ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬಿಲ್ ಮೇಲೆ 1 ರುಪಾಯಿ ಹೆಚ್ಚುವರಿ ಸಂಗ್ರಹ: ಕೋರ್ಟ್ನಲ್ಲಿ ಮಾನ ಕಳೆದುಕೊಂಡ ಅಡಿಗಾಸ್

ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಹಣ ನೀಡುವುದಕ್ಕಾಗಿ ಅಡಿಗಾಸ್ ಹೊಟೇಲ್ ಗ್ರಾಹಕರಿಂದ ಪ್ರತಿ ಬಿಲ್ ಮೇಲೆ 1 ರುಪಾಯಿ ಹೆಚ್ಚುವರಿ ಹಣ...

ಅಡಿಗಾಸ್ ಹೊಟೇಲ್
Vishwanath S
Updated On : 24 Sept 2016, 3:49 am
ಬೆಂಗಳೂರು: ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಹಣ ನೀಡುವುದಕ್ಕಾಗಿ ಅಡಿಗಾಸ್ ಹೊಟೇಲ್ ಗ್ರಾಹಕರಿಂದ ಪ್ರತಿ ಬಿಲ್ ಮೇಲೆ 1 ರುಪಾಯಿ ಹೆಚ್ಚುವರಿ ಹಣ ಪಡೆಯುತ್ತಿದ್ದು ಇದೀಗ  ಗ್ರಾಹಕರ ನ್ಯಾಯಾಲಯದಲ್ಲಿ ಮಾನಕಳೆದುಕೊಂಡಿದೆ.
ಯೋಜನೆಗೆ ಹಣದ ನೆರವು ನೀಡುವುದಾದರೆ ವೈಯಕ್ತಿಕ ಆದಾಯ ಅಥವಾ ಹೊಟೇಲ್ ಆದಾಯದಲ್ಲಿ ನೀಡಬೇಕೆ ಹೊರತು ಗ್ರಾಹಕರಿಂದ ಹಣ ವಸೂಲಿ ಮಾಡಿ ಅಲ್ಲ ಎಂದು ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಡಿಗಾಸ್ ಹೊಟೇಲ್ ನವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅಡಿಗಾಸ್ ಅರ್ಜಿ ವಜಾ ಆಗಿದ್ದು, ದಂಡ ಕಟ್ಟುವ ಪರಿಸ್ಥಿತಿಗೆ ತಲುಪಿದೆ. 
ಅಡಿಗಾಸ್ ಹೊಟೇಲ್ ನವರು ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರು 2013ರಲ್ಲಿ ಗ್ರಾಹಕರ ಕೋರ್ಟ್ ಗೆ ದೂರು ನೀಡಿದ್ದರು. ವಾದ ವಿವಾದ ಆಲಿಸಿದ ಕೋರ್ಟ್ ವಾಸುದೇವ್ ಅಡಿಗಾಸ್ ಹೊಟೇಲ್ ನವರಿಗೆ 100 ರುಪಾಯಿ ದಂಡ ಹಾಗೂ ಅರ್ಜಿದಾರರಿಗೆ ಕಾನೂನು ಹೋರಾಟದ 1000 ರುಪಾಯಿ ಖರ್ಚನ್ನು ನೀಡಬೇಕೆಂದು ಆದೇಶಿಸಿತ್ತು. 

Advertisement

Advertisement

ಇಸ್ಕಾನ್ ಮತ್ತು ಅಡಿಗಾಸ್ ಹೊಟೇಲ್ ಮಧ್ಯೆ ಒಪ್ಪಂದವಾಗಿತ್ತು. ಆದರೆ ಹೊಟೇಲ್ ನವರು ಜನರಿಂದ ಹಣ ವಸೂಲಿ ಮಾಡುತ್ತಿದ್ದು ಇದುವರೆಗೂ ವಾಸುದೇವ್ ಅಡಿಗಾಸ್ ಹೊಟೇಲ್ ಅಕ್ಷಯ ಪಾತ್ರೆ ಯೋಜನೆಗೆ ಎಷ್ಟು ಹಣ ನೀಡಿದೆ ಎನ್ನುವ ಮಾಹಿತಿ ಎಲ್ಲೂ ನೀಡಿಲ್ಲ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments