ಮುಂಬೈ ದೇವಾಡಿಗ ಸಂಘದ 88ನೇ ವಾರ್ಷಿಕ ಮಹಾಸಭೆ
ಮುಂಬೈ: ಮುಂಬೈಯ ದೇವಾಡಿಗ ಸಂಘದ 88ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನೆರೂಲ್ ನವಿಯ ದೇವಾಡಿಗರ ಭವನದಲ್ಲಿ ಸಂಘದ ಅಧ್ಯಕ್ಷ ಹಿರಿಯಡ್ಕ ಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಶಂಕರ ಎಸ್. ಮೊಯ್ಲಿ, ರಾಘು ಎ. ಮೊಯ್ಲಿ, ಗುಣಪಾಲ್ ಉಡುಪಿ, ಡಾ. ರೇಖಾ ಸಿ. ದೇವಾಡಿಗ, ಮಾಲತಿ ಜೆ. ಮೊಯ್ಲಿ, ಕೆ. ಕೆ. ನಂದ, ರಮೇಶ್ ಜೆ. ಉಲ್ಲಾಳ್, ದಯಾನಂದ್ ಎಂ. ದೇವಾಡಿಗ, ಎಸ್. ಪಿ. ಕರ್ಮರನ್, ಜಯಂತಿ ಎಂ. ದೇವಾಡಿಗ, ಶೈಲೇಶ್ ಜೆ. ದೇವಾಡಿಗ, ಪ್ರಭಾಕರ್ ಎಸ್. ದೇವಾಡಿಗ, ಉಮೇಶ್ ದೇವಾಡಿಗ, ಗಣೇಶ್ ಶೇರಿಗಾರ್, ಕೆ.ಕೆ. ಮೋಹನದಾಸ್, ಜನಾರ್ದನ ಶೇರಿಗಾರ್ ಸುರಾಲ್, ಗೋಪಿನಾಥ್ ರಾವ್, ಪದ್ಮನಾಭ ಎ. ದೇವಾಡಿಗ ಸಲಹೆ ಸೂಚನೆ ನೀಡಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಎಸ್. ಮೊಯ್ಲಿ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಜತೆಗೆ ಕೋಶಾಧಿಕಾರಿಗಳಾದ ರಮೇಶ್ ಬಿ. ದೇವಾಡಿಗ ಮತ್ತು ಉಮೇಶ್ ಆರ್. ದೇವಾಡಿಗ ವಾರ್ಷಿಕ ಲೆಕ್ಕಪತ್ರ, ಹಾಲಿ ವರ್ಷದ ಅಂದಾಜು ಆಯವ್ಯಯಗಳನ್ನು ಮಂಡಿಸಿದರು. ಸುಂದರ ಮೊಯ್ಲಿ ವಂದಿಸಿದರು.