ಸಂಗ್ರಹ ಚಿತ್ರ 
ರಾಜ್ಯ

ದುನಿಯಾ ವಿಜಿ ಆಗಮನದ ಬಳಿಕ ಅನಿಲ್ ಅಂತ್ಯ ಸಂಸ್ಕಾರ: ಅನಿಲ್ ಸಹೋದರ ಹರೀಶ್ ಹೇಳಿಕೆ

ನಟ ದುನಿಯಾ ವಿಜಿ ಅವರೊಂದಿಗೆ ಚರ್ಚಿಸಿ ಮೃತ ಅನಿಲ್ ಅವರ ಅಂತ್ಯ ಸಂಸ್ಕಾರವನ್ನು ನಡೆಸುತ್ತೇವೆ ಎಂದು ಅನಿಲ್ ಸಹೋದರ ಹರೀಶ್ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರು: ನಟ ದುನಿಯಾ ವಿಜಿ ಅವರೊಂದಿಗೆ ಚರ್ಚಿಸಿ ಮೃತ ಅನಿಲ್ ಅವರ ಅಂತ್ಯ ಸಂಸ್ಕಾರವನ್ನು ನಡೆಸುತ್ತೇವೆ ಎಂದು ಅನಿಲ್ ಸಹೋದರ ಹರೀಶ್ ಅವರು ಗುರುವಾರ ಹೇಳಿದ್ದಾರೆ.

ಇಂದು ಬೆಳಗ್ಗೆ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಅನಿಲ್ ಮೃತದೇಹ ಕೂಡ ಪತ್ತೆಯಾಗಿದ್ದು, ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಅನಿಲ್ ಸಹೋದರ ಹರೀಶ್ ಅವರು ಕೂಡ  ಆಗಮಿಸಿದ್ದು, ಅಲ್ಲಿನ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಅವರು, ಪ್ರಸ್ತುತ ಅನಿಲ್ ಮೃತ ದೇಹ ದೊರೆತಿದೆ. ವಿಜಿ ಅವರ ಸಲಹೆ ಮೇರೆಗೆ ಸ್ಥಳದಲ್ಲೇ ಮರಣೋತ್ತರ  ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ಬಳಿಕ ದೇಹವನ್ನು ನಿವಾಸಕ್ಕೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ವಿಜಿ ಅವರು ಆಗಮಿಸಿದ ಬಳಿಕ ಅವರು ಮತ್ತು ಉದಯ್ ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ  ಇಬ್ಬರು ನಟರ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ನು ಬನಶಂಕರಿ 2ನೇ ಹಂತ ಕದಿರನೇಹಳ್ಳಿ ಕ್ರಾಸ್ ಬಳಿ ಇರುವ ಮೃತ ನಟ ಅನಿಲ್ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ  ಮುಗಿಯುತ್ತಿದ್ದಂತೆಯೇ ಸಾರ್ವಜನಿಕ ದರ್ಶನಕ್ಕೆ ತರಲಾಗುತ್ತದೆ. ಬಳಿಕ ಬನಶಂಕರಿಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT