ಕರೀನಾ ಕಪೂರ್ ನೋಡಲು ಮುಗಿಬಿದ್ದ ಬೆಳಗಾವಿ ಜನತೆ
ಬಾಲಿವುಡ್ ನ ಜನಪ್ರಿಯ ನಟಿ ಕರೀನಾ ಕಪೂರ್. ಕಾಲೇಜು ಹುಡುಗ-ಹುಡುಗಿಯರ ನೆಚ್ಚಿನ ನಾಯಕಿ...
ಬೆಳಗಾವಿ: ಬಾಲಿವುಡ್ ನ ಜನಪ್ರಿಯ ನಟಿ ಕರೀನಾ ಕಪೂರ್. ಕಾಲೇಜು ಹುಡುಗ-ಹುಡುಗಿಯರ ನೆಚ್ಚಿನ ನಾಯಕಿ. ಈ ಬೇಗಂ ಸೊಸೆಯನ್ನು ನೋಡಲು ಜನರು, ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಆದರ್ಶ ಪ್ಯಾಲೇಸ್ ಪಕ್ಕದಲ್ಲಿ ಶನಿವಾರ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ನ 150ನೇ ಮಳಿಗೆಯ ಉದ್ಘಾಟನೆ ವೇಳೆ ನಡೆಯಿತು.
ಜ್ಯುವೆಲ್ಲರಿ ಮಳಿಗೆ ಸುತ್ತಮುತ್ತ ಸಾವಿರಾರು ಜನ ಜಮಾಯಿಸಿದ್ದರು. ಅಲ್ಲಿ ಕರೀನಾ ಕಪೂರ್ ಮಳಿಗೆ ಉದ್ಘಾಟಿಸಿ ಮೇರೆ ಫೋಟೊ ಕೋ ಸೀನೆ ಸೇ ಯಾರ್... ಚಿಪಾಕೆ ಲೇ ಸೈಯಾ ಫೇವಿಕಾಲ್ ಸೇ ಎಂಬ ದಬಂಗ್-2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.
ಹಾಡಿನ ಮಧ್ಯದಲ್ಲಿ ಜನರತ್ತ ಕೈಬೀಸಿ ಫ್ಲೈಯಿಂಗ್ ಕಿಸ್ ನೀಡಿದರು. ಈ ವೇಳೆ, ಕರೀನಾ ಅವರ ಕೈಕುಲುಕಲು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಯುವಕರು ಮುಗಿಬಿದ್ದರು. ಗುಂಪನ್ನು ನಿಯಂತ್ರಿಸಲು ಪೊಲೀಸರು ಸ್ವಲ್ಪ ಮಟ್ಟಿಗೆ ಲಾಠಿ ಪ್ರಹಾರ ತೋರಿಸಬೇಕಾಯಿತು. ಬಳಿಕ, ಮಲಬಾರ್ ಗೋಲ್ಡ್ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಬ್ಬಂದಿ ಜತೆ ಸೆಲ್ಫಿಗೆ ಮುಖವೊಡ್ಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.