ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಮಧುರೈನಲ್ಲಿ ಕನಕ-ಪುರಂದರ-ಬಸವ-ಸರ್ವಜ್ಞ ಜಯಂತಿ ಉತ್ಸವ

Rashmi Kasaragodu
Updated On : 18 Mar 2013, 1:02 am

ಮಧುರೈ: ಕರ್ನಾಟಕದ ಹೊರಗಿದ್ದುಕೊಂಡು ಪುಟ್ಟಮಕ್ಕಳು ಕನ್ನಡದ ನುಡಿಯಲ್ಲಿ ದಾಸಕೀರ್ತನೆ, ವಚನಗಳನ್ನು ಕಂಠಪಾಠ ಮಾಡಿ ಹಾಡಿ ತಮ್ಮಲ್ಲಿ ಕನ್ನಡತವನ್ನು ಉಳಿಸಿಕೊಂಡು ಇತರರಿಗೂ ಪಸರಿಸುತ್ತಿರುವ ಬಗ್ಗೆ ಇಲ್ಲಿನ ಅಪೋಲೋ ಆಸ್ಪತ್ರೆಯ  ಡಾ. ಸಂತೋಷ್ ಶ್ಲಾಘಿಸಿದರು.
ಅವರು ಮಧುರೈನ ಕರ್ನಾಟಕ ಸಂಘದ ವತಿಯಿಂದ ಮಧುರೈನ ಪ್ರೊಡಕ್ಟಿವಿಟಿ ಕೌನ್ಸಿಲ್ ಸಭಾಂಗಣದಲ್ಲಿ ಕನಕ-ಪುರಂದರ-ಬಸವ-ಸರ್ವಜ್ಞ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಈನಿಟ್ಟಿನಲ್ಲಿ ಅವಕಾಶ ಕಲ್ಪಿಸಿಕೊಟ್ಟ ಕಾರ್ಯಕ್ರಮದ ರೂಪಿಸಿದ ಕರ್ನಾಟಕ ಸಂಘದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಮೋಹನ್ ಮಾತನಾಡುತ್ತಾ ಸದಸ್ಯರು ಹಾಗೂ ಮಧುರೈನ ಕನ್ನಡಿಗರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರೆ ಕೊಟ್ಟರು.
ಸಂಘದ ಹಿರಿಯ ಸದಸ್ಯೆ ಡಾ. ವನಜಾ ಕುಲಕರ್ಣಿ ಮಾತನಾಡಿ ಈ ಕಾರ್ಯಕ್ರಮದ ಹಿಂದಿನ ರೂವಾರಿ ಸಂಘದ ಮಾಜಿ ಅಧ್ಯಕ್ಷ ಡಾ. ಪಾ.ಶ. ಶ್ರೀನಿವಾಸ್ ದತ್ತಿ ನಿಧಿ ನೀಡಿರುವ ಬಗ್ಗೆ ಅವರಿಗೆ ಕೃತಜ್ಞತೆ ಅರ್ಪಿಸಿದರು. ಖಜಾಂಚಿ ಕಲ್ಮಡ್ಕ ಕೃಷ್ಣ ಜೋಯಿಸರು ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement