ವಿದ್ಯಾರ್ಥಿನಿಲಯದ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು
ಮೈಸೂರು: ಸೋಲಾರ್ ನಿರ್ವಹಣೆ ಹೆಸರಿನಲ್ಲಿ ಆಡಳಿತ ಮಂಡಳಿ ರು.10 ಲಕ್ಷ ಹಣ ವಂಚಿಸಿರುವ ಬಗ್ಗೆ ಮಹಾರಾಣಿ ಹಾಸ್ಟೆಲ್ ನ ವಿದ್ಯಾರ್ಥಿನಿಯರು ಬಹಿರಂಗಗೊಳಿಸಿದ್ದಾರೆ.
ಮಹಾರಾಣಿ ಮಹಿಳಾ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಮೂಲಸೌಕರ್ಯ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಭಾನುವಾರ ವಿದ್ಯಾರ್ಥಿ ನಿಲಯದ ಮುಂದೆ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಲಯದಲ್ಲಿ ಕಳೆಪೆ ಗುಣಮಟ್ಟದ ಆಹಾರ ಸೇರಿದಂತೆ ಮೂಲ ಸೌಕರ್ಯದ ಕೊರತೆ ಇದೆ. ಆದರೆ, ಇದರ ನಿರ್ವಹಣೆಗೆ 10 ಬಿಲ್ ಗಳನ್ನು ತೋರಿಸಿ ರು.10 ಲಕ್ಷ ವಂಚಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗಿರುವ ಹಾಸ್ಟೆಲ್ ನ ಅಧ್ಯಕ್ಷರು ಅಕ್ಟೋಬರ್ 2015ರಿಂದ ಜನವರಿ 27,2016ರವರೆಗೆ ಜೈ ಎನರ್ಜಿ ಸೋಲಾರ್ ಸಿಸ್ಟಮ್ ನಿರ್ವಹಣೆಗಾಗಿ 10 ಬಿಲ್ ಗಳಿಗೆ ಅನುಮೋದನೆ ನೀಡಿದ್ದಾರೆ.
ಈ ಬಿಲ್ ಗಳಲ್ಲಿ ಸೋಲಾರ್, ಸೌರ ಫಲಕ ಕೊರೆಯುವ, ಎಳೆದುಕಟ್ಟುವಿಕೆಗೆ, ರಾಸಾಯನಿಕ ಕ್ಲೀನಿಂಗ್, ಬದಲಿಗೆ ಅನಿಲ ಕಿಟ್, ಕಾಯಿ ಬೋಲ್ಟ್ ಮತ್ತು ಹೊಸ ನೀರು ಕಾಯಿಸುವ ಸೌರ ಸಾಧನಗಳಲ್ಲಿ ಫಿಕ್ಸಿಂಗ್ ಗಳಿಗಾಗಿ ಹಣವನ್ನು ಬಿಡುಗಡೆಗೊಳಿಸಲಾಗಿದೆ. ರು.2.50 ಲಕ್ಷದಂತೆ ಮೂರು ಬಿಲ್ ಗಳನ್ನು ಅನುಮೋದನೆ ಮಾಡಲಾಗಿದೆ. ಮೂಲ ಸೌಕರ್ಯಗಳ ನಿರ್ವಹಣೆಗಾಗಿ ಸರ್ಕಾರದಿಂದ ಹಣ ಪಡೆದಿದ್ದರೂ, ವಿದ್ಯಾರ್ಥಿನಿಯರಿಂದಲೂ ಆಡಳಿತ ಮಂಡಳಿ ಹಣ ವಸೂಲಿ ಮಾಡಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics