ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಸಾಹಿತ್ಯ ಸಂವಾದ
ಮುಂಬಯಿ: ಇುದೇ ವರ್ಷ ಕಳೆದ ಸೆಪ್ಟೆಂಬರ್ 22ರಂದು ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಜಾನಪದ ವಿದ್ವಾಂಸ ಡಾ. ಕಾಳೇಗೌಡ ನಾಗವಾರ ಹಾಗೂ ಖ್ಯಾತ ಗಮಕ ವಾಚಕ ಅಂಬಾತನಯ ಮುದ್ರಾಡಿ ಇವರ ಉಪನ್ಯಾಸ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮವು ಕಲೀನದಲ್ಲಿ ನಡೆಯಿತು.
ರೆವೆ. ಎಬ್ನೇಜರ್ ಜತ್ತನ್ನ ಅವರ ತುಳುವಿಗೆ ಬಾಸೆಲ್ ಮಿಷನ್ನರಿಗಳ ಕೊಡುಗೆ ಎನ್ನುವ ಚೊಚ್ಚಲ ಕೃತಿಯನ್ನು ಅಂಬಾಡಿತನಯ ಮುದ್ರಾಡಿಯವರು ಬಿಡುಗಡೆಗೊಳಿಸಿದರು. ರೆ.ವೆ. ಜತ್ತನ್ನ ಅವರು ಈ ಕೃತಿಯನ್ನು ಬರೆಯುವ ಪ್ರೇರಣೆ ತನಗೆ ಯಾಕೆ ಬಂತು ಎನ್ನುವುದನ್ನು ತಿಳಿಸಿದರು. ಮಧುಸೂದನರಾವ್ ಕೃತಿಯ ಪರಿಚಯವನ್ನು ಮಾಡಿಕೊಟ್ಟರು. ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿಯ ಬಗ್ಗೆ ಡಾ. ಕಾಳೇಗೌಡ ನಾಗವಾರ ಮಾತನಾಡಿದರು.
ಅಂಬಾತನಯ ಮುದ್ರಾಡಿಯವರು ಕರ್ಣನನ್ನು ಕವಿ ಕುಮಾರವ್ಯಾಸ ಹ್ಯಾಗೆ ಚಿತ್ರಿಸಿದ್ದಾನೆ ಎಂಬುದನ್ನು ವಿವರಿಸಿದರು.
ಆಮೇಲೆ ನಡೆದ ಸಾಹಿತ್ಯ ಸಂವಾದದಲ್ಲಿ ವಿವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುವೆಂಪು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಉಪಾಧ್ಯ ಸ್ವಾಗತಿಸಿದರು. ಸಂಶೋಧನಾ ಸಹಾಯಕಿ ಪೂರ್ಣಿಮಾ ಶೆಟ್ಟಿ ನಿರೂಪಿಸಿದರು. ಅಶೋಕ ವಂದಿಸಿದರು.