ಪುರಂದರದಾಸರು ಜೀವನದ ಮಾರ್ಗದರ್ಶಕರು: ಡಾ. ಶಣೈ
ಮುಂಬಯಿ: ಶ್ರೀ ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹ. ಅವರು ರಚಿಸಿದ ಕೃತಿಗಳಲ್ಲಿ ಸಾಹಿತ್ಯ, ಸಂಗೀತ, ಅಧ್ಯಾತ್ಮ, ಸಮಾಜ ಸುಧಾರಣೆಯ ಅಂಶಗಳಿವೆ. ಅವರು ಜನ ಜೀವನದ ಮಾರ್ಗದರ್ಶಕರು. ಅಂಥಹ ಸಂತರ ಆರಾಧನೆಯನ್ನು ಮಾಡುವ ಮೂಲಕ ಇಂದಿನ ಯುವ ಜನಾಂಗಕ್ಕೆ ಉತ್ತಮ ಸಂಸ್ಕಾರವನ್ನು ಕೊಡುತ್ತಿರುವ ಮುಂಬೈ ಕನ್ನಡ ಸಂಘವು ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಭಾರತ ಸಂಚಾರ ನಿಗಮ (ಲಿ) ರಾಯಗಢ್ ಜಿಲ್ಲೆಯ ಹಿರಿಯ ಮಹಾಪ್ರಬಂಧಕ ಡಾ. ವಿ.ಎಸ್. ಶಣೈ ಹೇಳಿದರು.
ಅವರು ಮುಂಬೈ ಕನ್ನಡ ಸಂಘದವರು ಏರ್ಪಡಿಸಿದ್ದ ಶ್ರೀ ಪುರಂದರದಾಸರ 449ನೇ ಆರಾಧನಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ಅಧ್ಯಕ್ಷ ಗುರುರಾಜ ಎಸ್. ನಾಯಕರು ಸ್ವಾಗತಿಸಿ ಸಂಘದ ಚಟುವಟಿಕೆ ಮತ್ತು ಸಾಧನೆಗಳನ್ನು ವಿವರಿಸಿದರು. ಸಂಘದ ಉಪಾಧ್ಯಕ್ಷ ಎನ್.ಆರ್. ರಾವ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಶ್ರೀ ಪುರಂದರದಾಸರ ದೇವರನಾಮ ಹಾಡುವ ಸ್ಪರ್ಧೆಯ ತೀರ್ಪುಗಾರರಾಗಿ ಬಂದ ಬಾಲಕೃಷ್ಣ ಎನ್. ನಾಯಕ್, ಶ್ರೀಮತಿ ಮಾಯಾ ಸಾಯಿಪ್ರಕಾಶ್ ನಾಯಕ್ ಮತ್ತು ವಿದ್ವಾನ್ ಟಿ.ಎನ್. ಅಶೋಕ್ರವರ ಪರಿಚಯವನ್ನು ಸಂಘದ ಗೌ. ಪ್ರಧಾನ ಕಾರ್ಯದರ್ಶಿ ಬಿ. ನಾಗಭೂಷಣ್ ಮಾಡಿದ ರು.
ಮುಖ್ಯ ಅತಿಥಿಗಳಿಗೆ ಮತ್ತು ತೀರ್ಪುಗಾರರಿಗೆ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಪುಷ್ಪಗುಚ್ಛ ನೀಡಲಾಯಿತು. ವಿದ್ವಾನ್ ಅಶೋಕ್ ಟಿ.ಎನ್. ಸ್ಪರ್ಧಿಗಳಿಗೆ ಹಿತವಚನ ನೀಡಿದರು. ಬೆಂಗಳೂರಿನ ಕಲಾವಿದೆ ಕಿಶೋರಿ ಅಧಿತಿ ಪ್ರಹ್ಲಾದ ಒಂದೂವರೆ ಗಂಟೆಗಳ ಕಾಲ ಶ್ರೀ ಪುರಂದರದಾಸರ ಕೃತಿಗಳಲ್ಲೇ ಸಂಗೀತ ಕಚೇರಿ ಮಾಡಿ ಸಭಿಕರ ಮೆಚ್ಚುಗೆ ಪಡೆದಳು. ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಕೋ ಆಪರೇಟಿವ್ ಬ್ಯಾಂಕ್ ಮುಂಬಯಿ ಲಿ, ಮೇ. ಸಾರಸ್ವತ ಕೋಆಪರೇಟಿವ್ ಬ್ಯಾಂಕ್ ಲಿ. ಮುಂಬೈ, ಎಚ್.ಎಸ್. ಅಡೂರ್, ಸುಬ್ರಾಯ ಶಾನಭಾಗ, ಶ್ರೀಮತಿ ಮೋಹಿನಿ ಹೆಗ್ಡೆ ಮತ್ತು ಮುರಳೀಧರ ಹೆಗ್ಡೆ, ರಾಜೇಂದ್ರ ಗಡಿಯಾರ್ ಸಹಕರಿಸಿದ್ದರು. ನಾಗಭೂಷಣ್ ನಿರ್ವಹಿಸಿ ವಂದಿಸಿದರು.
ಪುರಂದರದಾಸರ ದೇವರನಾಮ ಹಾಡುವ ಸ್ಪರ್ಧೆಯ ಫಲಿತಾಂಶ (ವಿಭಾಗ 1 ವಯಸ್ಸು 8ರಿಂದ 12)
ಪ್ರಥಮ ಬಹುಮಾನ- ಕುಮಾರಿ. ಆರ್. ಭಾರತೀರಾಮಕೃಷ್ಣ, ಎರಡನೆಯ ಬಹುಮಾನ- ಕುಮಾರಿ ವಿದ್ಯಾ ಪಿ. ಪಣಿಕ್ಕರ್, ಮೂರನೇಯ ಬಹುಮಾನ- ಕುಮಾರಿ ಅಕ್ಷತಾ ಶೇಷನ್, ಪ್ರೋತ್ಸಾಹಕರ ಬಹುಮಾನ- ಕುಮಾರಿ ಸಂಜನಾ ಸುಬ್ರಹ್ಮಣ್ಯಂ.
ವಿಭಾಗ 2: (ವಯಸ್ಸು 13ರಿಂದ 18): ಪ್ರಥಮ ಬಹುಮಾನ- ಕುಮಾರಿ ವಿಜಯಶ್ರೀ ಎಸ್. ಅಯ್ಯರ್, ಎರಡನೇ ಬಹುಮಾನ- ಕುಮಾರಿ ಸ್ವಾತಿ ಎಸ್.ಪಿ.
ವಿಭಾಗ 3:- (19 ವರ್ಷಕ್ಕಿಂತ ಮೇಲ್ಪಟ್ಟವರು): ಪ್ರಥಮ ಬಹುಮಾನ- ಕುಮಾರಿ ವರಲಕ್ಷ್ಮಿ ಉಪಾಧ್ಯಾಯ, ಎರಡನೆ ಬಹುಮಾನ- ಶ್ರೀಮತಿ ಲಲಿತಾ ಶ್ಯಾಮಸುಂದರ್, ಮೂರನೆಯ ಬಹುಮಾನ- ದೀಕ್ಷಿತ್ ದೇವಾಡಿಗ, ಪ್ರೋತ್ಸಾಹಕರ ಬಹುಮಾನ- ಶ್ರೀಮತಿ ಇಂದಿರಾ ಆರ್. ಆಚಾರ್ಯ.
ಇದೇ ಸಂದರ್ಭದಲ್ಲಿ ಸಂಘದ ವಿವಿಧ ದತ್ತಿ ನಿಧಿಯಿಂದ ಕೆಳಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೊಟ್ಟು ಗೌರವಿಸಲಾಯಿತು.
ಮುಂಬೈ ವಿ.ವಿ. ಕನ್ನಡ ಎಂ.ಎ. ಪ್ರಥಮ ಸ್ಥಾನ- ಶ್ರೀಮತಿ ಮಮತಾ ಮಲ್ಹಾರ್ ನಿಂಬರಗಿ. ಮುಂಬೈ ಬೋರ್ಡಿನ ಹೆಚ್.ಎಸ್.ಸಿ. ಕನ್ನಡ ವಿಷಯದಲ್ಲಿ ಪ್ರಥಮ- ಕುಮಾರ ವಿರೇಶ ಎಸ್. ಹೆಗ್ಡೆ, ಮುಂಬೈ ಎಸ್.ಎಸ್.ಸಿ. ಬೋರ್ಡಿನ ಕನ್ನಡ ಮಾಧ್ಯಮ ಎಸ್.ಎಸ್.ಸಿ.ಯಲ್ಲಿ ಪ್ರಥಮ ಸ್ಥಾನ- ಕುಮಾರ್ ಪ್ರಜ್ವಲ್ ಭಂಜನ್. ಎಸ್.ಎಸ್.ಸಿ. ಕನ್ನಡ ಮಾಧ್ಯಮದಲ್ಲಿ ಬಾಲಕಿಯರ ಪೈಕಿ ಪ್ರಥಮ ಸ್ಥಾನ- ಎಲ್. ಬಸಮ್ಮ ವಿ.ರಾವ್, ಎಸ್.ಎಸ್.ಸಿ. ಕನ್ನಡ ಮಾಧ್ಯಮದಲ್ಲಿ ತೃತೀಯ ಸ್ಥಾನ- ಕುಮಾರ್ ಅಕ್ಷಯ ಎಸ್. ಮೇಟ್ರಿ.