ರಾಜ್ಯದ 16 ಕಾಲೇಜುಗಳಿಗೆ ಯುಜಿಸಿಯ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಮಾನ್ಯತೆ
ರಾಜ್ಯದ ಒಟ್ಟು 16 ಕಾಲೇಜುಗಳಿಗೆ ಈ ಬಾರಿ ಯುಜಿಸಿಯ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್(ಸಂಭಾವ್ಯ ಶ್ರೇಷ್ಠ ಕಾಲೇಜು) ಮಾನ್ಯತೆ...
ಬೆಂಗಳೂರು: ರಾಜ್ಯದ ಒಟ್ಟು 16 ಕಾಲೇಜುಗಳಿಗೆ ಈ ಬಾರಿ ಯುಜಿಸಿಯ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್(ಸಂಭಾವ್ಯ ಶ್ರೇಷ್ಠ ಕಾಲೇಜು) ಮಾನ್ಯತೆ ದೊರೆತಿದೆ.
ಮಹಾರಾಣಿ ವಿಜ್ಞಾನ ಕಾಲೇಜು, ಎಸ್ ಜೆಆರ್ ಪದವಿ ಕಾಲೇಜು, ವಿಜಯಾ ಕಾಲೇಜು, ಮಲ್ಲೇಶ್ವರ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮೈಸೂರಿನಲ್ಲಿರುವ ಜೆಎಸ್ ಎಸ್ ಕಾನೂನು ಕಾಲೇಜು, ಪುತ್ತೂರಿನಲ್ಲಿರುವ ವಿವೇಕಾನಂದ ಕಾಲೇಜು ಸೇರಿದಂತೆ ಒಟ್ಟು 16 ಕಾಲೇಜುಗಳಿಗೆ ಮಾನ್ಯತೆ ದೊರೆತಿದೆ. ಈ ಮೂಲಕ ಈ ಕಾಲೇಜುಗಳು ವಿಶ್ವವಿದ್ಯಾಲಯ ವ್ಯಾಪ್ತಿಯಿಂದ ಹೊರಬಂದು ಶೈಕ್ಷಣಿಕವಾಗಿ ಸ್ವಾಯತ್ತತೆ ಪಡೆಯಲು ಮೊದಲ ಹೆಜ್ಜೆ ಇಟ್ಟಂತಾಗಿದೆ.
ಕಾಲೇಜುಗಳು ಅಟಾನಮಿ ಪಡೆಯುವ ವಿಚಾರದಲ್ಲಿ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಮಾನ್ಯತೆ ಮೊದಲ ಹೆಜ್ಜೆಯಾಗಿರುತ್ತದೆ. ಇದರ ಬಳಿಕ ಕಾಲೇಜ್ ವಿತ್ ಎಕ್ಸಲೆನ್ಸ್ ಮಾನ್ಯತೆ ಪಡೆದು ಮೂರನೇ ಹಂತವಾಗಿ ಅಟಾನಮಿ ಅರ್ಹತೆ ಪಡೆಯಬಹುದಾಗಿರುತ್ತದೆ. ಪ್ರಸಕ್ತ ವರ್ಷ ದೇಶದ 124 ಕಾಲೇಜುಗಳಿಗೆ ಈ ಮಾನ್ಯತೆ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ, ಅಗತ್ಯ ಬೋಧಕ ಸಿಬ್ಬಂದಿ ಹಾಗೂ ಮೂಲಸೌಕರ್ಯ, ಸಂಶೋಧನೆಗೆ ಒತ್ತು ನೀಡುತ್ತಿರುವುದನ್ನು ಪರಿಗಣಿಸಿ ಯುಜಿಸಿ ಮಾನ್ಯತೆ ನೀಡುತ್ತದೆ. ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಮಾನ್ಯತೆಗೆ ಪಾತ್ರವಾಗುವ ಕಾಲೇಜುಗಳಿಗೆ ವಾರ್ಷಿಕ ರು.1.50 ಕೋಟಿ ಅನುದಾನ ಯುಜಿಸಿಯಿಂದ ದೊರೆಯುತ್ತದೆ.
ಮಾನ್ಯತೆ ಪಡೆದ ರಾಜ್ಯದ 16 ಕಾಲೇಜುಗಳು
- ಬೆಂಗಳೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು
- ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜು
- ವಿಜಯಾ ಕಾಲೇಜು
- ಮಲ್ಲೇಶ್ವರ ಮಹಿಳಾ ಪ್ರಥಮಾ ದರ್ಜೆ ಕಾಲೇಜು
- ಗದಗ ಜಿಲ್ಲೆಯ ಕೆಎಸ್ ಎಸ್ ಆರ್ಟ್ಸ್, ಕಾಮರ್ಸ್ ಮತ್ತು ವಿಜ್ಞಾನ ಕಾಲೇಜು
- ಬೆಳಗಾವಿ ಕೆಎಲ್ ಇ ಸೊಸೈಟಿಯ ರಾಜ ಲಕಮಗೌಡ ಸೈನ್ಸ್ ಕಾಲೇಜು
- ಮಡಿಕೇರಿಯ ಕೆಎಂ ಕಾರ್ಯಪ್ಪ ಕಾಲೇಜು
- ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು
- ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು
- ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು
- ಅಂಕೋಲದ ಗೋಖಲೆ ಸೆಂನರಿ ಕಾಲೇಜು
- ಪುತ್ತೂರು ತಾಲೂಕಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
- ಜೆಎಸ್ ಎಸ್ ಕಾನೂನು ಕಾಲೇಜು.
- ಚಿಕ್ಕೋಡಿಯ ಬಸವ ಪ್ರಭು ಕೋರೆ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು
- ಮೈಸೂರಿನ ಅಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್
- ನಿಪ್ಪಾಣಿಯ ಬಾಗೇವಾಡಿ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.