ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

'ಸ್ತ್ರೀ ಶಕ್ತಿಯಿಂದ ಸಂಘದ ಏಳಿಗೆ'

Mainashree
Updated On : 30 Mar 2014, 10:08 am

ಮುಂಬೈ: ಇಲ್ಲಿನ ಮಾತುಂಗಾ ಪೂರ್ವದ ಕನ್ನಡ ಸಂಘದ ಮಹಿಳಾ ವಿಭಾಗದ ಸ್ನೇಹ ಸಮ್ಮಿಲನವು ಮಾ.20ರಂದು ಸಂಜೆ 5ರಿಂದ 8 ಗಂಟೆತನಕ ಮೈಸೂರು ಅಸೋಸಿಯೇಷನ್ ಕಿರುಸಭಾಗೃಹದಲ್ಲಿ ನಡೆಯಿತು.  ಮಹಿಳಾ ವಿಭಾಗದ ಕಾರ್ಯದರ್ಶಿ ರಜನಿ ವಿ. ಪೈಯವರು ಮಹಿಳಾ ವಿಭಾಗವು ನಡೆಸುವ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಬಗ್ಗೆ ಉಪನ್ಯಾಸ ನೀಡಿದರು. ಅಲ್ಲದೆ ಕಾವ್ಯವಾಚನ ಮಾಡಿದರು. ಸ್ತ್ರೀ ಶಕ್ತಿಯಿಂದ ಸಂಘದ ಏಳಿಗೆ ಸಾಧ್ಯವೆಂದರು. ಸಂಘದ ಅಧ್ಯಕ್ಷ ಜಿ.ಎಸ್. ನಾಯಕ್ ಮಾತನಾಡಿ ಸಂಘವು ಕಳೆದ 72 ವರ್ಷಗಳಿಂದ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮತ್ತು ಕಿರುಸಭಾಗೃಹದ ಯೋಜನೆ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು. ಮಹಿಳಾ ವಿಭಾಗಕ್ಕೆ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲು ಸಿದ್ಧವೆಂದು ತಿಳಿಸಿ ಶುಭ ಹಾರೈಸಿದರು. ಸಭೆಯಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ತಮ್ಮ ಪರಿಚಯ ತಿಳಿಸಿದರು. ಶರ್ಮಿಳಾ ಪ್ರಭು, ಜ್ಯೋತಿ ನಾಯಕ್ ಮೊದಲಾದವರು ತಮ್ಮ ಸಲಹೆ ಸೂಚನೆ ನೀಡಿದರು. ಡಾ. ಎಸ್.ಕೆ. ಭವಾನಿ ಅಮೂಲ್ಯ ಸಲಹೆ ನೀಡಿದರು. ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ಸುಗುಣಾ ವಿ. ಶೆಟ್ಟಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement