ಅನುಪಮಾ ಶೆಣೈ 
ರಾಜ್ಯ

ಡಿವೈಎಸ್ ಪಿ ಅನುಪಮಾ ಶೆಣೈ ರಾಜೀನಾಮೆಗೆ ಕಾರಣವಾಯ್ತಾ ಲಿಕ್ಕರ್ ಲಾಬಿ ?

ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆಗೆ ಲಿಕ್ಕರ್ ಲಾಬಿ ಕಾರಣವೇ ಹೀಗೊಂದು ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ದಕ್ಷ, ಪ್ರಾಮಾಣಿಕ, ಕೆಚ್ಚೆದೆಯ ..

ಬೆಂಗಳೂರು: ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆಗೆ ಲಿಕ್ಕರ್ ಲಾಬಿ ಕಾರಣವೇ ಹೀಗೊಂದು ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ದಕ್ಷ, ಪ್ರಾಮಾಣಿಕ, ಕೆಚ್ಚೆದೆಯ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಅನುಪಮಾ ಶೆಣೈ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.

ಇನ್ನು ಅನುಪಮಾ ಶೆಣೈ ಫೇಸ್‌ಬುಕ್ ಖಾತೆಯಲ್ಲಿ `ಲಿಕ್ಕರ್ ಲಾಬಿಗೆ ಕೂಡ್ಲಗಿ ಜನತೆ ಶರಣು ಶರಣು ಎನ್ನಿರೇ' ಎನ್ನುವ ಸ್ಟೇಟಸ್ ಹರಿದಾಡುತ್ತಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ, `ಸಿದ್ದರಾಮಯ್ಯರ 'ರಮ್' ರಾಜ್ಯ- ಎಂದು ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟನ್ನು, ಅನುಪಮಾ ಅವರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 
ಜೊತೆಗೆ, ಕೇವಲ ಒಂದು ಗಂಟೆ ಹಿಂದಷ್ಟೇ  ಅನುಪಮಾ ಅವರು ತಮ್ಮ ಪ್ರೊಫೈಲ್ ಫೋಟೋ ಬದಲಿಸಿ, ಕ್ರಾಂತಿಕಾರಿ ಸಂದೇಶ (ಅನ್ಯಾಯ ಅನ್ನೋದು ಕಾನೂನಾದಾಗ ಬಂಡಾಯ ಅನ್ನೋದು ಕರ್ತವ್ಯವಾಗುತ್ತದೆ ) ವಿರುವ ಸ್ಲೋಗನ್ ಹಾಕಿದ್ದಾರೆ.
ಕ್ಷಣಕ್ಷಣಕ್ಕೂ ಅವರ ರಾಜೀನಾಮೆ ಪ್ರಕರಣ ಹೊಸತೊಂದು ಕುತೂಹಲಕ್ಕೆ ಎಡೆಮಾಡಿಕೊಡುತ್ತಿದೆ.  

ಅದರ ಹಿನ್ನೆಲೆಯಲ್ಲಿ ನಿಜವಾಗಿಯೂ ಲಿಕ್ಕರ್ ಲಾಬಿಯ ಕೈವಾಡವಿದೆಯೇ ಎಂಬ ಪ್ರಶ್ನೆ ಜನತೆಯನ್ನು ಕಾಡುತ್ತಿದೆ. ಸಿದ್ದರಾಮಯ್ಯನವರ ಸರಕಾರ ಭ್ರಷ್ಟತೆಯಿಂದ ಕೂಡಿದ್ದು, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶವೇ ಇಲ್ಲ ಎಂದು  ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!