ಬೆಂಗಳೂರು: ಉತ್ತಿಷ್ಠ ಭಾರತ ಸಂಘಟನೆ ಲಿವಿಂಗ್ ಧರ್ಮ ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದು ಸೆ.24-25 ರಂದು ನಡೆಯಲಿದೆ.
ಮಹಾ ಅಕಾಡೆಮಿಯ ಅಧ್ಯಕ್ಷ ಡಾ. ಮನೀಷ್ ಮೋಕ್ಷಗುಂಡಂ, ಲಿವಿಂಗ್ ಧರ್ಮ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಜೀವನ ವಿಧಾನವನ್ನು ಸುಧಾರಿಸುವ ಆಧ್ಯಾತ್ಮ ಹಾಗು ವಿಜ್ಞಾನದ ಮಹತ್ವವನ್ನು ತಿಳಿಸಿಕೊಡಲಿದ್ದಾರೆ. 2 ದಿನಗಳ ಕಾರ್ಯಾಗಾರದಲ್ಲಿ ಧ್ಯಾನ, ಯೋಗ, ಪೌರಾತ್ಯ ಸಮಾಜದ ದೃಷ್ಟಿಕೋನ, ಆಂತರಿಕ ಶೋಧ ಹಾಗು ವ್ಯಕ್ತಿತ್ವ ವಿಕಸನದ ತಂತ್ರಗಳನ್ನೂ ಬೋಧಿಸಲಿದ್ದಾರೆ.
ಕನಕಪುರದಲ್ಲಿರುವ ತಾತಗುಣಿ ಬಳಿ ಇರುವ ಸ್ವಾನಂದ ಆಶ್ರಮದಲ್ಲಿ ಬೆಳಿಗ್ಗೆ 9 ರಿಂದ ಲಿವಿಂಗ್ ಧರ್ಮ ಕಾರ್ಯಾಗಾರ ನಡೆಯಲಿದೆ. ಆಸಕ್ತರು ದೂ: 9964142207 ನ್ನು ಸಂಪರ್ಕಿಸಬಹುದಾಗಿದೆ.