ಬೆಂಗಳೂರು: ಪರಿಸರ ನಾಶ ಮಾಡುವುದೆಂದರೆ ಜನರಿಗೆ ರೋಗದಂತೆ ಅಂಟಿಕೊಂಡುಬಿಟ್ಟಿದೆ, ಇದನ್ನು ದೂರ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರ ನಾಶವಾಗುತ್ತಿದೆ. ಪ್ರಾಣಿ ಪಕ್ಷಿಗಳ ಸಂಖ್ಯೆ ಕ್ಷೀಣವಾಗುತ್ತಿದೆ ಎಂದರು.
ನಾವು ಕಾಡು ಬೆಳೆಸಿಲ್ಲ, ಉಳಿಸಿಲ್ಲ ಹೀಗಾಗಿ ಹವಮಾನದಲ್ಲಿ ಸಾಕಷ್ಟು ಏರುಪೇರಾಗಿದೆ. ಭೂಮಿಯ ಶೇಕಡಾ 3/1 ರಷ್ಟು ಅರಣ್ಯ ಇರಬೇಕು ಆದರೆ ಕರ್ನಾಟಕದಲ್ಲಿ 20% ಮಾತ್ರ ಇದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಇದೇ ವೇಳೆ ಸರಕಾರದ ವತಿಯಿಂದ ಮೂವರು ವ್ಯಕ್ತಿಗಳು ಮತ್ತು ಮೂರು ಸಂಸ್ಥೆಗಳಿಗೆ ಪರಿಸರ ಪ್ರಶಸ್ತಿ ಪ್ರದಾನ ಮಾಡಲಾಯಿತು.