ಮಂಗಳೂರು: ಚಲಿಸುತ್ತಿದ್ದ ಬಸ್ ನಿಂದ ನದಿಗೆ ಹಾರಿದ ಕಂಡಕ್ಟರ್ ಶವ ಇನ್ನೂ ಪತ್ತೆಯಿಲ್ಲ
ಚಿಲ್ಲರೆ ಹಣಕ್ಕಾಗಿ ಮಹಿಳೆಯೊಂದಿಗೆ ಜಗಳವಾಡಿ ನಂತರ ಚಲಿಸುತ್ತಿದ್ದ ಬಸ್ ನಿಂದ ಕುಮಾರಾಧಾರ ನದಿಗೆ ಹಾರಿದ ಕಂಡಕ್ಟರ್ ನನ್ನು ಪತ್ತೆ ಹಚ್ಚುವಲ್ಲಿ ರಕ್ಷಣಾ ...
ಮಂಗಳೂರು: ಚಿಲ್ಲರೆ ಹಣಕ್ಕಾಗಿ ಮಹಿಳೆಯೊಂದಿಗೆ ಜಗಳವಾಡಿ ನಂತರ ಚಲಿಸುತ್ತಿದ್ದ ಬಸ್ ನಿಂದ ಕುಮಾರಾಧಾರ ನದಿಗೆ ಹಾರಿದ ಕಂಡಕ್ಟರ್ ನನ್ನು ಪತ್ತೆ ಹಚ್ಚುವಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯರು ವಿಫಲರಾಗಿದ್ದಾರೆ.
ನಿರ್ವಾಹಕ ದೇವದಾಸ್ ಶೆಟ್ಟಿ ಶವ ಭಾನುವಾರ ನದಿಯ ಮೇಲೆ ತೇಲುತ್ತಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು 15 ಸ್ಥಳೀಯ ಈಜುಗಾರರ ತಂಡ ಭಾನುವಾರದ ವರೆಗೂ ದೇವದಾಸ್ ಶೆಟ್ಟಿ ಪತ್ತೆ ಹಚ್ತಲು ಕಾರ್ಯಾಚರಣೆ ನಡೆಸಿತು. ಆದರೆ ಭಾರೀ ಮಳೆಯ ಕಾರಣ ನದಿ ಉಕ್ಕಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ.
ಈ ನಡುವೆ ದೇವದಾಸ್ ಶೆಟ್ಟಿ ಅವರ ಕುಟುಂಬಸ್ಥರು ಪ್ರಕರಣದ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಚಿಲ್ಲರೆ ವಿಷಯ ಸಂಬಂಧ ದೇವದಾಸ್ ಶೆಟ್ಟಿ ಅವರು ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಯಂತ ನಿರ್ಘಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.