ಬಾ. ಸಾಮಗರಿಗೆ 'ತುಳುರತ್ನ' ಪ್ರಶಸ್ತಿ
ತುಳುನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಪ್ರಗತಿಗೆ ಅಪ್ರತಿಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ದಿಲ್ಲಿಯ 'ತುಳುವೆರ್', 'ದೆಹಲಿಕನ್ನಡಿಗ' ಪತ್ರಿಕೆ ಸಂಪಾದಕ ಬಾ. ಸಾಮಗ ಅವರಿಗೆ ತುಳುರತ್ನ ಪ್ರಶಸ್ತಿಯನ್ನು ಮೀರಜ್ನಲ್ಲಿ ಡಿ. 28ರಂದು ಕರ್ನಾಟಕ ತುಳುನಾಡ್ ಸಂಘ ಏರ್ಪಡಿಸಿದ್ದ ಬೆಳ್ಳಿಹಬ್ಬ ಸಮಾರಂಭದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರು ನೀಡಿ ಸನ್ಮಾನಿಸಿದರು.