ವಿ.ಗ. ನಾಯಕ್‌ಗೆ ಶ್ರೀ ಗುರುನಾರಾಯಣ ಪ್ರಶಸ್ತಿ ಪ್ರದಾನ
ಮುಂಬೈ: ಬಿಲ್ಲವರ ಅಸೋಸಿಯೆಷನ್ ಮುಖವಾಣಿ 'ಅಕ್ಷಯ' ಮಾಸಿಕದ ರಜತೋತ್ಸವ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿನ ಸಾಂತಕ್ರೂಜ್‌ನ ಬಿಲ್ಲವರ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಎಂ.ಬಿ. ಕುಕ್ಯಾನ್ ಪ್ರಾಯೋಜಿತ 'ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ- 2013'ನ್ನು ಹಿರಿಯ ಸಾಹಿತಿ ವಿ.ಗ. ನಾಯಕ ಅವರಿಗೆ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಖ್ಯಾತ ಕವಿ ಡಾ.ಬಿ.ಎ. ಸನದಿ, ದಲಿತ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಕತೆಗಾರ ಡಾ. ಜನಾರ್ದನ ಭಟ್ ಉಡುಪಿ, ಅಕ್ಕಲಕೋಟೆ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗುರುಲಿಂಗಪ್ಪ ಧಬಾಲೆ, ಮುಂಬೈ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯ, ಪ್ರೊ. ತುಕಾರಾಮ ಪೂಜಾರಿ, ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ ಮತ್ತು ದಯಾಸಾಗರ ಚೌಟ, ಸಂಘದ ಉಪಾಧ್ಯಕ್ಷರಾದ ಸಿ.ಟಿ. ಸಾಲ್ಯಾನ್, ಚಂದ್ರಶೇಖರ್ ಎಸ್. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಮತ್ತಿತರರು ಒಂದಾಗಿ 25 ದೀಪಗಳನ್ನು ಹಚ್ಚಿ ರಜತ ಮಹೋತ್ಸವಕ್ಕೆ ಚಾಲನೆ ನೀಡಿದರು.
ಖ್ಯಾತ ಗಾಯಕ ಚಂದ್ರಶೇಖರ ಕೆದ್ಲಾಯ ಬ್ರಹ್ಮಾವರ ಅವರು ಪ್ರಾರ್ಥಿಸಿದರು. ನಂತರ ಡಾ. ಸನದಿ ಅವರು 'ಅಕ್ಷಯ' ಬೆಳ್ಳಿಹಬ್ಬ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.
ಅಕ್ಷಯ ಪತ್ರಿಕೆಯ ಗೌರವ ಪ್ರಧಾನ ಸಂಪಾದಕ ಎಂ.ಬಿ. ಕುಕ್ಯಾನ್ ಸ್ವಾಗತಿಸಿದರು. ವ್ಯವಸ್ಥಾಪಕ ಸಂಪಾದಕ ನಿತ್ಯಾನಂದ ಡಿ. ಕೋಟ್ಯಾನ್, ಸಂಪಾದಕ ಡಾ. ಈಶ್ವರ ಅಲೆವೂರು, ಸಹಾಯಕ ಸಂಪಾದಕ ಹರೀಶ್ ಹೆಜಮಾಡಿ ಇದ್ದರು.
ಸಂಘದ ಅಧ್ಯಕ್ಷ ಎಲ್.ವಿ. ಅಮೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಜಯ ಸಿ. ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಸದಸ್ಯ ಧರ್ಮೇಶ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಗೌ.ಪ್ರ. ಕಾರ್ಯದರ್ಶಿ ಜ್ಯೋತಿ ಕೆ. ಸುವರ್ಣ ವಂದಿಸಿದರು. ಕೊನೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.