ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಶಿವರಾಮ ಕಾಸರಗೋಡಿಗೆ ಪುರಂದರಾನುಗ್ರಹ ಪ್ರಶಸ್ತಿ

Parashurama
Updated On : 18 Feb 2013, 12:10 pm

ಕಾಸರಗೋಡು: ಇಲ್ಲಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೇರಳ ರಾಜ್ಯ ದಾಸ ಸಾಹಿತ್ಯ ಪ್ರಚಾರಕ್ ಶಿವರಾಮ ಕಾಸರಗೋಡು ಅವರಿಗೆ ತಿರುಮಲ ತಿರುಪತಿ ದೇವಸ್ಥಾನಂ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಪ್ರತಿಷ್ಠಿತ ಶ್ರೀ ಪುರಂದರಾನುಗ್ರಹ ಪ್ರಶಸ್ತಿಯನ್ನು ಮಂತ್ರಾಲಯ ಪೀಠಾಧಿಪತಿ ಶ್ರೀ ಸುಯತೀಂದ್ರ ಶ್ರೀಪಾದರು ಪ್ರದಾನ ಮಾಡಿದರು.
ಈಚೆಗೆ ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನ ಮಂಟಪದಲ್ಲಿ ನಡೆದ ಪುರಂದರದಾಸ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ, ಕೇರಳ, ಮಹರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಟಿ.ಟಿ.ಡಿ. ದಾಸ ಸಾಹಿತ್ಯ ಪ್ರಾಜೆಕ್ಟ್‌ನಲ್ಲಿ ನೋಂದಣಿಗೊಂಡಿರುವ ಸುಮಾರು ಎರಡು ಸಾವಿರ ಭಜನಾ ಮಂಡಳಿಗಳ ಮೂಲಕ ದಾಸ ಸಾಹಿತ್ಯವನ್ನು ಪ್ರಚಾರ ಪಡಿಸಿ, ಧಾರ್ಮಿಕ ಕೇಂದ್ರಗಳಲ್ಲಿ ನಿರಂತರ ಸಮೂಹ ಸಂಕೀರ್ತನಾ ಗಾಯನ ಕಾರ್ಯಕ್ರಮ ನಡೆಸಿ, ಪ್ರೋತ್ಸಾಹಿಸಿದ ಎಂಟು ಮಂದಿಗೆ ಈ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಶಿವರಾಮ ಕಾಸರಗೋಡು ಅವರೂ ಸಹ ಕೇರಳದಲ್ಲಿ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿನ 23 ವರ್ಷದ ಸಾಧನೆ ಮತ್ತು ಕಳೆದ ಐದು ವರ್ಷಗಳಲ್ಲಿ ಕೇರಳ ಪ್ರಾಂತ್ಯದ ಕಾಸರಗೋಡಿನಲ್ಲಿ ತಿರುಪತಿ ತಿರುಮಲಂ ದೇವಸ್ಥಾನಂ ದಾಸ ಸಾಹಿತ್ಯ ಪ್ರಾಜೆಕ್ಟ್ ಮಾರ್ಗದರ್ಶನದಲ್ಲಿ ಭಜನಾ ಮಂಡಳಿಗಳ ನೋಂದಣಿ ಅಭಿಯಾನ ಸೇರಿದಂತೆ ಕಲಾವಿದರ ಪ್ರೋತ್ಸಾಹಕ್ಕೆ ಕಾರ್ಯಕ್ರಮಗಳನ್ನು ರೂಪಿಸಿದ್ದಕ್ಕೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಉಡುಪಿಯ ಶ್ರೀ ಪಾಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ತಿರುಮಲ ತಿರುಪತಿ ದೇವಸ್ಥಾನ ಜಂಟಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸರಾಜು, ತಿರುಮಲ ತಿರುಪತಿ ದೇವಸ್ಥಾನಂ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಪಿ.ಆರ್. ಆನಂದ ತೀರ್ಥಾಚಾರ್ಯ ಪಗಡಾಲ್, ಉಡುಪಿಯ ಪುತ್ತಿಗೆ ಮಠದ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ವಿದ್ವಾನ್ ಬಿ. ಗೋಪಾಲಾಚಾರ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement