ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆಯವರಿಗೆ 2014ರಲ್ಲಿ ತಮ್ಮ ಮನೆಯಲ್ಲಿ ಆಹಾರ ನೀಡುತ್ತಿರುವ ರಾಜಶೇಖರ್ ಮಳಲಿ 
ರಾಜ್ಯ

ಮೇಟಿ ಲೈಂಗಿಕ ಹಗರಣವನ್ನು ಬಯಲಿಗೆಳೆದು ರಾಜ್ಯದಲ್ಲಿ ಮನೆಮಾತಾದ ರಾಜಶೇಖರ್

ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಳಲಿ ಹೆಸರು ಇತ್ತೀಚಿನವರೆಗೆ ಬಳ್ಳಾರಿ ಜಿಲ್ಲೆಯವರಿಗೆ...

ಬಳ್ಳಾರಿ: ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಳಲಿ ಹೆಸರು ಇತ್ತೀಚಿನವರೆಗೆ ಬಳ್ಳಾರಿ ಜಿಲ್ಲೆಯವರಿಗೆ ಮಾತ್ರ ತಿಳಿದಿತ್ತು. ಯಾವಾಗ ಮಾಜಿ ಸಚಿವ ಹೆಚ್.ವೈ.ಮೇಟಿ ಮಹಿಳೆಯೊಬ್ಬರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರ ವಿಡಿಯೋ ಬಿಡುಗಡೆ ಮಾಡಿದರೋ ಆ ಬಳಿಕ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ. ವಿಡಿಯೋ ಬಿಡುಗಡೆ ಮಾಡದಂತೆ ಮೇಟಿ ಬೆಂಬಲಿಗರು ರಾಜಶೇಖರ್ ಮೇಲೆ ಒತ್ತಡ ಮತ್ತು ಬೆದರಿಕೆ ಹಾಕಿದ್ದರಂತೆ. ಆದರೆ ವಿಡಿಯೋವನ್ನು ನ ನೋಡಿದ್ದೆನು ಹೊರತು ಅದು ನನ್ನ ಬಳಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆಯವರ ಅನುಯಾಯಿ ಎಂದು ಹೇಳುತ್ತಿರುವ ರಾಜಶೇಖರ್, 2014ರಲ್ಲಿ ಅಣ್ಣಾ ಹಜಾರೆಯವರು ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದಾಗ ಅದನ್ನು ಸ್ವೀಕರಿಸಲು ಬಳ್ಳಾರಿಗೆ ಬಂದಿದ್ದ ವೇಳೆ ರಾಜಶೇಖರ್ ಮನೆಯಲ್ಲಿಯೇ ಉಳಿದುಕೊಂಡಿದ್ದರು. 
ರಾಜಶೇಖರ್ ಕಳೆದ ಮೂರು ದಶಕಗಳಿಂದ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ಅವರ ಕುಟುಂಬದವರು ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ನೀಲಗುಂದ ಗ್ರಾಮದಿಂದ ಬಂದು ನೆಲೆಸಿದ್ದರು. ಎಂ. ಗುರುಬಸವರಾಜ್ ಮತ್ತು ಲಲಿತಾಕ್ಷಮ್ಮ ದಂಪತಿಯ ಆರನೇ ಮಗನೇ ರಾಜಶೇಖರ್. ಎಂಬಿಎ ಪದವೀಧರರಾಗಿರುವ ಇವರು ಅಣ್ಣಾ ಹಜಾರೆಯವರ ಅಣ್ಣಾ ಸಮರ್ಥಕ್ ಗಾಂಧಿವಾದಿ ಸಂಘದ ರಾಜ್ಯ ಪ್ರತಿನಿಧಿಯಾಗಿದ್ದಾರೆ.
ಬಾಲ್ಯದಿಂದಲೇ ರಾಜಶೇಖರ್ ಅವರಿಗೆ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯಿತ್ತಂತೆ. ಒಮ್ಮೆ ಶಾಲೆಗೆ ಶಿಕ್ಷಕರೊಬ್ಬರು ಮದ್ಯಪಾನ ಸೇವಿಸಿ ಬಂದಿದ್ದಾಗ ಅವರ ವಿರುದ್ಧ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರಂತೆ. ನಂತರ ಆ ಶಿಕ್ಷಕರನ್ನು ಅಮಾನತು ಮಾಡಲಾಯಿತು.
ತಮ್ಮ ದ್ವಿಚಕ್ರ ವಾಹನ ದಾಖಲು ಮಾಡಿಕೊಳ್ಳಲು ಆರ್ ಟಿಒ ಅಧಿಕಾರಿಗಳು ಲಂಚ ಕೇಳಿದಾಗ ಲೋಕಾಯುಕ್ತಕ್ಕೆ ರಾಜಶೇಖರ್ ದೂರು ನೀಡಿದ್ದರಂತೆ. ತಾನು ಉದ್ಯಮ ನಡೆಸಲು ರಿಜಿಸ್ಟರ್ ಮಾಡಲು ಹೋದಾಗ ಅಧಿಕಾರಿ ಲಂಚ ಕೇಳಿದ ಅಧಿಕಾರಿ ವಿರುದ್ಧ ದೂರು ನೀಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರಂತೆ. ಶೌಚಾಲಯ ನಿರ್ಮಾಣದಲ್ಲಿ 10 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಬಳಕೆ ಮಾಡಿದ್ದ ಅಧಿಕಾರಿಗಳ ವಿರುದ್ಧ ರಾಜಶೇಖರ್ ಸಿಸಿಬಿಗೆ ದೂರು ನೀಡಿದ್ದರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್