ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಡಾ. ಕಿಞಣ್ಣ ರೈ ಜನ್ಮದಿನ ಹಲವು ಕಾರ್ಯಕ್ರಮ

Mainashree
Updated On : 14 Jul 2013, 10:07 am

ಕಾಸರಗೋಡು:  ನಾಡೋಜ ಡಾ. ಕಯ್ಯಾರ ಕಿಞಣ್ಣರೈ ಅವರು (8 ಜೂನ್ 2014-15) ನೂರು ವರ್ಷ ಪೂರೈಸುತ್ತಿರುವ ಸಾರ್ಥಕ ಜೀವನದ ಜನ್ಮಶತಮಾನೋತ್ಸವ ವರ್ಷಾಚರಣೆಯ ಪ್ರಯುಕ್ತ ನೂರು ಕಾರ್ಯಕ್ರಮಗಳನ್ನು ಅಖಿಲ ಭಾರತ ಮಟ್ಟದಲ್ಲಿ ಹಮ್ಮಿಕೊಳ್ಳಲು ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯದಲ್ಲಿರುವ ವಿವಿಯ ಕನ್ನಡ ವಿಭಾಗ, ಶಾಲಾ ಕಾಲೇಜುಗಳಲ್ಲಿ ಕಿಞಣ್ಣರೈ ಶತಮಾನೋತ್ಸವ-ಸಾಹಿತ್ಯೋತ್ಸವ ಸರಣಿ ಕಾರ್ಯಕ್ರಮಗಳು ಮತ್ತು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘಗಳು, ಕನ್ನಡ, ತುಳು ಸಂಘಟನೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ, ಜಿಲ್ಲಾ ಘಟಕ ಮತ್ತು ಗಡಿನಾಡ ಘಟಕಗಳ ಆಶ್ರಯದಲ್ಲಿ ವಿಶೇಷೋಪನ್ಯಾಸ, ಕಯ್ಯಾರರ ಸಾಹಿತ್ಯ ಗೋಷ್ಠಿ, ಕಯ್ಯಾರರ ಕಾವ್ಯ, ಕರ್ನಾಟಕ ವಿಲೀನೀಕರಣ ಮತ್ತು ಕಾಸರಗೋಡು ವಿಲೀನೀಕರಣ ಕುರಿತು ಬೇರೆ ಬೇರೆ ಜಿಲ್ಲೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಮ್ಮಟ, ಕಾವ್ಯ, ಗಾಯನ, ಹೋರಾಟದ ಪರಿಣಾಮ ಕುರಿತು ಚರ್ಚಾ ಗೋಷ್ಠಿ, ವಿಚಾರಗೋಷ್ಠಿ, ಕಯ್ಯಾರರ ಸಮಗ್ರ ಕೃತಿ ಸಂಪುಟ ಪ್ರಕಟಣೆ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದಿಂದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. ಕೇರಳ-ಕರ್ನಾಟಕ ಗಡಿ ಸಮಸ್ಯೆಯ ಪರಿಹಾರಕ್ಕಾಗಿ ಮಹಾಜನ ಆಯೋಗದ ವರದಿ ಜಾರಿಗಾಗಿ ಹೋರಾಟ ನಡೆಸಿದ ಕಯ್ಯಾರರ ನಿವಾಸಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಹಿತ ಎಲ್ಲಾ ಸಚಿವರು, ಶಾಸಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಕಯ್ಯಾರರ ಸೇವೆಗಾಗಿ ಕರ್ನಾಟಕ ರತ್ನ, ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿ ಗೌರವಿಸ ಬೇಕಾಗಿ ಮನವಿ ಮಾಡಲಾಗಿದೆ.
ಕಾಸರಗೋಡಿನ ಬದಿಯಡ್ಕ ಪೆರಿಡಾಲದಲ್ಲಿ 2 ಕೋಟಿ ರುಪಾಯಿ ವೆಚ್ಚದಲ್ಲಿ ಶತಮಾನೋತ್ಸವ ಭವನ, ಆಧುನಿಕ ಸುಸಜ್ಜಿತ ಗ್ರಂಥ ಭಂಡಾರ, ಬದಿಯಡ್ಕದಲ್ಲಿ ಕಯ್ಯಾರರ ಆಳೆತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು, ಕಯ್ಯಾರರ ಕವಿತಾ ಕುಟೀರ ನಿವಾಸವನ್ನು ಕನ್ನಡನಾಡಿನ ಐತಿಹಾಸಿಕ ಸ್ಥಳವನ್ನಾಗಿ ಘೋಷಿಸಿ ಪುನರ್ ನವೀಕರಿಸಲು ಕರ್ನಾಟಕ ಸರ್ಕಾರ ಒಂದು ಕೋಟಿ ಮೊತ್ತವನ್ನು ಬಿಡುಗಡೆ ಮಾಡಲು, ಕಯ್ಯಾರರ ಸಮಗ್ರ ಸಾಹಿತ್ಯ ಕೃತಿಗಳ ಸಂಪುಟವನ್ನು ಪುನರ್ ಪ್ರಕಟಿಸಲು ಕೇಳಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement