ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಯೋಧನ ಪತ್ನಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಯೋಧನ ಪತ್ನಿಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ಸಹೋದರ ಕೊಲೆ ಎಂದು ಆರೋಪಿಸಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ...

ಸಾಂದರ್ಭಿಕ ಚಿತ್ರ
Manjula VN
Updated On : 22 Apr 2017, 11:51 am
ಬೆಂಗಳೂರು: ಯೋಧನ ಪತ್ನಿಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ಸಹೋದರ ಕೊಲೆ ಎಂದು ಆರೋಪಿಸಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ತುಮಕೂರು ಮೂಲದ ರಾಮದೇವರಪಾಳ್ಯದ ಆಶಾ (24) ಮೃತರು. ಸಹೋದರಿಯ ತಂಗಿಯ ದೇಹದ ಮೇಲೆ ಗಾಯದ ಗುರುತುಗಳಿದ್ದು, ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಮೃತರ ಸಹೋದರ ಅಜಯ್ ಕುಮಾರ್ ಆರೋಪಿಸಿದ್ದಾರೆ. 
ಆಶಾ ಅವರು 2 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ನಾಗಮಂಡಲ ತಾಲೂಕಿನ ಮೋಹನ್ ಕುಮಾರ್ (31) ಅವರನ್ನು ವಿವಾಹವಾಗಿದ್ದರು. ದಂತಿಗೆ 11 ತಿಂಗಳ ಮಗು ಇದೆ. ಮೋಹನ್ ಅವರು ಸೇನೆಯಲ್ಲಿದ್ದು, ಗುಜರಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಮತ್ತು ಮಗುವನ್ನು ಗುಜರಾತ್ ಗೆ ಕರೆದುಕೊಂಡು ಹೋಗುವ ನಿಮಿತ್ತ ಮೂರು ದಿನಗಳ ಕಾರ ರಜೆ ಹಾಕಿ ಮೋಹನ್ ಅವರು ರಾಜ್ಯಕ್ಕೆ ಬಂದಿದ್ದರು. 

Advertisement

Advertisement

ತವರು ಮನೆಯಲ್ಲಿದ್ದ ಪತ್ನಿ ಆಶಾ ಮತ್ತು ಮಗುವನ್ನು ಬ್ಯಾಟರಾಯನಪುರದ ಟಿಂಬರ್ ಯಾರ್ಡ್ ನಲ್ಲಿರುವ ಅಣ್ಣನ ಮನೆಗೆ ಕರೆದುಕೊಂಡು ಇಲ್ಲಿಂದ ಗುಜರಾತ್ ಗೆ ಹೋಗಲು ನಿರ್ಧರಿಸಿದ್ದರು. ಗುರುವಾರ ರಾತ್ರಿ ದಂಪತಿ ನಡುವೆ ಜಗಳವಾಗಿದೆ. 
ಗುರುವಾರ ರಾತ್ರಿ 8.20ರ ಸುಮಾರಿಗೆ ಸಹೋದರ ವಿಜಯ್ ಗೆ ಕರೆ ಮಾಡಿದ್ದ ಆಶಾ, ಪತಿ ಮೋಹನ್ ಹಾಗೂ ಭಾವ ರಾಮಲಿಂಗಪ್ಪ ಹಲ್ಲೆ ನಡೆಸಿದ್ದ ಬಗ್ಗೆ ಹೇಳಿಕೊಂಡಿದ್ದು, ತಾನು ಮನೆಗೆ ಹೋಗುವಷ್ಟರಲ್ಲಿ ಆಶಾ ಮೃತಪಟ್ಟಿದ್ದಳು. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೋಹನ್ ಮತ್ತು ಆತನ ಅಣ್ಣ ಸುಳ್ಳು ಹೇಳುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ತಂಗಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 
ಘಟನೆ ಬಳಿಕ ಮೃತ ಆಶಾ ಪತಿ ಮೋಹನ್ ಎದೆ ನೋವು ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ರಾಮಲಿಂಗಪ್ಪ ಹಾಗೂ ಮೋಹನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement