ಭಾಷೆಯ ಗೋಡೆಗಳನ್ನು ಯಾರೂ ಹಾಕಬೇಡಿ: ಶಾ.ಮಂ. ಕೃಷ್ಣರಾವ್ ಸಲಹೆ
ಮುಂಬಯಿ: ಭಾಷೆಗಳ ಕಿಟಕಿಗಳನ್ನು ತೆರೆದಿಟ್ಟುಕೊಳ್ಳುವುದು ಇಂದಿನ ಅಗತ್ಯ. ಭಾಷೆಯೊಂದರ ಕಿಟಕಿಯಿಂದ ಬರುವ ಹವೆ ಹಾಗೂ ಬೆಳಕು ನಮಗೆ ಸಿಗಬೇಕು. ಆಗಲೇ ಸಾಂಸ್ಕೃತಿಕವಾಗಿ, ಮಾನವೀಯತೆಯಿಂದ ಮನುಷ್ಯ ಸಂಸ್ಕೃತಿ ಬೆಳೆಯುತ್ತದೆ. ಭಾಷೆ- ಭಾಷೆಗಳ ಜೊತೆ ಸಂಬಂಧ ಬೆಳೆಸಿದಾಗಲೇ ನಾವು ದೊಡ್ಡವರೆನಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ಪತ್ರಕರ್ತ, ಅನುವಾದಕ ಶಾ.ಮಂ. ಕೃಷ್ಣರಾವ್ ಹೇಳಿದ್ದಾರೆ. ಕರ್ನಾಟಕ ಸಂಘ, ಮುಂಬಯಿಯಲ್ಲಿ ಫೆ.25ರಂದು ಹಮ್ಮಿಕೊಂಡಿದ್ದ 2012ರ 'ವರದರಾಜ ಆದ್ಯ ಸ್ಮಾರಕ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಪತ್ರಕರ್ತ ಮಿಲಿಂದ್ ಬಲ್ಲಾಳ್ ಮಾತನಾಡುತ್ತಾ ಕನ್ನಡ -ಮರಾಠಿ ಗಡಿ ಕಲಹ ಅಪ್ರಸ್ತುತ. ಸಾಹಿತ್ಯವು ನಮ್ಮ ಸಂಬಂಧವನ್ನು ಬೆಳೆಸುತ್ತದೆ. ಅನುವಾದ ಅಂದರೆ ಅದು ಸಾಹಿತ್ಯ ಕ್ಷೇತ್ರದಲ್ಲಿ ಇಂಜಿನಿಯರ್ ಕಲಿತಂತೆ ಎಂದು ನುಡಿದರು.
ಗೌ. ಅತಿಥಿ ಡಾ. ಎಂ.ಆರ್. ಕುಡ್ವ ಮುಲ್ಕಿ ಮಾತನಾಡಿ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತನ್ನ ಪರವಾಗಿ ಒಂದು ಲಕ್ಷ ರು. ದೇಣಿಗೆ ನೀಡುವುದಾಗಿ ಘೋಷಿಸಿದರು. ಈ ವೇಳೆ ಶಾ.ಮಂ. ಕೃಷ್ಣರಾವ್ ಅವರಿಗೆ ವೇದಿಕೆಯ ಗಣ್ಯರು ಹನ್ನೊಂದು ಸಾವಿರ ನಗದು, ಪ್ರಶಸ್ತಿ ನೀಡಿ ಸನ್ಮಾನಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.