಮಸ್ಯೆಯಿಂದ ಕಡಿಮೆ ಮಾಡಿಕೊಳ್ಳಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT