ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಕಾಸರಗೋಡು ದಸರಾ ಸಾಂಸ್ಕೃತಿಕ ಉತ್ಸವ ಸಂಪನ್ನ

ದಸರಾ ನಾಡಹಬ್ಬದ ಪ್ರಯುಕ್ತ ಚಂದ್ರಗಿರಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಕಾಸರಗೋಡು ಪಾಂಗೋಡು ಶ್ರೀ ದುರ್ಗಾ ಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ...

Vishwanath S
Updated On : 28 Oct 2013, 4:07 am

ಕಾಸರಗೋಡು: ದಸರಾ ನಾಡಹಬ್ಬದ ಪ್ರಯುಕ್ತ ಚಂದ್ರಗಿರಿ ನದಿಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಕಾಸರಗೋಡು ಪಾಂಗೋಡು ಶ್ರೀ ದುರ್ಗಾ ಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕ ಉತ್ಸವ ಮತ್ತು 10 ದಿನಗಳ ಕಾಲ ನಿರಂತರವಾಗಿ ನಡೆದ ದಾಸ ಸಂಕೀರ್ತನಾ ದಶಾಹ ಕಾರ್ಯಕ್ರಮ ಸಮಾರೋಪಗೊಂಡಿತು.
ಪಾಂಗೋಡು ಶ್ರೀ ಶ್ರೀ ದುರ್ಗಾ ಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಕೆ. ರಮೇಶ ಕುದ್ರೆಕ್ಕೋಡು, ಕುಂಬಳೆ ಅವರು ಅಧ್ಯಕ್ಷತೆ ವಹಿಸಿದ್ದರು.
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡಭವನ ಮತ್ತು ಗ್ರಂಥಾಲಯ, ನುಳ್ಳಿಪಾಡಿ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇದರ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು. ದೇವಸ್ಥಾನದ ಧರ್ಮದರ್ಶಿ ಪಾಂಗೋಡು ಪ್ರವೀಣ್ ಕುಮಾರ್ ನಾಯಕ್, ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ವಿಶ್ವನಾಥ ಭಾಗವತ, ನವೀನ್ ನಾಯಕ್, ಜಗದೀಶ್ ನಾಯಕ್, ನಾಗರಕಟ್ಟೆ, ಮೋಹನ ಆಚಾರ್ಯ, ಪುಳ್ಕೂರು, ಗಣೇಶ ನಾಯಕ ನಾಗರಕಟ್ಟೆ, ಆಶಾಲತಾ ರಾಧಾಕೃಷ್ಣ ಅಣಂಗೂರು,
ನಿರ್ಮಲಾ ಗಿರಿಜಾ ಕೊರಕ್ಕೋಡು, ಪಿ. ದಿವಾಕರ ಅಶೋಕನಗರ, ಸೂರ್ಯಕುಮಾರ್ ಪಾಂಗೋಡು, ಪ್ರದೀಪ್ ಕುಮಾರ್ ನಾಯಕ್ ನಾಗರಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಂದಿನ ವರ್ಷ ಕಾಸರಗೋಡು ದಸರಾ ಸಾಂಸ್ಕೃತಿಕ ಉತ್ಸವ ಮತ್ತು ದಾಸಸಂಕೀರ್ತನಾ ಉತ್ಸವವನ್ನು ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉದ್ಘಾಟನೆಗೊಂಡು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಕಾಸರಗೋಡಿನ 30 ಮಹಿಳಾ ಭಜನಾ ಮಂಡಳಿಗಳ 100 ಮಂದಿ ಮಹಿಳೆಯರಿಂದ ಸಮೂಹ ದಾಸ ಸಂಕೀರ್ತನೆಯನ್ನು 10 ಕೇಂದ್ರಗಳಲ್ಲಿ ಆಯೋಜಿಸಲಾಗುವುದು ರ್ಎಂದು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಕೇರಳ ದಾಸಸಾಹಿತ್ಯ ಪ್ರಚಾರಕ್ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಕಾಸರಗೋಡು ದಸರಾ ಸಾಂಸ್ಕೃತಿಕ ಉತ್ಸವ -2013 ಸಮಾರೋಪ ಸಮಾರಂಭದಲ್ಲಿ ಕೂಡ್ಲು ವಿಷ್ಣು ಮಂಗಲದ ಹೃಷಿಕೇಶ ಭಕ್ತವೃಂದ, ಅಣಂಗೂರು ಶ್ರೀ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಮಂಡಳಿಯವರಿಂದ ಸಮೂಹ ದಾಸ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಅನೇಕ ಕಾರ್ಯಕ್ರಮಗಳು ನಡೆದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement