Online Desk
ಆರೋಗ್ಯ

ಮಳೆಗಾಲದಲ್ಲಿ ಚಿಕನ್ vs ಮಟನ್: ಯಾವ ಮಾಂಸ ಆರೋಗ್ಯಕ್ಕೆ ಬೆಸ್ಟ್?

ಮಳೆಗಾಲ ಬಂದರೆ ಮಾಂಸಾಹಾರದ ಬೇಡಿಕೆ ಜಾಸ್ತಿಯಾಗುತ್ತದೆ. ಬಿಸಿ ಬಿಸಿ ಸೂಪ್, ಕರಿ ಇದ್ದರೆ ಮಳೆ ಆನಂದ ಡಬಲ್. ಆದರೆ ಈ ಕಾಲದಲ್ಲಿ ನಮ್ಮ ಜೀರ್ಣಶಕ್ತಿ ನಿಧಾನವಾಗಿರುತ್ತದೆ. ಹಾಗಾಗಿ ಚಿಕನ್ ತಿನ್ನಬೇಕಾ ಮಟನ್ ತಿನ್ನಬೇಕಾ ಎಂಬ ಗೊಂದಲ ಇರುತ್ತದೆ. ಯಾವುದು ನಿಮ್ಮ ಆರೋಗ್ಯಕ್ಕೆ ಸೂಕ್ತ ಎಂಬ ಸತ್ಯ ಇಲ್ಲಿದೆ.

ಚಿಕನ್ vs ಮಟನ್: ಹೊರಗೆ ಜಿಟಿಜಿಟಿಯಾಗಿ ಮಳೆ ಸುರಿಯುತ್ತಿದ್ದಾಗ, ಬಿಸಿ ಬಿಸಿ ನಾನ್-ವೆಜ್ ತಿನ್ನಬೇಕೆಂಬ ಆಸೆ ಬರೋದು ಸಹಜ. ಆದರೆ ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ನಿಧಾನವಾಗಿರುವುದರಿಂದ, ತಟ್ಟೆಯಲ್ಲಿ ಏನು ಇರುತ್ತದೆ ಎಂಬುದು ತುಂಬಾ ಮುಖ್ಯವಾಗುತ್ತದೆ! ಹಾಗಾದರೆ, ಮಳೆಗಾಲದ ಚುಮು ಚುಮು ಚಳಿಗೆ ಹಗುರವಾಗಿರುವ ಚಿಕನ್ ಒಳ್ಳೆಯದಾ? ಅಥವಾ ರಾಯಲ್ ಲುಕ್ ಕೊಡುವ ಮಟನ್ ಉತ್ತಮವೇ? ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಸೂಕ್ತ ಎಂಬ ನಿಜಾಂಶ ಇಲ್ಲಿದೆ...

ಚಿಕನ್ ಯಾಕೆ ಬೆಸ್ಟ್?

ಚಿಕನ್ ಲಘು ಪ್ರೋಟೀನ್. ಕೊಬ್ಬು ಕಡಿಮೆ ಇರುವುದರಿಂದ ಹೊಟ್ಟೆಗೆ ಭಾರವಾಗುವುದಿಲ್ಲ. ಮಳೆಗಾಲದ ಅಜೀರ್ಣ, ಗ್ಯಾಸ್ ಸಮಸ್ಯೆ ಇರೋರಿಗೆ ಇದು ಸೂಕ್ತ. ಜೊತೆಗೆ ಚಿಕನ್‌ನಲ್ಲಿರುವ ಜಿಂಕ್, ವಿಟಮಿನ್ ಬಿ6 ಮತ್ತು ಅಮೈನೋ ಆಸಿಡ್ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ, ಬಿಸಿ ಬಿಸಿ ಚಿಕನ್ ಸೂಪ್ ಕುಡಿದರೆ ನೆಗಡಿ, ಕೆಮ್ಮು, ಗಂಟಲು ನೋವು ತಕ್ಷಣ ಕಡಿಮೆಯಾಗುತ್ತದೆ. ಅದರಂತೆ, ತೂಕ ನೋಡಿಕೊಳ್ಳುವವರಿಗೆ ಚಿಕನ್ ಉತ್ತಮ ಆಯ್ಕೆ.

ಮಟನ್ ಯಾವಾಗ ಉತ್ತಮ?

ಮಟನ್ ದೇಹದಲ್ಲಿ ಉಷ್ಣತೆ ಹೆಚ್ಚಿಸುತ್ತದೆ. ಅದ್ರಂತೆ, ಮಳೆಗಾಲದಲ್ಲಿ ಚಳಿ ಇದ್ದಾಗ ಶಕ್ತಿ ಕೊಡುತ್ತದೆ. ಇನ್ನು, ಇದರಲ್ಲಿ ಕಬ್ಬಿಣ, ಪ್ರೋಟೀನ್, ವಿಟಮಿನ್ ಬಿ12 ಮತ್ತು ಜಿಂಕ್ ಮಟನ್‌ನಲ್ಲಿ ಅಧಿಕ. ಹಾಗಾಗಿ, ರಕ್ತಹೀನತೆ ಇರುವವರಿಗೆ ಒಳ್ಳೆಯದು. ಹಾಗಾಗಿ, ದೊಡ್ಡ ಕೆಲಸ ಮಾಡುವವರಿಗೆ ಮಟನ್ ತಕ್ಷಣ ಎನರ್ಜಿ ನೀಡುತ್ತದೆ.

ಮುಂದುವರೆದು, ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಹೆಚ್ಚಿರುವುದರಿಂದ ಮಾಂಸವನ್ನು ಚೆನ್ನಾಗಿ ಬೇಯಿಸಿ ಮಾತ್ರ ತಿನ್ನಬೇಕು. ಅರ್ಧಂಬರ್ಧ ಬೆಂದ ಮಾಂಸ ಸೇವಿಸಬೇಡಿ. ಹಾಗಾಗಿಯೇ, ಗೊತ್ತಿರುವವರ ಅಂಗಡಿಗಳಿಂದ ಮಾತ್ರವೇ ತಾಜಾ ಮಾಂಸವನ್ನು ಖರೀದಿಸಿ. ಜೊತೆಗೆ ಮಳೆಗಾಲದಲ್ಲಿ ಅತಿಯಾದ ಎಣ್ಣೆ, ಖಾರ ಅಥವಾ ಹೆವಿ ಮಸಾಲೆ ಹಾಕಿ ಮಾಡಿದ ಗ್ರೇವಿಗಳಿಗಿಂತ ಲೈಟ್ ಆಗಿ ಬೇಯಿಸಿದ ಅಥವಾ ಸೂಪ್ ಮಾದರಿಯ ಆಹಾರ ಉತ್ತಮ.

ಒಟ್ಟಾರೆಯಾಗಿ ಹೇಳುವುದಾದರೆ, ಮಳೆಗಾಲದ ಆರೋಗ್ಯಕ್ಕೆ ಚಿಕನ್ ಅತ್ಯುತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ಒಂದು ವೇಳೆ ನೀವು ಮಟನ್ ಪ್ರಿಯರಾಗಿದ್ದರೆ, ಮಳೆಗಾಲದಲ್ಲಿ ಅದರ ಸೇವನೆಯನ್ನು ಮಿತಿಗೊಳಿಸಿ, ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದೂತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!

ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ