ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ಧನಿಗೆ ಬೆಂಗಳೂರಿನ ಕೆ.ಆರ್. ರಸ್ತೆಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರವು “ಸೈಬರ್‌ಕ್ನೈಫ್ ರೇಡಿಯೊ” ಸರ್ಜರಿ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದೆ. ಪಾರ್ಕಿನ್ಸನ್ ಕಾಯಿಲೆಗೆ ಸೈಬರ್‌ಕ್ನೈಫ್ ಎಸ್ 7 ವ್ಯವಸ್ಥೆಯನ್ನು ಬಳಸಿ ಚಿಕಿತ್ಸೆ ನೀಡಿದ ಕರ್ನಾಟಕದ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಯೂ ಇದೆ.
ಡಾ. ಲೋಹಿತ್ ರೆಡ್ಡಿ, ಕ್ರಿಯಾತ್ಮಕ ರೇಡಿಯೊ ಸರ್ಜರಿಯ ಲಿಡ್ ವಿಕಿರಣದ ಆಂಕೊಲಾಜಿಸ್ಟ್, ಡಾ. ಕ್ರಿಥಿಕಾ ಸೆಕರ್, ಸಲಹೆಗಾರರು ವಿಕಿರಣ ಆಂಕೊಲಾಜಿಸ್ಟ್, ಡಾ.ಶಿವಕುಮಾರ್ ಸ್ವಾಮಿ, ವಿಕಿರಣಶಾಸ್ತ್ರದ ನಿರ್ದೇಶಕರು, ಡಾ. ಕುಮಾರ್ ಕಲ್ಲೂರ್, ಆಣ್ವಿಕ ಚಿತ್ರಣದ ನಿರ್ದೇಶಕರು ಹಾಗೂ ಡಾ.ಪಿಚಂಡಿ ಅಂಜೆನಿಯಾನ್, ಮುಖ್ಯ ಭೌತಶಾಸ್ತ್ರಜ್ಞ ತಂಡವು ಈ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
75 ವರ್ಷದ ವೃದ್ಧನು ಕಳೆದ ನಾಲ್ಕು ವರ್ಷದಿಂದ, ವಯೋಸಹಜ ನರವೈಜ್ಞಾನಿಕ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ಅವರ ಕೈನಡುಕದಿಂದ ಯಾವ ವಸ್ತುವನ್ನು ಸಹ ಸರಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ತಲೆ ಅಲುಗಾಡುವುದು, ಕೈನಡುಗುವುದು ಅತಿಯಾದ್ದರಿಂದ ಅವರ ದೈನಂದಿನ ಚಟುವಟಿಕೆ ಮೇಲೆ ತೀವ್ರ ಪರಿಣಾಮಬೀರತೊಡಗಿತು. ಎಷ್ಟೇ ಔಷಧ ತೆಗೆದುಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನ ಸಿಗಲಿಲ್ಲ. ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಲ್ಲಿ ಸೈಬರ್‌ಕ್ನೈಫ್ ಎಸ್ 7ಸೌಲಭ್ಯ ಇರುವುದು ತಿಳಿದ ಅವರು ಎಚ್‌ಸಿಜಿ ಆಸ್ಪತ್ರೆಗೆ ದಾಖಲಾದರು.
ಸೈಬರ್‌ಕ್ನೈಫ್ ಎಸ್ 7ಸೌಲಭ್ಯವು, ಕ್ಯಾನ್ಸರ್ ಗುಣಪಡಿಸಲು ಹಾಗೂ ಪತ್ತೆಹಚ್ಚಲು ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ಪಾರ್ಕಿನ್ಸನ್ ಕಾಯಿಲೆಯಂತಹ ಕ್ರಿಯಾತ್ಮಕ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹ ಬಳಸಬಹುದು. ಕೇವಲ 15 ನಿಮಿಷಗಳ ಕಾರ್ಯವಿಧಾನದಲ್ಲಿ ಯಾವುದೇ ಅರಿವಳಿಕೆ ಅಗತ್ಯವಿಲ್ಲದೇ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ.