ವಾಕಥಾನ್ ರ್ಯಾಲಿ 
ರಾಜ್ಯ

'ವಿಶ್ವ ಮಧುಮೇಹದ ದಿನ'ದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಪೌಷ್ಠಿಕಾಂಶ ತಜ್ಞರು

'ವಿಶ್ವ ಮಧುಮೇಹ ದಿನ'ದ ಅಂಗವಾಗಿ ನವೆಂಬರ್ 14 ರಂದು ದೇಶದ ಖ್ಯಾತ ನ್ಯೂಟ್ರಾಸಿಟಿಕಲ್ ಕಂಪನಿಯಾಗಿರುವ ಬ್ರಿಟಿಷ್ ಬಯೋಲಾಜಿಕಲ್ಸ್ ವಾಕಥಾನ್ ರ್ಯಾಲಿ ಆಯೋಜಿಸಿತ್ತು.

ಬೆಂಗಳೂರು: 'ವಿಶ್ವ ಮಧುಮೇಹ ದಿನ'ದ ಅಂಗವಾಗಿ ನವೆಂಬರ್ 14 ರಂದು ದೇಶದ ಖ್ಯಾತ ನ್ಯೂಟ್ರಾಸಿಟಿಕಲ್ ಕಂಪನಿಯಾಗಿರುವ ಬ್ರಿಟಿಷ್ ಬಯೋಲಾಜಿಕಲ್ಸ್ ವಾಕಥಾನ್ ರ್ಯಾಲಿ ಆಯೋಜಿಸಿತ್ತು. ಎಂಜಿ ರಸ್ತೆಯಲ್ಲಿ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಈ ವರ್ಷದ ಮಧುಮೇಹದ ಪರಿಕಲ್ಪನೆಯಾದ `ಮಧುಮೇಹದ ಮೇಲೊಂದು ದೃಷ್ಟಿ’ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಇದರ ಜತೆಗೆ ಮಧುಮೇಹದ ಪ್ರಕರಣಗಳು ಹೆಚ್ಚಾಗುತ್ತಿರುವುದು, ಇದರಿಂದ ಎದುರಾಗುವ ಸಮಸ್ಯೆಗಳೂ, ಆರ್ಥಿಕ ಹೊರೆ, ಈ ಸಮಸ್ಯೆಗಳಿಂದ ಹೊರ ಬರುವ ಬಗೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಚಾರವೆಂದರೆ ಮಧುಮೇಹ. ಇಂಟರ್‍ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್‍ನ(ಐಡಿಎಫ್)ನ 2015 ರ ವರದಿ ಪ್ರಕಾರ ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ. 2015 ರ ಅಂಕಿಅಂಶಗಳ ಪ್ರಕಾರ ಇಲ್ಲಿ 69.1 ದಶಲಕ್ಷ ಮಂದಿ ಮಧುಮೇಹಿಗಳಿದ್ದಾರೆ. ವಿಶ್ವಾರೋಗ್ಯ ಸಂಸ್ಥೆ ಅವಲೋಕಿಸಿರುವ ಪ್ರಕಾರ ಮಧುಮೇಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ಇರುವ ದೇಶಗಳಲ್ಲಿ. ಈ ಸಾವಿನ ಸಂಖ್ಯೆ 2016 ರಿಂದ 2030 ರ ಅವಧಿಯಲ್ಲಿ ದ್ವಿಗುಣವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮಧುಮೇಹ ಮತ್ತು ಅದರಿಂದ ಹೊರಬರುವ ಬಗೆಯ ಕುರಿತು ಪಾದಚಾರಿಗಳು, ವಾಹನ ಸವಾರರು, ಪ್ರಯಾಣಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಎಂಜಿ ರಸ್ತೆಯಲ್ಲಿ ವಾಕಥಾನ್ ರ್ಯಾಲಿ ಆಯೋಜಿಸಿತ್ತು.

ಬ್ರಿಟಿಷ್ ಬಯೋಲಾಜಿಕಲ್ಸ್‍ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ರೆಡ್ಡಿ ಅವರು ಮಾತನಾಡಿ, ``ಪ್ರಸ್ತುತ ವಿಶ್ವದಲ್ಲಿ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಇದು ಭಾರತಕ್ಕೆ ಮತ್ತು ಭಾರತೀಯರಿಗೆ ಎಚ್ಚರಿಕೆ ಗಂಟೆಯಾಗಿದೆ. ಲಕ್ಷ ಲಕ್ಷದಷ್ಟು ಜನರು ಈ ಮಧುಮೇಹ ಮತ್ತು ಇದರಿಂದ ಉಂಟಾಗುತ್ತಿರುವ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಉತ್ತಮ ಜೀವನ ಶೈಲಿ, ಔಷಧಿ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಪದ್ಧತಿ ರೂಢಿಸಿಕೊಂಡರೆ ಮಧುಮೇಹವನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ಇದಕ್ಕೆ ಸೂಕ್ತ ಚಿಕಿತ್ಸೆಗಳೂ ಇವೆ. ಕಳೆದ 25 ಕ್ಕೂ ಹೆಚ್ಚು ವರ್ಷಗಳಿಂದ ನಾವು ಮಧುಮೇಹ ತಡೆಗೆ ಅತ್ಯಂತ ಉತ್ತಮವಾದ ಪೌಷ್ಠಿಕಾಂಶ ಇರುವ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಮದುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯವಂತರಾಗಿ, ಸಂತೋಷವಾಗಿ ರೋಗಮುಕ್ತ ಜೀವನ ಸಾಗಿಸಲಿ ಎಂಬ ಉದ್ದೇಶದಿಂದ ಇಂತಹ ವಾಕಥಾನ್ ರ್ಯಾಲಿಯನ್ನು ಆಯೋಜಿಸಿದ್ದೇವೆ’’ ಎಂದರು.
ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕಂಪನಿಯ ಸಂಶೋಧಕರು, ಪೌಷ್ಠಿಕಾಂಶ ತಜ್ಞರು ಮತ್ತು ಸಾರ್ವಜನಿಕ ವಲಯದಲ್ಲಿ ಪೌಷ್ಠಿಕ ಆಹಾರಗಳ ಬಗ್ಗೆ ಅರಿವು ಮೂಡಿಸುತ್ತಿರುವ ಗಣ್ಯರು ಪಾಲ್ಗೊಂಡು ಮಧುಮೇಹ ಎಂಬ ಇತ್ತೀಚಿನ ಮಹಾಮಾರಿಯಿಂದ ಹೇಗೆ ದೂರವಿರಬೇಕು, ಒಂದು ವೇಳೆ ಈ ರೋಗ ಬಂದಿದ್ದೇ ಆದಲ್ಲಿ ಧೃತಿಗೆಡದೇ ಅದರಿಂದ ಹೊರಬರುವ ಬಗೆ ಹೇಗೆ, ಇದಕ್ಕೆ ಅಗತ್ಯವಾದ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಪೌಷ್ಠಿಕಾಂಶ ಉತ್ಪನ್ನಗಳನ್ನು ತಯಾರಿಸುತ್ತಿರುವ ದೇಶದ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬ್ರಿಟಿಷ್ ಬಯೋಲಾಜಿಕಲ್ಸ್ ಪಾತ್ರವಾಗಿದೆ. ಮಧುಮೇಹಕ್ಕೆ ಮತ್ತು ಮಧುಮೇಹ ತಡೆಗೆ ಈ ಸಂಸ್ಥೆ ಉತ್ಪಾದಿಸುತ್ತಿರುವ ಡಿ-ಪ್ರೊಟೀನ್ ಎಲ್ಲರ ಮನೆಮಾತಾಗಿದೆ. ಕಂಪನಿಯು ಮನುಷ್ಯನಿಗೆ ಅಗತ್ಯವಾದ ಪೌಷ್ಠಿಕಾಂಶಗಳನ್ನು ನೀಡಬಲ್ಲಂತಹ ಅತ್ಯಂತ ವಿಶ್ವಾಸಾರ್ಹವಾದ ಉತ್ಪನ್ನಗಳನ್ನು ತಯಾರಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT