ರಾಜ್ಯ

ಮೈಸೂರಿನಾಚೆಗೂ ವ್ಯಾಪಿಸಿರುವ ಮಕ್ಕಳ ಮಾರಾಟ ಜಾಲ

Shilpa D

ಮೈಸೂರು: ನಂಜನಗೂಡು ಮತ್ತು ಮೈಸೂರಿನಲ್ಲಿ ಪತ್ತೆಯಾದ ಮಕ್ಕಳ ಮಾರಾಟ ಜಾಲ ಮೈಸೂರಿನಿಂದ ಹೊರಗೂ ವ್ಯಾಪಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಆರೋಪಿಗಳು ಕನಿಷ್ಠ 15 ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಿದ್ದಾರೆ, ಇದರಲ್ಲಿ ಆರು ಮಂದಿ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಮೈಸೂರು ಜಿಲ್ಲಾ ಎಸ್ ಪಿ ರವಿ.ಡಿ ಚನ್ನಣ್ಣನವರ್ ತಿಳಿಸಿದ್ದಾರೆ. ಈ ಆರು ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ,

ಸುಮಾರು 10 ರಿಂದ 15 ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಅಪಹರಿಸಿರುವ ಬಹುತೇಕ ಮಕ್ಕಳು ಭಿಕ್ಷುಕರೇ ಆಗಿದ್ದಾರೆ. ಬಿಕ್ಷೆ ಬೇಡುವ ಮಕ್ಕಳು ಹಾಗೂ ಮನೆ ಬಿಟ್ಟು ಬಂದ ಮಕ್ಕಳೇ ಇವರ ಪ್ರಮುಖ ಟಾರ್ಗೆಟ್ ಆಗಿದ್ದಾರೆ.

ವಿವಿಧ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಕೆಲಸ ಮಾಡುವ ಹಲವು ಮಂದಿ ಈ ಜಾಲದಲ್ಲಿ ಭಾಗಿಯಾಗಿದ್ದಾರೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.  ಮೈಸೂರಿನಲ್ಲಿ ನಾಪತ್ತೆಯಾಗಿರುವ ಮಕ್ಕಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

SCROLL FOR NEXT