ಸಂಗ್ರಹ ಚಿತ್ರ 
ಆರೋಗ್ಯ

ಮಕ್ಕಳನ್ನು ಕಾಡುವ ಅಡೆನಾಯ್ಡಿಟಿಸ್ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಮಗು ತುಂಬಾ ಆಲಸಿಯಾಗಿದ್ದರೆ, ಕಡೆಗಣಿಸದಿರಿ...!

ಪುಟ್ಟ ಮಕ್ಕಳು ತುಂಬಾ ವಿಚಿತ್ರವಾಗಿ ವರ್ತಿಸುವಾಗ, ಕಿವುಡು, ಮಾತು ಬಾರದೆ ಇರುವುದು ಅಥವಾ ತುಂಬಾ ಆಲಸಿಯಾಗಿದ್ದರೆ ಅದನ್ನು ಕಡೆಗಣಿಸಬಾರದು. ಪೋಷಕರು ಮಕ್ಕಳಲ್ಲಾಗುವ ಬದಲಾವಣೆಗಳ ಬಗ್ಗೆ ತದೇಕ ಚಿತ್ತದಿಂದ ಗಮನಹರಿಸಬೇಕು. ಏಕೆಂದರೆ ಈ ಬದಲಾವಣೆಗಳು ಅಡೆನಾಯ್ಡಿಟಿಸ್ ಕಾರಣವಾಗಿರುತ್ತದೆ.

ಪುಟ್ಟ ಮಕ್ಕಳು ತುಂಬಾ ವಿಚಿತ್ರವಾಗಿ ವರ್ತಿಸುವಾಗ, ಕಿವುಡು, ಮಾತು ಬಾರದೆ ಇರುವುದು ಅಥವಾ ತುಂಬಾ ಆಲಸಿಯಾಗಿದ್ದರೆ ಅದನ್ನು ಕಡೆಗಣಿಸಬಾರದು. ಪೋಷಕರು ಮಕ್ಕಳಲ್ಲಾಗುವ ಬದಲಾವಣೆಗಳ ಬಗ್ಗೆ ತದೇಕ ಚಿತ್ತದಿಂದ ಗಮನಹರಿಸಬೇಕು. ಏಕೆಂದರೆ ಈ ಬದಲಾವಣೆಗಳು ಅಡೆನಾಯ್ಡಿಟಿಸ್ ಕಾರಣವಾಗಿರುತ್ತದೆ.

ಗಂಟಲಿನ ಹಿಂದಿನ ಭಾಗದಲ್ಲಿ ಟಾನ್ಸಿಲ್ ಮತ್ತು ಅಡೆನಾಯ್ಡ್ಸ್ ಗ್ರಂಥಿಗಳು ಇದ್ದು, ಮೂಗಿನ ನೇರ ಕೆಳಭಾಗದಲ್ಲಿ ಇದೆ. ಈ ಗ್ರಂಥಿಗಳು ಮಕ್ಕಳ ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ವಿವಿಧ ರೀತಿಯ ಸೋಂಕಿನಿಂದ ಹೋರಾಡಲು ಇದು ತುಂಬಾ ಸಹಕಾರಿ ಆಗಿರುವುದು.

ಮಕ್ಕಳಲ್ಲಿ ಅಡೆನಾಯ್ಡ್ಸ್ ಬಿಳಿ ಕೋಶಗಳ ಮತ್ತು ಪ್ರತಿರೋಧಕಗಳನ್ನು ಸೃಷ್ಟಿ ಮಾಡುವುದು. ಇವುಗಳು ಗಾಳಿಯಲ್ಲಿ ಬರುವಂತಹ ಸೋಂಕಿನ ವಿರುದ್ಧ ಹೋರಾಡುವುದು. ವಯಸ್ಸಾಗುತ್ತಿರುವಂತೆ ಅಡೆನಾಯ್ಡ್ಸ್ ಗ್ರಂಥಿಗಳು ಹಾಗೆ ಸಂಕುಚಿತವಾಗುವುದು.

ಕೆಲವು ಮಕ್ಕಳಲ್ಲಿ ಅಡೆನಾಯ್ಡ್ ತುಂಬಾ ದೊಡ್ಡದಾಗಿರುವುದು. ಇದನ್ನು ದೀರ್ಘಕಾಲಿಕ ಸೋಂಕು ಕಾಡದಂತೆ ತಡೆಯಲು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗುತ್ತದೆ. ಮಕ್ಕಳಲ್ಲಿ ನಿದ್ರಾಹೀನತೆಗೆ ಉಬ್ಬಿರುವಂತಹ ಅಡೆನಾಯ್ಡ್ ಪ್ರಮುಖ ಕಾರಣವಾಗಿದೆ.

ಅಡೆನಾಯ್ಡ್ ಉಬ್ಬಿಕೊಂಡರೆ, ಅದರಿಂದ ವಾಯುನಾಳವು ಬ್ಲಾಕ್ ಆಗಿ, ಉಸಿರಾಟಕ್ಕೆ ತೊಂದರೆ ಆಗುವುದು. ಇದರಿಂದಾಗಿ ಮಕ್ಕಳಲ್ಲಿ ನಿದ್ರಾಹೀನತೆ ಸಮಸ್ಯೆಯು ಕಾಡಬಹುದು ಹಾಗೂ ಅವರು ಶೈಕ್ಷಣಿಕ ವಿಷಯದಲ್ಲಿ ಹಿಂದುಳಿಯಬಹುದು. ಮಕ್ಕಳಲ್ಲಿ ಅತಿಯಾಗಿ ನಿದ್ರಾಹೀನತೆ ಸಮಸ್ಯೆಯು ಕಂಡುಬರುತ್ತಲಿದ್ದರೆ, ಆಗ ನೀವು ಈ ಅಂಶಗಳನ್ನು ಗಮನಿಸಿ.

​ಮಕ್ಕಳಿಗೆ ಕಾಡುವ ಸಮಸ್ಯೆಗಳು...

  • ಅತಿಯಾಗಿ ಗೊರಕೆ
  • ತಲೆನೋವು
  • ಪದೇ ಪದೇ ಶೀತ, ಚಳಿ, ಅಸ್ತಮಾದ ಲಕ್ಷಣಗಳು
  • ನಿದ್ರೆಯ ಆವರ್ತನದಲ್ಲಿ ತೊಂದರೆ
  • ತುಂಬಾ ಚಟುವಟಿಕೆಯಿಂದ ಇರುವುದು ಕೂಡ ಒಂದು ಲಕ್ಷಣ. ಆದರೆ ದಿನದಲ್ಲಿ ಮಗು ನಿಶ್ಯಕ್ತಿಯಿಂದ ಬಳಲಬಹುದು ಮತ್ತು ನಿದ್ರೆ ಮಾಡಬಹುದು.
  • ಏಕಾಗ್ರತೆಗೆ ತೊಂದರೆ, ಕಿರಿಕಿರಿ
  • ಶಾಲೆಯಲ್ಲಿ ಕೆಟ್ಟ ಪ್ರದರ್ಶನ

ಪತ್ತೆ ಮಾಡುವುದು ಹೇಗೆ?
ಮಕ್ಕಳಲ್ಲಿ ಅಡೆನಾಯ್ಡ್ ಹಿಗ್ಗುವುದು ಒಂದುವರೆ ವಯಸ್ಸಿನಲ್ಲಿ ಆರಂಭವಾಗುವುದು. ಮಕ್ಕಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡುಬರುತ್ತಲಿದ್ದರೆ, ಆಗ ಪೋಷಕರು ಸರಿಯಾಗಿ ಎಕ್ಸ್ ರೇ ಮಾಡಬೇಕು ಮತ್ತು ಇದರಿಂದ ಅಡೆನಾಯ್ಡಿಟಿಸ್ ಸರಿಯಾಗಿ ಪತ್ತೆ ಮಾಡಬಹುದು.

ಅಡೆನಾಯ್ಡಿಟಿಸ್ಗೆ ಕಾರಣವೇನು?
ಸಾಮಾನ್ಯವಾಗಿ ಅಡೆನಾಯ್ಡ್ ಸೋಂಕಿನಿಂದ ಉಂಟಾಗುತ್ತವೆ. ಇದು ಮಕ್ಕಳಲ್ಲಿ ಎರಡು ವರ್ಷಗಳ ವಯಸ್ಸಿನಲ್ಲಿ ಕಾಣಿಸಿಕೊಂಡು 8 ವರ್ಷಗಳ ನಂತರ ಕಡಿಮೆಯಾಗುತ್ತವೆ. ಸಮಸ್ಯೆಗಳು ದೀರ್ಘಕಾಲಿಕವಾಗಿದ್ದರೆ, ಇದು ಸಮಸ್ಯೆಯಾಗಿ ತಲೆದೋರಲಿವೆ.

ಅಡೆನಾಯ್ಡಿಟಿಸ್ಗೆ ಯಾರಲ್ಲಿ ಹೆಚ್ಚು ಕಂಡು ಬರುತ್ತದೆ?

  • ಬಾಟಲ್ ಫೀಡ್
  • ಮಲಗಿರುವ ಭಂಗಿಯಲ್ಲಿ ಸ್ತನ್ಯಪಾನ
  • ಮೂಗು ಅಥವಾ ಗಂಟಲಿನ ಬಳಿ ಸೋಂಕು
  •  ಅಲರ್ಜಿಯಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ.

ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಎಂಟು ವರ್ಷ ವಯಸ್ಸಿನಲ್ಲಿ ಈ ಸಮಸ್ಯೆ ದೂರಾಗುತ್ತದೆ. ಉತ್ತಮ ನೈರ್ಮಲ್ಯವನ್ನು ಕಾಪಾಡುವುದರಿಂದ ಪುನರಾವರ್ತಿತ ಸೋಂಕನ್ನು ತಡೆಯಬಹುದು. ಸೌಮ್ಯ ಲಕ್ಷಗಳುಳ್ಳ ಮಕ್ಕಳಿಕೆ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ವೈದ್ಯರು ಇದಕ್ಕೆ ಮೂಗಿನ ಮೂಲಕ ನೀಡುವಂತಹ ಸ್ಟಿರಾಯ್ಡ್ ನ್ನು ಸೂಚಿಸಬಹುದು. ಇದರಿಂದ ಸ್ವಲ್ಪ ಪರಿಹಾರ ಸಿಗುತ್ತದೆ.. ಮೂರನೇ ಮತ್ತು ನಾಲ್ಕನೇ ದರ್ಜೆಯ ಅಡೆನಾಯ್ಡ್ಸ್ ಗೆ ಶಸ್ತ್ರಚಿಕಿತ್ಸೆಯು ಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT