Health Tips: ಊಟದ ಸಮಯದಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ತಿನ್ನುವುದೇ ಈಗಿನ ರೂಢಿ. ಆದರೆ ನಮ್ಮ ಅಜ್ಜ-ಅಜ್ಜಿಯರು ನೆಲದ ಮೇಲೆ ಚಾಪೆ ಹಾಸಿ ಚಕ್ಕಳಮಕ್ಕಳ ಕುಳಿತು ಊಟ ಮಾಡುತ್ತಿದ್ದರು. ಆದ್ರೆ, ಇದನ್ನು ಕೇವಲ ಸಂಪ್ರದಾಯ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಜೀರ್ಣಕ್ರಿಯೆ ಇಂದ ಹಿಡಿದು ಮನಸ್ಸಿನ ಶಾಂತಿಯವರೆಗೆ ಎಲ್ಲವೂ ಸುಧಾರಿಸುತ್ತದೆ. ಬನ್ನಿ ಆ ಪ್ರಯೋಜನಗಳೇನು ಎಂದು ನೋಡೋಣ.
ಜೀರ್ಣಕ್ರಿಯೆಗೆ ಬೆಸ್ಟ್
ನೆಲದ ಮೇಲೆ ಸುಖಾಸನ ಕುಳಿತು ತಿನ್ನುವಾಗ ನಾವು ಮುಂದೆ ಬಾಗಿ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಈ ಸ್ಥಿತಿಯನ್ನು ಈಟಿಂಗ್ ಪೊಸ್ಚರ್ ಎಂದು ಕರೆಯುತ್ತಾರೆ. ಹೀಗೆ ಕುಳಿತಾಗ ಹೊಟ್ಟೆಯ ಮೇಲೆ ಸ್ವಲ್ಪ ಒತ್ತಡ ಬೀಳುತ್ತದೆ. ಇದರಿಂದ ಜೀರ್ಣಾಂಗ ರಸಗಳು ಹೆಚ್ಚಾಗಿ ಸಂಚಾಹರಿಸುತ್ತವೆ. ಆಗ ಆಹಾರ ಬೇಗ ಜೀರ್ಣವಾಗುತ್ತದೆ ಮತ್ತು ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
ತೂಕ ನಿಯಂತ್ರಣ:
ನೆಲದ ಮೇಲೆ ಕುಳಿತು ತಿನ್ನುವಾಗ ಮನಸ್ಸು ಆಹಾರದ ಕಡೆಗೆ ಹೆಚ್ಚು ಗಮನ ನೀಡುತ್ತದೆ. ಟಿವಿ ಅಥವಾ ಮೊಬೈಲ್ ಇಲ್ಲದೆ ನೆಮ್ಮದಿಯಾಗಿ ತಿನ್ನುವುದರಿಂದ ಹೊಟ್ಟೆ ತುಂಬಿದ ಸೂಚನೆ ಮೆದುಳಿಗೆ ಬೇಗ ತಲುಪುತ್ತದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಡೆಯಬಹುದು. ಅದರಲ್ಲೂ, ನಿಧಾನವಾಗಿ ತಿನ್ನುವುದರಿಂದ ಕ್ಯಾಲೋರಿ ಸೇವನೆ ಕೂಡ ಕಡಿಮೆಯಾಗುತ್ತದೆ.
ಬೆನ್ನು ಮತ್ತು ಕೀಲುಗಳಿಗೆ ಒಳ್ಳೆಯದು
ನೆಲದ ಮೇಲೆ ಕಾಲು ಮಡಚಿ ಕುಳಿತಾಗ ಸೊಂಟ ಬೆನ್ನು ಮತ್ತು ಮೊಣಕಾಲಿನ ಕೀಲುಗಳು ಫ್ಲೆಕ್ಸಿಬಲ್ ಆಗುತ್ತವೆ. ಪ್ರತಿದಿನ 15 ರಿಂದ 20 ನಿಮಿಷ ಈ ರೀತಿ ಕುಳಿತರೆ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಾಗುತ್ತದೆ. ಬೆನ್ನು ನೋವು ಮತ್ತು ಕೀಲುಗಳ ಬಿಗಿತ ಕಡಿಮೆಯಾಗುತ್ತದೆ. ವಯಸ್ಸಾದಂತೆ ಮೂಳೆಗಳು ಗಟ್ಟಿಯಾಗಲು ಇದು ಸಹಾಯ ಮಾಡುತ್ತದೆ.
ರಕ್ತದ ಹರಿವು ಸುಧಾರಿಸುತ್ತದೆ
ಕುರ್ಚಿಯಲ್ಲಿ ಕಾಲು ನೇತು ಹಾಕಿ ಕುಳಿತಾಗ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಆದರೆ ನೆಲದ ಮೇಲೆ ಕಾಲು ಮಡಚಿ ಕುಳಿತಾಗ ರಕ್ತವು ಹೊಟ್ಟೆ ಮತ್ತು ಕಾಲಿನ ಕಡೆಗೆ ಸರಾಗವಾಗಿ ಹರಿಯುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ಕಾಲುಗಳು ಊದಿಕೊಳ್ಳುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
ಇದರೊಂದಿಗೆ, ನೆಲದ ಮೇಲೆ ಕುಳಿತು ಕುಟುಂಬದೊಂದಿಗೆ ಒಟ್ಟಿಗೆ ಊಟ ಮಾಡುವುದರಿಂದ ಬಾಂಧವ್ಯ ಹೆಚ್ಚುತ್ತದೆ. ನಿಧಾನವಾಗಿ ತಿನ್ನುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಆಹಾರದ ರುಚಿ ಚೆನ್ನಾಗಿ ಅರ್ಥವಾಗುತ್ತದೆ. ಇದು ಒಂದು ರೀತಿಯ ಮೈಂಡ್ ಫುಲ್ ಈಟಿಂಗ್ ಆಗುತ್ತದೆ.