ಹಾಂಕಾಂಗ್ನಲ್ಲಿ ಕುವೆಂಪು ಕಲಾ ಉತ್ಸವ, ವಿಶ್ವ ಕನ್ನಡ ಸಮ್ಮೇಳನ
ಹಾಂಕಾಂಗ್: ಹಾಂಕಾಂಗ್ ದೇಶದಲ್ಲಿ ಕುವೆಂಪು ಕಲಾನಿಕೇತನ ಸಂಸ್ಥೆ ಮತ್ತು ಕನ್ನಡ ಸಂಘ ಹಾಂಕಾಂಗ್ ಸಂಯುಕ್ತ ಆಶ್ರಯದಲ್ಲಿ ಫೆ.16ರಂದು ಯುತ್ ಸ್ಕ್ವಯರ್ ವೈ ಥೇಟರ್ ಜೈವಾನ್, ಹಾಂಕಾಂಗ್ ಸಭಾಂಗಣದಲ್ಲಿ ವಿಶ್ವಮಾನವ ಕುವೆಂಪು ಕಲಾ ಉತ್ಸವ ಮತ್ತು ಮೂರನೇ ವಿಶ್ವ ಕನ್ನಡ ಸಮ್ಮೇಳನ ಹಾಂಕಾಂಗ್ 2014, ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿತು. ಈ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಮಳಲಿ ವಸಂತಕುಮಾರ್, ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ಲತಾರಾಜಶೇಖರ್, ಕುವೆಂಪು ಕಲಾನಿಕೇತನದ ಅಧ್ಯಕ್ಷರಾದ ಡಿ. ಪ್ರಕಾಶ್, ಹಿರಿಯ ಪತ್ರಕರ್ತರಾದ ಪಿ. ರಾಮಯ್ಯ, ನಾಗತೀಹಳ್ಳಿ ರಮೇಶ, ಹಾಂಕಾಂಗ್ ಕನ್ನಡ ಸಂಘದ ಅಧ್ಯಕ್ಷ ರಮೇಶಬಾಬು, ಸತೀಶ, ವಾಣಿರಮೇಶ, ಸತೀಶಶೆಟ್ಟಿ ಹಾಗೂ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದಾರೆ.