ಬೆಲ್ಜಿಯಂ ತಲುಪಿದ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) 
ರಾಜ್ಯ

ಬೆಲ್ಜಿಯಂ ತಲುಪಿದ ಸಿಎಂ ಸಿದ್ದರಾಮಯ್ಯ; ಪುತ್ರ ರಾಕೇಶ್ ಗೆ ಐಸಿಯು ನಲ್ಲಿ ಚಿಕಿತ್ಸೆ

ಅನಾರೋಗ್ಯಕ್ಕೀಡಾಗಿರುವ ಪುತ್ರ ರಾಕೇಶ್ ಅವರ ಯೋಗಕ್ಷೇಮ ವಿಚಾರಣೆಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಲ್ಜಿಯಂ ತಲುಪಿದ್ದು, ತೀವ್ರ ನಿಗಾ ಘಟಕದಲ್ಲಿರುವ ಪುತ್ರನ ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರು: ಅನಾರೋಗ್ಯಕ್ಕೀಡಾಗಿರುವ ಪುತ್ರ ರಾಕೇಶ್ ಅವರ ಯೋಗಕ್ಷೇಮ ವಿಚಾರಣೆಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಲ್ಜಿಯಂ ತಲುಪಿದ್ದು, ತೀವ್ರ ನಿಗಾ  ಘಟಕದಲ್ಲಿರುವ ಪುತ್ರನ ಆರೋಗ್ಯ ವಿಚಾರಿಸಿದ್ದಾರೆ.

ಈ ಹಿಂದೆ ರಾಕೇಶ್ ಅವರ ಯೋಗಕ್ಷೇಮ ವಿಚಾರಣೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಬಿಲ್ಜಿಯಂಗೆ ತೆರಳಬೇಕಿತ್ತು. ಆದರೆ ನಿಗದಿತ ಸಮಯದಲ್ಲಿ ವೀಸಾ ದೊರೆಯದ ಕಾರಣ  ಸ್ವತಃ ಸಿದ್ದರಾಮಯ್ಯ ಅವರೇ ಬೆಲ್ಜಿಯಂಗೆ ತೆರಳಿದ್ದಾರೆ. ಇಂದು ಪಾರ್ವತಿ ಅವರಿಗೆ ವೀಸಾ ದೊರೆಯಲಿದ್ದು, ಇಂದು ಸಂಜೆ ವೇಳೆಗೆ ಅವರು ಬೆಲ್ಜಿಯಂನತ್ತ ಪಯಣ ಬೆಳೆಸಲಿದ್ದಾರೆ ಎಂದು  ತಿಳಿದುಬಂದಿದೆ.

ಮೂಲಗಳ ಪ್ರಕಾರ ಆನಾರೋಗ್ಯಕ್ಕೀಡಾಗಿರುವ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ಪ್ಯಾಂಕ್ರಿಯಸ್ ನಿಂದ ಬಳಲುತ್ತಿದ್ದಾರೆ. ಅವರು ಸಣ್ಣ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದು,  ಇನ್ನೂ ನಾಲ್ಕರಿಂದ ಐದು ದಿನಗಳ ಕಾಲ ಐಸಿಯು ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ರಾಕೇಶ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರಾದರೂ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಬೆಂಗಳೂರಿನಿಂದ ತೆರಳಿರುವ ವೈದ್ಯರು ಸೇರಿದಂತೆ ನುರಿತ ವೈದ್ಯರ ತಂಡ ರಾಕೇಶ್  ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎ೦ದು ಸಿಎ೦ ಕಚೇರಿ ಮೂಲಗಳು ತಿಳಿಸಿವೆ. ಇನ್ನು ಸಿಎ೦ ಸಿದ್ದರಾಮಯ್ಯ ಅವರ ಜೊತೆಗೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಗೂ ಸ೦ಸದೀಯ  ಕಾರ್ಯದರ್ಶಿ ಕೆ. ಗೋವಿ೦ದರಾಜು ಅವರು ಕೂಡ ಇದ್ದು, ಈಗಾಗಲೇ ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ.ಯತೀ೦ದ್ರ ಹಾಗೂ ಇಬ್ಬರು ವೈದ್ಯರು ಬೆಲ್ಜಿಯ೦ನಲ್ಲಿ ಬೀಡುಬಿಟ್ಟು ರಾಕೇಶ್  ಅವರ ಚಿಕಿತ್ಸಾ ಮೇಲ್ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!