ಕಾಮಗಾರಿ ಪರಿಶೀಲಿಸುತ್ತಿರುವ ಸಿಎಂ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡರು.
ಇಂದು ಬೆಳಗ್ಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಸಿದ್ದರಾಮಯ್ಯ, ಹೆಣ್ಣೂರು ಓವರ್ ಬ್ರಿಡ್ಜ್ ಕಾಮಗಾರಿ ವಿಳಂಬವನ್ನು ಪ್ರಶ್ನಿಸಿ ಬಿಡಿಎ ಭೂಸ್ವಾಧೀನ ಅಧಿಕಾರಿ ವಸಂತ್ ಕುಮಾರ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕಾಮಗಾರಿ ವಿಳಂಬದ ಕುರಿತಾಗಿ ವಸಂತ್ ಅವರನ್ನು ಪ್ರಶ್ನಿಸಿದ ಸಿಎಂ 'ಎನೋ ಇದು.. ಮಾನ ಮಾರ್ಯಾದೆ ಇಲ್ವಾ ಇಂಥಾ ಕೆಲ್ಸ ಮಾಡೋಕೆ. ಇನ್ನು ಒಂದು ತಿಂಗಳ ಒಳಗೆ ಭೂಸ್ವಾಧೀನ ನಡೆಸಬೇಕು, ಇಲ್ಲದಿದ್ದರೆ ಸಂಸ್ಪೆಂಡ್ ಮಾಡಿ ಬಿಡ್ತೇನೆ ಎಂದು ಗದರಿದರು. ಅಲ್ಲದೆ ನಂಜಪ್ಪ ಸಂಬಂಧಿ ಆದ್ರೂ ತೊಂದ್ರೆ ಇಲ್ಲ, ಸಂಸ್ಪೆಂಡ್ ಮಾಡಿ ಬಿಡ್ತಿನಿ ಎಂದು ಎಚ್ಚರಿಸಿದರು.
ವಸಂತ್ ಅವರು ತೆಂಗು ನಾರು ನಿಗಮ ಮಂಡಳಿ ಅಧಕ್ಷ, ಕಾಂಗ್ರೆಸ್ ನಾಯಕ ನಂಜಪ್ಪ ಅವರ ಸಂಬಂಧಿ ಎಂದು ಹೇಳಿಕೊಂಡಿದ್ದರು.