ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಮುಂಬೈ ಕನ್ನಡ ಸಂಘದಲ್ಲಿ ದತ್ತಿ ಉಪನ್ಯಾಸ

Mainashree
Updated On : 5 Jan 2014, 8:51 am

ಮುಂಬೈ: ಮುಂಬೈ ಮಾತುಂಗಾ ಪೂರ್ವದ ಮುಂಬೈ ಕನ್ನಡ ಸಂಘದ ಆಶ್ರಯದಲ್ಲಿ ಎರಡು ದತ್ತಿ ಉಪನ್ಯಾಸಗಳು ಸಂಘದ ವಾಚನಾಲಯದಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಎಸ್. ನಾಯಕ್ ವಹಿಸಿದ್ದರು. ಖಾಲ್ಸಾ ಕಾಲೇಜು ಕನ್ನಡಪ್ರೇಮಿ ಮಂಡಳಿ ದತ್ತಿ ಉಪನ್ಯಾಸಕರಾಗಿ ಮುಂಬೈ ನ್ಯಾಯವಾದಿ, ಸಾಹಿತಿ, ಕವಿ ಹಾಗೂ ಹವ್ಯಕ ಸಂದೇಶ ಪತ್ರಿಕೆಯ ಸಂಪಾದಕರಾಗಿರುವ ಅಮಿತಾ ಎಸ್. ಭಾಗ್ವತ ಅವರು ಹವ್ಯಕ ಜಾನಪದ ಹಾಡುಗಳಲ್ಲಿ ಮಹಿಳಾ ಸಂಘರ್ಷ ಎಂಬ ವಿಷಯದ ಮೇಲೆ ಉತ್ತಮವಾಗಿ ಉಪನ್ಯಾಸ ನೀಡಿದರು. ಅವರು ತಮ್ಮ ಉಪನ್ಯಾಸದಲ್ಲಿ ಹವ್ಯಕ ಎಂಬ ಶಬ್ದದ ವಿವರಣೆ ನೀಡಿ ಹವ್ಯಕ ಬ್ರಾಹ್ಮಣರ ಆಚಾರ-ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದರು. ದಿ. ಜಿ.ವಿ. ರಂಗಸ್ವಾಮಿ ದತ್ತಿ ಉಪನ್ಯಾಸಕರಾಗಿ ಮುಂಬೈಯ ನಾಟಕಕಾರ, ಸಾಹಿತಿ ಮತ್ತು ಸಂಘಟಕ ನಾರಾಯಣ ಶೆಟ್ಟಿ ನಂದಳಿಕೆ 'ನಾಟಕದ ಮೂಲ ಪಠ್ಯರಂಗ ಪ್ರಯೋಗತೆ ಸಾಧ್ಯತೆಗಳು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಮುಂಬೈಯ ಕನ್ನಡ ಮತ್ತು ತುಳು ರಂಗಭೂಮಿಯ ಬಗ್ಗೆ ವಿವರವಾಗಿ ತಿಳಿಸಿದರು. ಅಲ್ಲದೇ ಕನ್ನಡ ಪ್ರೇಕ್ಷಕರ ಕೊರತೆ ಬಗ್ಗೆ, ರಂಗಪ್ರದರ್ಶನದ ಬಗ್ಗೆ ದಿಗ್ದರ್ಶಕರ ಬಗ್ಗೆ ತಿಳಿಸಿ ವಿವರವಾಗಿ ಉಪನ್ಯಾಸ ನೀಡಿದರು.  ಅವರ ಪರಿಚಯವನ್ನು ಸುಬ್ರಾಯ ಶ್ಯಾನುಭೋಗರು ಮಾಡಿದರು. ದಿ. ಜಿ.ವಿ. ರಂಗಸ್ವಾಮಿ ದತ್ತಿ ನಿಧಿ ಪರವಾಗಿ ಸಂಘದ ಅಧ್ಯಕ್ಷ ಜಿ.ಎಸ್. ನಾಯಕರು ಪುಸ್ತಕ ಗೌರವ ಪುಷ್ಪಗುಚ್ಛ ಸಂಭಾವನೆ ನೀಡಿದರು. ಇದೇ ಸಂದರ್ಭದಲ್ಲಿ ಕೆಲವು ಸಾಹಿತ್ಯಾಭಿಮಾನಿಗಳಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಮಾಧವ ಮಾರ್ಕಂಡೇಯ ಪುಷ್ಪಗುಚ್ಛ ಸ್ವೀಕರಿಸಿದರು. ಸೋಮನಾಥ ನಿರೂಪಿಸಿದರು. ಎಚ್.ಎಸ್. ಆಡೂರ ವಂದಿಸಿದರು. ಸಂಧ್ಯಾಪ್ರಭು, ಎಸ್.ಕೆ. ಪದ್ಮನಾಭ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement