ಆರೋಗ್ಯ

ಒತ್ತಡದಲ್ಲಿದ್ದಾಗ ಹೆಚ್ಚು ಆಹಾರ ಸೇವನೆ: ಈ ಅನಾರೋಗ್ಯಕರ ನಡವಳಿಕೆಗೆ ಇದುವೇ ಕಾರಣ!

Sumana Upadhyaya
ದಿನನಿತ್ಯದ ಜೀವನದಲ್ಲಿ ಜಂಜಾಟ, ಒತ್ತಡದಲ್ಲಿರುವಾಗ ಸಾಮಾನ್ಯವಾಗಿ ಏನಾದರೊಂದು ಆಹಾರ ಪದಾರ್ಥವನ್ನು ಬಾಯಿಗೆ ಹಾಕುತ್ತಾ ಆಡಿಸುತ್ತಿರುವುದು ವೈಜ್ಞಾನಿಕ ಸತ್ಯ. ಅದು ಕೂಡ ಹೆಚ್ಚು ಕ್ಯಾಲರಿ ಇರುವ ಆಹಾರಗಳಾಗಿದ್ದು ಅವು ಒತ್ತಡದಲ್ಲಿ ಒಂಥರಾ ಖುಷಿ ನೀಡುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕೆ ಇಂಗ್ಲಿಷ್ ನಲ್ಲಿ ಸ್ಟ್ರೆಸ್ ಈಟಿಂಗ್ (ಒತ್ತಡದಲ್ಲಿ ಆಹಾರ ಸೇವಿಸುವಿಕೆ) ಎನ್ನುತ್ತಾರೆ.
ಒತ್ತಡದಲ್ಲಿರುವಾಗ ಯಾವ ರೀತಿಯ ಆಹಾರಗಳನ್ನು ಸೇವಿಸುತ್ತೇವೆ, ಅದು ಎಷ್ಟು ಕ್ಯಾಲರಿ ಇವೆ, ಅದು ಆರೋಗ್ಯಕ್ಕೆ ಎಷ್ಟು ಪೂರಕ ಮತ್ತು ಮಾರಕ ಎಂದು ನೋಡಿಕೊಳ್ಳುವುದು ಮುಖ್ಯ ಎಂದು ಅಧ್ಯಯನ ಹೇಳುತ್ತದೆ.
ಸಂಶೋಧಕರು ಈ ಸಂಬಂಧ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಒತ್ತಡದಲ್ಲಿ ಅಧಿಕ ಕೊಬ್ಬು ಅಥವಾ ಕ್ಯಾಲರಿ ಇರುವ ಪದಾರ್ಥಗಳ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ಒತ್ತಡ ಮುಕ್ತ ವಾತಾವರಣದಲ್ಲಿ ಕಡಿಮೆ ಕ್ಯಾಲರಿಯ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ. ಮೆದುಳಿನಲ್ಲಿ ಇನ್ಸುಲಿನ್ ನಿಯಂತ್ರಣದ ಆಣ್ವಿಕ ಮಾರ್ಗದಿಂದ ದೇಹದ ತೂಕ ಹೆಚ್ಚುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ನಾವು ಒತ್ತಡದಲ್ಲಿರುವಾಗ ಯಾವ ಆಹಾರ ಸೇವಿಸುತ್ತೇವೆ ಎಂಬ ಅರಿವು ಇರಬೇಕಾಗುತ್ತದೆ. ಇದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು ಎಂದು ಸಂಶೋಧಕ ಹರ್ಬರ್ಟ್ ಹೆರ್ಜೊಗ್ ಹೇಳುತ್ತಾರೆ. ಈ ಅಧ್ಯಯನ ಸೆಲ್ ಮೆಟೊಬಾಲಿಸಮ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಒತ್ತಡದಲ್ಲಿ ಅಧಿಕ ಕ್ಯಾಲರಿಯುಕ್ತ ಆಹಾರ ಸೇವಿಸಿದರೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಬೇಗನೆ ಆಗುತ್ತದೆ. ಅದೇ ಆಹಾರವನ್ನು ಒತ್ತಡಮುಕ್ತ ವಾತಾವರಣದಲ್ಲಿ ಸೇವಿಸಿದರೆ ಕೊಬ್ಬು ಉಂಟಾಗುವುದಿಲ್ಲ ಎಂದು ಅಧ್ಯಯನದಿಂದ ತಿಳಿದುಬಂತು ಎನ್ನುತ್ತಾರೆ ಮುಖ್ಯ ಲೇಖಕ ಕೆನ್ನಿ ಚಿ ಪಿನ್ ಐಪಿ.
ತೂಕ ಹೆಚ್ಚಾಗುತ್ತಿರುವುದರ ಮಧ್ಯೆ ಎನ್ ಪಿವೈ ಎಂಬ ಮಾಲೆಕ್ಯೂಲ್ ಕಂಡುಬಂದಿದ್ದು ಒತ್ತಡದ ಸಂದರ್ಭದಲ್ಲಿ ಮೆದುಳಿ ಸಹಜವಾಗಿ ತಯಾರಿಸುತ್ತದೆ. ಅದು ಮನುಷ್ಯನಲ್ಲಿ ಮತ್ತು ಇತರ ಪ್ರಾಣಗಳಲ್ಲಿ ಮತ್ತಷ್ಟು ತಿನ್ನುವಂತೆ ಪ್ರೇರೇಪಿಸುತ್ತದೆ.
ಇನ್ಸುಲಿನ್ ದೇಹದಲ್ಲಿ ಅಸಮತೋಲವಾದರೆ ಹಲವು ಕಾಯಿಲೆಗಳು ಉಂಟಾಗುತ್ತವೆ ಎಂದು ಸಹ ಅಧ್ಯಯನದಿಂದ ತಿಳಿದುಬಂದಿದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ನಮ್ಮ ದೇಹ ಊಟವಾದ ನಂತರ ಇನ್ಸುಲಿನ್ ನ್ನು ಉತ್ಪತ್ತಿ ಮಾಡುತ್ತದೆ. ಅದು ರಕ್ತದಿಂದ ಗ್ಲುಕೋಸ್ ನ್ನು ಹೀರಿ ಮೆದುಳಿದ ಹೈಪೊಥಲಮಸ್ ಗೆ ಆಹಾರ ತಿನ್ನುವುದನ್ನು ನಿಲ್ಲಿಸುವಂತೆ ಸಂದೇಶ ಕಳುಹಿಸುತ್ತದೆ.
SCROLL FOR NEXT