ಓಂ ಕಾಳುಗಳು 
ಆರೋಗ್ಯ

Ajwain Benefits: ಆ್ಯಸಿಡಿಟಿ, ಮಲಬದ್ಧತೆ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೆ ಓಂಕಾಳು

ಓಂ ಕಾಳನ್ನು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತಲೇ ಇರುತ್ತೇವೆ. ಆದರೆ, ಈ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಸಾಕಷ್ಟು ಮಂದಿ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳಿಂದ ಬಳಲುತ್ತಿರುತ್ತಾರೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ...

ಓಂ ಕಾಳನ್ನು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತಲೇ ಇರುತ್ತೇವೆ. ಆದರೆ, ಈ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಸಾಕಷ್ಟು ಮಂದಿ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳಿಂದ ಬಳಲುತ್ತಿರುತ್ತಾರೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ, ಇದಕ್ಕಾಗಿ ಹಲವು ಔಷಧಗಳ ಮೊರೆ ಹೋಗಿರುತ್ತಾರೆ. ಆದರೆ, ಓಂ ಕಾಳುಗಳು ಇಂತಹ ಹುಣ್ಣುಗಳನ್ನು ವಾಸಿಮಾಡಲು ಪರಿಣಾಮಕಾರಿಯಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಓಂ ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆಯ ವಿಳಂಬವಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯ ತೊಂದರೆಗಳನ್ನು ಸರಿಮಾಡಿಕೊಳ್ಳಲು ಅರ್ಧ ಚಮಚದಷ್ಟು ಓಂಕಾಳು ಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

ಕಾಳುಗಳು ತೈವನ್ ಎಂಬ ಅಂಶವನ್ನು ಒಳಗೊಂಡಿದೆ. ಈ ಅಂಶವು ಕೀಟಾಣುಗಳ ಹಾಗೂ ಶಿಲಿಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಲವಾರು ಚರ್ಮ ಸಮಸ್ಯೆಗಳು ಶಿಲಿಂಧ್ರದ ಮುಖಾಂತರ ನಿಮಗೆ ಬರಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ನಿಮಿಷಗಳಲ್ಲಿ ಓಂಕಾಳು ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಕೆಲವು ಓಂ ಕಾಳುಗಳನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಅವುಗಳನ್ನು ನಿಮ್ಮ ಚರ್ಮ ಸಮಸ್ಯೆ ಇರುವ ಜಾಗಕ್ಕೆ ನೇರವಾಗಿ ಹಚ್ಚಬಹುದು. ನಿಮ್ಮ ಮೊಡವೆ ಅಥವಾ ಕಲೆಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಓಂ ಕಾಳುಗಳ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ನಂತೆ ತಯಾರಿಸಿ. ಇದನ್ನು ಮೊಡವೆಗಳು ಇರುವ ಜಾಗಕ್ಕೆ ಹಚ್ಚಿ 15 ನಿಮಿಷದ ವರೆಗೆ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಿ.

ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವುಗಳು ನಮ್ಮ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಸಂಭವಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಓಂ ಕಾಳುಗಳು ಸಹಾಯ ಮಾಡುತ್ತದೆ. ಜೀರ್ಣವಾಗದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಕೂಡ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರ ಮುಖಾಂತರ ಈ ತೊಂದರೆಯಿಂದ ನೀವು ಹೊರಬರಬಹುದು. ಓಂ ಕಾಳುಗಳನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಹಾಗೂ ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿ ಮಾಡಿಕೊಳ್ಳಬಹುದು. ಓಂ ಕಾಳುಗಳನ್ನು ಸ್ವಲ್ಪ ಹುರಿದು ನಂತರ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯಬಹುದು.

ಓಂಕಾಳು ಗಳಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ಕೂಡ ತೆಗೆಯಲು ಸಹಾಯ ಮಾಡುತ್ತದೆ. ಆರ್ಥ್ರೈಟಿಸ್ ನಿಂದ ಉಂಟಾದ ಮೂಳೆಗಳ ಬಳಿ ಇರುವ ಕೆಂಪು ಕಲೆಗಳು ಹಾಗೂ ನೋವನ್ನು ಇದು ಹೋಗಲಾಡಿಸುತ್ತದೆ. ಓಂ ಕಾಳುಗಳಲ್ಲಿ ಉರಿಯೂತ ಗಳನ್ನು ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್ ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಓಂ ಕಾಳುಗಳನ್ನು ನಿಂಬೆಯ ರಸದಲ್ಲಿ ನೆನೆಸಿ ಇದಕ್ಕೆ ಕಪ್ಪು ಉಪ್ಪನ್ನು ಬೆರೆಸಿ ಸೂರ್ಯನ ಕಿರಣಗಳ ಕೆಳಗೆ ಒಣಗಿಸಿದಾಗ ನಂತರದ ದಿನಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಇವುಗಳನ್ನು ಬಳಸಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಕಾಳುಗಳನ್ನು ಉಪಯೋಗಿಸುವ ವಿಧವೆಂದರೆ ನಿಮ್ಮ ಟೀ ಜೊತೆಗೆ ಓಂ ಕಾಳುಗಳನ್ನು ಬೇಯಿಸಿ ಕುಡಿಯಬಹುದು.

ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.

ಓಂ ಕಾಳು ನಮ್ಮ ದೇಹದ ಜೀರ್ಣಕಾರಿ ಅಂಗಗಳಾದ ಹೊಟ್ಟೆ, ಕರುಳು ಮತ್ತು ಹುಣ್ಣಿನಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಓಂ ಕಾಳು ಹೆಚ್ಚಾಗಿ ಆಮ್ಲೀಯತೆ, ಗ್ಯಾಸ್ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನೀವು ಅರ್ಧ ಟೀ ಚಮಚ ಓಂ ಕಾಳು ಜಗಿದು ರಸ ನುಂಗಬೇಕು ಅಥವಾ ನೀರಿನೊಂದಿಗೆ ಈ ಕಾಳನ್ನು ಕುದಿಸಿ ಕೂಡ ಕುಡಿಯಬಹುದು.

ಇಂದಿನ ಒತ್ತಡ ಹಾಗೂ ಆಹಾರ ಕ್ರಮಗಳಿಂದ ಬಹಳ ಚಿಕ್ಕ ವಯಸ್ಸಿಗೆ ಬಿಳಿಕೂದಲು ಆರಂಭವಾಗುತ್ತದೆ. ಇಂತಹ ಸಮಸ್ಯೆಗೆ ಹಾಗೂ ಕೂದಲು ಉದುರುವ ಸಮಸ್ಯೆಗೆ ಓಂ ಕಾಳುಗಳನ್ನು ಬಳಸಿಕೊಳ್ಳಬಹುದು.

ಬಿಳಿ ಕೂದಲನ್ನು ಹೋಗಲಾಡಿಸಬೇಕು ಎಂದುಕೊಂಡಿದ್ದರೆ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಓಂ ಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ನೀವು ಓಂ ಕಾಳನ್ನು ಹಲವು ವಿಧಗಳಲ್ಲಿ ಬಳಸಬಹುದು. ದಾಲ್, ಕರಿ ಅಥವಾ ಸಾಂಬಾರು ಮಾಡುವಾಗ ನೀವು ಓಂ ಕಾಳಿನ ಪುಡಿಯನ್ನು ಬಳಸಬಹುದು. ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಜೀರಿಗೆ ಬದಲು ಓಂ ಕಾಳು ಬಳಸಬಹುದು. ಇದನ್ನು ಮೌತ್ ಫ್ರೆಶ್ನರ್ ಆಗಿ ಕೂಡ ಬಳಸಬಹುದಾಗಿದೆ. ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT