ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ನಮ್ಮ ಖಾಕಿಗೆ ಬೆಲೆಯಿಲ್ಲ: ತಮ್ಮ ಅಳಲು ತೋಡಿಕೊಂಡ ಪೊಲೀಸ್ ಸಿಬ್ಬಂದಿಗಳು

ರಾಜ್ಯದಾದ್ಯಂತ ಪೊಲೀಸರು ಸಾಮೂಹಿಕ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಕಳೆದೆರಡು ದಿನಗಳಿಂದ 10 ಸಾವಿರಕ್ಕೂ ಹೆಚ್ಚು ಗೃಹ ರಕ್ಷಕದಳ ಸಿಬ್ಬಂದಿಗಳು...

ನಮ್ಮ ಖಾಕಿಗೆ ಬೆಲೆಯಿಲ್ಲ: ತಮ್ಮ ಅಳಲು ತೋಡಿಕೊಂಡ ಪೊಲೀಸ್ ಸಿಬ್ಬಂದಿಗಳು
Manjula VN
Updated On : 4 Jun 2016, 10:21 am

ಬೆಂಗಳೂರು: ರಾಜ್ಯದಾದ್ಯಂತ ಪೊಲೀಸರು ಸಾಮೂಹಿಕ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಕಳೆದೆರಡು ದಿನಗಳಿಂದ 10 ಸಾವಿರಕ್ಕೂ ಹೆಚ್ಚು ಗೃಹ ರಕ್ಷಕದಳ ಸಿಬ್ಬಂದಿಗಳು ಕಾರ್ಯನಿರ್ವಹಿಸುವಂತೆ ನಿಯೋಜನೆ ಮಾಡಲಾಗಿದೆ.

ರಾಜ್ಯಕ್ಕೆ ಭದ್ರತೆ ನೀಡುತ್ತಿರುವ ಪೊಲೀಸರು ಇಂದು ಸಂಕಷ್ಟದಲ್ಲಿ ಜೀವನ ನೀಡುತ್ತಿದ್ದು, ಪೊಲೀಸ್ ಇಲಾಖೆ ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ವೇತನ, ಆರೋಗ್ಯ ಸೌಲಭ್ಯ ಹಾಗೂ ಸಾರಿಗೆ ಭತ್ಯೆಗಳನ್ನು ನೀಡುತ್ತಿಲ್ಲ ಎಂಬ ಕೂಗುಗಳು ಕೇಳಿ ಬರುತ್ತಿಲ್ಲ.

ಬೆಂಗಳೂರಿನ 2 ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ರಾಜ್ಯದ 10 ಸಾವಿರ ಸಿಬ್ಬಂದಿಗಳ ಕುಂದುಕೊರತೆಗಳ ಪಟ್ಟಿಯನ್ನು ವಿವಿಧ ಜಿಲ್ಲೆಗಳ ಎಸ್ ಪಿ ಮತ್ತು ಆಯುಕ್ತರಿಂದ ಪಡೆಯಲಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆಂದು ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಮಸ್ಯೆ ಕುರಿತಂತೆ ಮಾತನಾಡಿರುವ ಗೃಹ ರಕ್ಷಕ ಪೊಲೀಸ್ ದಳದ ಸಿಬ್ಬಂದಿಯಾಗಿರುವ ಪೂರ್ಣಿಮಾ ಎಂಬುವವರು ಮಾತನಾಡಿದ್ದು, ಕಳೆದ 5 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈಗಲೂ ನನ್ನ ವೇತನ ರು.12 ಸಾವಿರ. ತಿಂಗಳ ಎಲ್ಲಾ ದಿನಗಳಲ್ಲೂ ಕೆಲಸ ಮಾಡಬೇಕು. ನಮಗೆ ವಾರದಲ್ಲಿ ಯಾವ ದಿನವೂ ರಜೆ ಇರುವುದಿಲ್ಲ. ತಿಂಗಳಲ್ಲಿ ಒಂದು ದಿನ ರಜೆ ತೆಗೆದುಕೊಂಡರೂ ವೇತನದಲ್ಲಿ ಕಡಿತ ಮಾಡಲಾಗುತ್ತದೆ.
ನನ್ನ ಪತಿ ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನನಗೆ ಮೂವರು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳೂ ಶಾಲೆಗೆ ಹೋಗುತ್ತಿದ್ದು, ಇಲಾಖೆ ನೀಡುತ್ತಿರುವ ವೇತನ ಯಾವುದಕ್ಕೂ ಸಾಲದಂತಾಗಿದೆ ಎಂದು ಹೇಳಿದ್ದಾರೆ.

ಇನ್ನು ಇಲಾಖೆ ವೇತನವನ್ನು 3 ತಿಂಗಳಿಗೊಮ್ಮೆ ನೀಡುತ್ತದೆ. ಬ್ಯಾಂಕುಗಳಿಂದ ಸಾಲವನ್ನು ಪಡೆದಿದ್ದು, ಮೂರು ತಿಂಗಳಿಗೊಮ್ಮೆ ಸಂಬಳ ನೀಡಿದರೆ ಸಾಲ ತೀರಿಸುವುದು ಹೇಗೆ. ಮನೆಯ ಬಾಡಿಗೆಯನ್ನು ಪತಿಗೆ ಬರುವ ವೇತನದಿಂದ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದರಂತೆ ಮತ್ತೊಬ್ಬರು ಸಿಬ್ಬಂದಿ ಪಾರ್ವತಿ ಎಂಬುವವರು ಮಾತನಾಡಿದ್ದು, ನಮಗೆ ಸರಿಯಾದ ಸಮಯಕ್ಕೆ ವೇತನ ಬರುವುದಿಲ್ಲ. ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ. ನಮಗೆ ವೈದ್ಯಕೀಯ ಹಾಗೂ ಪ್ರಸೂತಿ ಸಮಯದಲ್ಲಿ ಸೌಲಭ್ಯಗಳು ಸಿಗುವುದಿಲ್ಲ. ಬಿಎಂಟಿಸಿ ಪಾಸ್ ಸೌಲಭ್ಯಗಳು ಕೊಡುತ್ತಿಲ್ಲ. ಬಸ್ ನಲ್ಲಿ ಸಂಚರಿಸುವಾಗ ನಾವು ನಮ್ಮ ಗುರುತಿನ ಚೀಟಿಯನ್ನು ತೋರಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement