ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಸಂಸ್ಕೃತಿ ವರ್ಧನೆಗೆ ಯಕ್ಷಗಾನ ಪೂರಕ

Mainashree
Updated On : 30 Mar 2014, 10:07 am

ಕಾಸರಗೋಡು: ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ, ಕಲಾವಿದರ ಸಾಧನೆಗಳ ಪರಿಚಯ, ಕಲಾಪ್ರದರ್ಶನದ ಮಾಹಿತಿ ಮತ್ತು ಕಲೆಯ ಪ್ರಸಾರದ ನಿಟ್ಟಿನಲ್ಲಿ ಹೊರಬರುತ್ತಿರುವ ಕಣಿಪುರ ಮಾಸಪತ್ರಿಕೆಯು 3ನೇ ವರ್ಷಕ್ಕೆ ಕಾಲಿರಿಸುತ್ತಿರುವುದು ಸಂತೋಷದ ಮತ್ತು ಅಭಿಮಾನದ ವಿಷಯ. ಅನುಭವೀ ಪತ್ರಕರ್ತ ಚಂಬಲ್ತಿಮಾರ್ ಸಾಹಸ ಯಾತ್ರೆಯನ್ನೇ ಕೈಗೊಂಡಿದ್ದಾರೆ. ಅವರು ಯಕ್ಷಗಾನವನ್ನೇ ಉಸಿರಾಗಿಸಿದ್ದಾರೆ. ತಮ್ಮ ಸಂಪಾದಕತ್ವದಲ್ಲಿ ಕಣಿಪುರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಖ್ಯಾತ ಕವಿ, ಸಂಸ್ಕೃತಿ ಚಿಂತಕ ಡಾ. ಕೆ.ವಿ. ತಿರುಮಲೇಶ್ ಹೇಳಿದರು.
ಅವರು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಕಲಾಸಂಘದ ಯಕ್ಷಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ಅವರಿಗೆ ಮೊದಲ ಪ್ರತಿಯನ್ನು ನೀಡಿ  ಕರಾವಳಿ ಯಕ್ಷಗಾನ ಮಾಸಪತ್ರಿಕೆ ಕಣಿಪುರದ ಯಕ್ಷಪುತ್ಥಳಿ 28ನೇ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕಾಸರಗೋಡು ಚಿನ್ನಾ ಮಾತನಾಡುತ್ತಾ ಅಚ್ಚಗನ್ನಡ ಪ್ರದೇಶವಾದ ಕಾಸರಗೋಡು ಸಂಸ್ಕೃತಿ ಸಂಪನ್ನವಾದ ನೆಲ. ಸಂಗೀತ, ನಾಟಕ, ಯಕ್ಷಗಾನ, ಬೊಂಬೆಯಾಟಗಳು ಇಲ್ಲಿಂದ ಆರಂಭಗೊಂಡು ಕನ್ನಡನಾಡಿನ ಉದ್ದಗಲ ಸಂಚರಿಸಿವೆ. ಇಲ್ಲಿನ ಕಲಾಪ್ರತಿಭೆಗಳು ವಿಶ್ವವಿಖ್ಯಾತರಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಪ್ರದೇಶವು ಮೆರುಗಿನ ಸ್ಥಾನ ಪಡೆದಿದೆ. ಕಲಾವಿದ ಕೆ.ವಿ. ರಮೇಶ್‌ರ ಯೋಜನೆಗೆ ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತಡ್ಕ, ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರಮಲ್ಲಮೂಲೆ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕಾಧ್ಯಕ್ಷ -. ಶಂಕರನಾರಾಯಣಭಟ್, ಕೆ. ವಾಮನರಾವ್ ಬೇಕಲ್ ಶುಭ ಹಾರೈಸಿದರು.
ಕಣಿಪುರದ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕೆಯ ಬೆಳವಣಿಗೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕೆ.ವಿ. ರಮೇಶ್ ಸ್ವಾಗತಿಸಿದರು. ಕೆ. ಜಗದೀಶ ಕೂಡ್ಲು ವಂದಿಸಿದರು. ನಂತರ ಬೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement