ಲಿಂಗನಮಕ್ಕಿ ಜಲಾಶಯ 
ರಾಜ್ಯ

ಎಲ್ಲೆಲ್ಲೂ ನೀರೋ ನೀರು, ಆದರೆ ಜಲಾಶಯದಲ್ಲಿ ಮಾತ್ರ ಇಲ್ಲ ನೀರು!

ಹಿಂದಿನ ವರ್ಷಕ್ಕಿಂತ ಈ ಬಾರಿ ರಾಜ್ಯದಲ್ಲಿ ಹೆಚ್ಚು ಮಳೆಯಾಗಿದೆ. ಆದರೆ ಜಲಾಶಯಗಳಲ್ಲಿ ಕಳೆದ ಬಾರಿಗಿಂತ ಈ ವರ್ಷ ಕಡಿಮೆ ನೀರು ಸಂಗ್ರಹವಾಗಿದೆ...

ಬೆಂಗಳೂರು: ಹಿಂದಿನ ವರ್ಷಕ್ಕಿಂತ ಈ ಬಾರಿ ರಾಜ್ಯದಲ್ಲಿ ಹೆಚ್ಚು ಮಳೆಯಾಗಿದೆ. ಆದರೆ ಜಲಾಶಯಗಳಲ್ಲಿ ಕಳೆದ ಬಾರಿಗಿಂತ ಈ ವರ್ಷ ಕಡಿಮೆ ನೀರು ಸಂಗ್ರಹವಾಗಿದೆ.

ಜೂನ್ ಮೊದಲ ವಾರದಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಸುಮಾರು 357.2 ಮಿಮಿ ಮಳೆಯಾಗಿದೆ.  ಕಳೆದ ವರ್ಷ 336.7 ಮಿಮಿ ಮಳೆಯಾಗಿತ್ತು. ಅಂದರಾ ಈ ಬಾರಿ ವಾಡಿಕೆಗಿಂತ 6 ಮಿಮಿ ಹೆಚ್ಚು ಮಳೆ ಸುರಿದಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಐದು ದಿನಗಳಲ್ಲಿ, ಕರ್ನಾಕದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ 2 ದಿನಗಳಲ್ಲಿ ದಕ್ಷಿಣ ಒಳನಾಡು ಸೇರಿದಂತೆ ಮಾಸೂರು, ಚಿಕ್ಕಮಗಳೂರು, ರಾಮನಗರ, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ವರ್ಷಗಳಿಗೆ ಹೋಲಿಸಿದರೇ ಪ್ರಸಕ್ತ ವರ್ಷ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಅವುಗಳ ಅಂಕಿ ಅಂಶ ಇಲ್ಲಿದೆ.

ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ, 26.42 ಟಿಎಂಸಿ ನೀರು ಇತ್ತು, ಈ ವರ್ಷ 17.31 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕೆಆರ್ ಎಸ್ ನಲ್ಲಿ 21.31 ಸಂಗ್ರಹವಾಗಿದೆ, ಹಿಂದಿನ ವರ್ಷ 29.19 ಟಿಎಂಸಿ ಅಡಿ ನೀರಿತ್ತು.
ಕಬಿನಿ ಜಲಾಶಯದಲ್ಲಿ ಕಳೆದ ವರ್ಷ 19.04 ಟಿಎಂಸಿ ಅಡಿ ನೀರಿತ್ತು, ಆದರೆ ಈ  ಬಾರಿ  ಕೇವಲ 12.53 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ.

ನೀರು ತಜ್ಞ ಕ್ಯಾಪ್ಟನ್ ರಾಜಾ ರಾವ್, ಅವರ ಪ್ರಕಾರ, ಸೋರಿಕೆಯಿಂದಾಗಿ ಹೆಚ್ಚಿನ ನೀರು ವ್ಯರ್ಥವಾಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ಮಂಡಳಿ ಪ್ರಕಾರ, ಮುಂಗಾರು ಸಮಯದಲ್ಲಿ ಒಂದು ಪ್ರಮಾಣದ ನೀರನ್ನು ಪ್ರತಿ ವರ್ಷ ತಮಿಳುನಾಡಿಗೆ ಹರಿಸಬೇಕಾಗಿದೆ.ಒಂದು ವೇಳೆ ಹೆಚ್ಚಿನ ಪ್ರಮಾಣದ ನವೀರು ಹರಿಸಿದರೇ ಸರ್ಕಾರ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ನೀರು ಹರಿಸಿದರೇ ಸರ್ಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿಲ್ಲ, ಜೂನ್ ತಿಂಗಳಲ್ಲಿ ತಮಿಳುನಾಡಿಗೆ 10 ಟಿಎಂಸಿ ನೀರು ಬಿಡಲಾಗಿದೆ. ಜುಲೈ ನಲ್ಲಿ 34 ಟಿಎಂಸಿ ನೀರು ಬಿಡಬೇಕಾಗಿದೆ.  ಆದರೆ ಈಗ ಜಲಾಶಯದಲ್ಲಿ ಕೇವಲ 2.88 ಅಡಿ ಮಾತ್ರ ನೀರು ಉಳಿದಿದೆ. ಹೀಗಾಗಿ ನೆರೆಯ ರಾಜ್ಯಕ್ಕೆ ಬಿಡಲು ಅವಶ್ಯಕವಾಗಿರುವಷ್ಟು ನೀರು ಸಂಗ್ರಹವಾಗಿಲ್ಲ, ಜಲಾಶಯಗಲ್ಲಿ ನೀರಿನ ಸಂಗ್ರಹ ಕಡಿಮೆಯಾದರೇ ಮುಂದಿನ ಬೇಸಿಗೆಯಲ್ಲಿ ಈ ವರ್ಷಕ್ಕಿಂತ ಹೆಚ್ಚು ಸಮಸ್ಯೆ ಉದ್ಭವವಾಗುತ್ತದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!