ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಮುಂಬೈ ಕನ್ನಡಿಗ ಪತ್ರಕರ್ತ ಸಂಘದಿಂದ ಪತ್ರಿಕಾ ದಿನಾಚರಣೆ

Vishwanath S
Updated On : 8 Jul 2013, 1:28 am

ಮುಂಬೈ: ಮುಂಬೈ ಕನ್ನಡಿಗ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ಪತ್ರಿಕಾ ದಿನಾಚರಣೆಯನ್ನು ಮುಂಬೈಯಲ್ಲಿ ಆಚರಿಸಲಾಯಿತು.
ಕನ್ನಡಿಗ ಉದ್ಯಮಿ ಸುರೇಂದ್ರ ಎ. ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಂಬೈಯಲ್ಲಿ ಕನ್ನಡ ಪತ್ರಕರ್ತರಿಗೊಂದು ಭವನದ ಅಗತ್ಯವಿದೆ. ಇದರ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕೆಂದರು. ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.   ಅತಿಥಿಗಳಾಗಿ ಬಿ.ಆರ್. ರಾವ್ ಅವರು ಪತ್ರಕರ್ತರ ಭವನದ ಯೋಜನಾ ನೆರವು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಚಲನಚಿತ್ರ ನಿರ್ಮಾಪಕ ಗ್ರೇಗೊರಿ ಡಿ'ಅಲ್ಮೇಡಾ, ಪತ್ರಕರ್ತರ ಸಂಘದ ಸಲಹೆಗಾರರಾದ ನ್ಯಾಯವಾದಿ ಕೆ.ಪಿ. ಪ್ರಕಾಶ್ ಎಲ್. ಶೆಟ್ಟಿ ಮತ್ತು ಲೆಕ್ಕ ಪರಿಶೋಧಕ ಐ.ಆರ್. ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಡಾ.ಆರ್.ಕೆ. ಶೆಟ್ಟಿ ಅವರು ಸಂಘದ ಸದಸ್ಯರಿಗೆ ಸದಸ್ಯತ್ವ ಗುರುತು ಪತ್ರ ಹಸ್ತಾಂತರಿಸಿದರು.  ಸಂಘದ ಸದಸ್ಯ ವಸಂತ ಎಸ್. ಕಲಕೋಟಿ, ಸಲಹಾ ಸಮಿತಿಯ ಸದಸ್ಯರಾದ ಡಾ. ಸುನೀತಾ ಎಂ. ಶೆಟ್ಟಿ, ಬಿ. ಮೋಹಿದ್ದೀನ್ ಮಂಡ್ಕೂರು ಹಾಗೂ 'ಬಂಟರವಾಣಿ' ಮಾಸಿಕದ ಗೌರವ ಸಂಪಾದಕ ರತ್ನಾಕರ್ ಆರ್. ಶೆಟ್ಟಿ, ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, 'ದಿವೋ ಕೊಂಕಣಿ' ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ಅಕ್ಷಯ ಮಾಸಿಕದ ಸತೀಶ್ ಎನ್. ಬಂಗೇರಾ, ಸಂಬಂಧ ಮಾಸಿಕದ ಸಂಪಾದಕ ಶ್ರೀನಿವಾಸ್ ಜೋಕಟ್ಟೆ, ಇದ್ದರು.  ಉಪಾಧ್ಯಕ್ಷ ದಯಾ ಸಾಗರ್ ಚೌಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹರೀಶ್ ಕೆ. ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌ. ಕೋಶಾಧಿಕಾರಿ ಜಿ.ಪಿ. ಕುಸುಮಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement