ಲುಂಬಿನಿ ಗಾರ್ಡನ್ 
ರಾಜ್ಯ

ಡಾ.ರಾಜ್‌ಕುಮಾರ್ ದೋಣಿ ವಿಹಾರ ಕೇಂದ್ರ ಲುಂಬಿನಿಯಲ್ಲಿ ಚುಂಬನಕ್ಕೆ ಬ್ರೇಕ್

ಡಾ.ರಾಜ್‌ಕುಮಾರ್ ದೋಣಿ ವಿಹಾರ ಕೇಂದ್ರ ಲುಂಬಿನಿ ಗಾರ್ಡನ್‌ನಲ್ಲಿ ಪ್ರೇಮಿಗಳ ಚುಂಬನ ಹಾಗೂ ತಬ್ಬಿಕೊಳ್ಳುವುದಕ್ಕೆ ಬ್ರೇಕ್ ಬಿದ್ದಿದೆ...

ಬೆಂಗಳೂರು: ಡಾ.ರಾಜ್‌ಕುಮಾರ್ ದೋಣಿ ವಿಹಾರ ಕೇಂದ್ರ ಲುಂಬಿನಿ ಗಾರ್ಡನ್‌ನಲ್ಲಿ ಪ್ರೇಮಿಗಳ ಚುಂಬನ ಹಾಗೂ ತಬ್ಬಿಕೊಳ್ಳುವುದಕ್ಕೆ ಬ್ರೇಕ್ ಬಿದ್ದಿದೆ.

ಹೆಬ್ಬಾಳ ಸಮೀಪವಿರುವ ಲುಂಬಿನ ಗಾರ್ಡನ್ ನ ಪ್ರವೇಶ ದ್ವಾರದಲ್ಲೇ ಪಾಲಿಸಬೇಕಾದ ನಿಯಮಗಳ ಬಗ್ಗೆ ಫಲಕ ಹಾಕಲಾಗಿದ್ದು, ಈ ನಿಯಮಗಳನ್ನು ಮೀರಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದರೆ ಅಲ್ಲಿರುವ ಭದ್ರತಾ ಸಿಬ್ಬಂದಿ ಅಂಥವರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಿದ್ದಾರೆ.

ಉದ್ಯಾನವನಕ್ಕೆ ಬರುವ ಪ್ರೇಮಿಗಳು, ಕಾಲೇಜು ಯುವಕ-ಯುವತಿಯರು ಅಸಭ್ಯವಾಗಿ ವರ್ತಿಸುತ್ತಾರೆ. ಸಾರ್ವಜನಿಕವಾಗಿ ಕಿಸ್ಸಿಂಗ್ ಅಥವಾ ತಬ್ಬಿಕೊಂಡು ಕುಳಿತಿರುತ್ತಾರೆ. ಇದರಿಂದಾಗಿ ಪಾರ್ಕ್‌ಗೆ ಬರುವ ಮಕ್ಕಳು, ಸಂಪ್ರದಾಯಸ್ಥರು ಮುಜುಗರಕ್ಕೆ ಈಡಾಗುತ್ತಿದ್ದಾರೆ. ಆದ್ದರಿಂದ ಅಂಥ ಅನುಚಿತ ವರ್ತನೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.

ಇನ್ನು ಅಸಹ್ಯಕರ ಚಟುವಟಿಕೆ ನಿಯಂತ್ರಣ ಉದ್ದೇಶದಿಂದ ಪೊಲೀಸರ ಸೂಚನೆ ಮೇರೆಗೆ ಬಿಬಿಎಂಪಿ ಈಗಾಗಲೇ ಉದ್ಯಾನದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT