ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಮುದ ನೀಡಿದ ಮೈಸೂರು ಅಸೋಸಿಯೇಷನ್ನ ಕನ್ನಡ ನಾಟಕೋತ್ಸವ

ಅಸೋಸಿಯೇಷನ್ ಮುಂಬೈ ಡಿ. 20ರಿಂದ 22ರವರೆಗೆ ಏರ್ಪಡಿಸಲಾದ ಕನ್ನಡ ನಾಟಕೋತ್ಸವ ಯಶಸ್ವಿಯಾಗಿ ನಡೆಯಿತು. ..

Rashmi Kasaragodu
Updated On : 3 Feb 2014, 1:30 am

ಮುಂಬೈ: ಅಸೋಸಿಯೇಷನ್ ಮುಂಬೈ ಡಿ. 20ರಿಂದ 22ರವರೆಗೆ ಏರ್ಪಡಿಸಲಾದ ಕನ್ನಡ ನಾಟಕೋತ್ಸವ ಯಶಸ್ವಿಯಾಗಿ ನಡೆಯಿತು. ಮೊದಲನೇ ದಿನ ಶಿವಮೊಗ್ಗದ ಹೊಂಗಿರಣ ತಂಡ ಅಭಿನಯಿಸಿದ ಕರ್ಣಾಂತರಂಗ ಎಂಬ ನಾಟಕ ಡಾ. ಸತೀಶ್ ಸಾಸ್ವೆಹಳ್ಳಿಯವರ ನಿರ್ದೇಶನದಲ್ಲಿ ಮೂಡಿ ಬಂತು.
ನಾಟಕವು ಮಹಾಭಾರತದ ಕರ್ಣನ ಅಂತರಂಗದ ದ್ವಂದ್ವವನ್ನು ಯಶಸ್ವಿಯಾಗಿ ರಂಗದ ಮೇಲೆ ಸಾದರಪಡಿಸಿತು. ಕರ್ಣನ ಪಾತ್ರವನ್ನು ಇಬ್ಬರು ನಟರ ಮೂಲಕ ಅವನ ಜೀವನದ ಅನೇಕ ಮಹತ್ವದ ವೃತ್ತಾಂತಗಳನ್ನು ತೆರೆದಿಟ್ಟಿರುವುದು ಒಂದು ವಿಶೇಷ ಪ್ರಯೋಗ. ಎ.ಎನ್. ಸುರೇಂದ್ರ ಹಾಗೂ ಎಸ್. ಚಂದ್ರಶೇಖರ್ ಕರ್ಣನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರನ್ನು ರಂಜಿಸಿದರು.
ದಿ. 21.12.2013ರಂದು ಅಂತರಂಗ ಪ್ರದರ್ಶಿಸಿದ ಶಾಲಭಂಜಕೆ ಚಾರಿತ್ರಿಕ ಹಿನ್ನೆಲೆಯಿಂದ ಕೂಡಿದ ವಿಭಿನ್ನ ದೃಷ್ಟಿಕೋನದ ಅಪರೂಪದ ನಾಟಕ-ಸಾಕ್ಷ್ಯಾಧಾರದ ಮೇಲೆ ಡಾ. ಕೆ.ಎನ್. ಗಣೇಶಯ್ಯ ಗಟ್ಟಿಯಾಗಿ ಅದೇ ಹೆಸರಿನ ಮೇಲೆ ಕಥೆಯನ್ನು ಹೆಣೆದಿದ್ದಾರೆ. ಎಸ್.ಆರ್. ಗಿರೀಶ್ ಈ ಕಥೆಯನ್ನು ಅರ್ಥಪೂರ್ಣವಾಗಿ ರಂಗಕ್ಕೆ ಅಳವಡಿಸಿದ್ದಾರೆ. ದಿ. 22.12.2013ರಂದು ಅಂತರಂಗ ಅಭಿನಯಿಸಿದ ಉತ್ತರ ಭೂಪ ಬೀಚಿ ಹಾಸ್ಯ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು. ಇತ್ತೀಚಿನ ದಿನಗಳಲ್ಲಿ ಮೂಡಿಬಂದ ಅತ್ಯುತ್ತಮ ಹಾಸ್ಯ ನಾಟಕಗಳಲ್ಲಿ ಉತ್ತರಭೂಪ ಬೀಚಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.
ಮುಖ್ಯ ಪಾತ್ರಗಳಲ್ಲಿ ನರಸಿಂಹಯ್ಯನಾಗಿ ರಾಂ ಮಂಜುನಾಥ ಹೆಂಡತಿ ಶಾರದಮ್ಮಳಾಗಿ ಅರ್ಚನಾ ಶ್ಯಾಂ ಪ್ರಭಾವಶಾಲಿಯಾಗಿ ಮೂಡಿಬರಲು ಕಾರಣಕರ್ತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement