ರಾಜ್ಯ

ವರ್ತೂರು ಕೆರೆ ತೀರದಲ್ಲಿ ಮಣ್ಣಿನ ರಾಶಿ: ಪರಸ್ಪರ ಆರೋಪದಲ್ಲಿ ಬಿಬಿಎಂಪಿ, ಬಿಡಿಎ

Sumana Upadhyaya
ಬೆಂಗಳೂರು:  ಬೆಂಗಳೂರು ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ವರ್ತೂರು ಕೆರೆಯನ್ನು ನಾಶಪಡಿಸಲು ಹೊರಡುತ್ತಿದ್ದಾರೇನೋ ಎಂದು ಭಾಸವಾಗುತ್ತಿದೆ. ಮೊನ್ನೆ ಶನಿವಾರ 100 ಟ್ರಕ್ ಲೋಡ್ ಮಣ್ಣನ್ನು ತಂದು ವರ್ತೂರು ಕೆರೆಯ ಬದಿಗೆ ರಾಶಿ ಹಾಕಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆರೆಯ ಉಸ್ತುವಾರಿ ನೋಡಿಕೊಳ್ಳುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ,ಕೆರೆಯ ಒತ್ತುವರಿ ಬೆಂಗಳೂರು ನಗರದ ಉಪ ಆಯುಕ್ತರ ಅಡಿಗೆ ಬರುತ್ತದೆ.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ನಗರಾಭಿವೃದ್ಧಿ ಅಧ್ಯಕ್ಷ ವಿದ್ಯಾಸಾಗರ್, ನಮಗೆ ಶನಿವಾರ ದೂರು ಬಂದಿದೆ. ನಾವು ಸ್ಥಳಕ್ಕೆ ಭೇಟಿ ನೀಡಲಿದ್ದು ಅಲ್ಲಿನ ಸ್ಥಿತಿಗತಿಯನ್ನು ನೋಡಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಬಿಡಿಎ ಆಯುಕ್ತರಿಗೆ ದೂರಿನ ಬಗ್ಗೆ ತಿಳಿಸಿದ್ದೇನೆ ಎನ್ನುತ್ತಾರೆ. 
ನಿವಾಸಿ ರಂಜನ್ ಶರ್ಮಾ ಅವರು, ಮಣ್ಣು ರಾಶಿ ಹಾಕಿರುವ ಬಗ್ಗೆ ಕಾರ್ಪೊರೇಟರ್ ಅವರಿಗೆ ಹೇಳಿದ್ದೇವೆ. ತಮಗೆ ಈ ಬಗ್ಗೆ ತಿಳಿದಿದೆ. ಆದರೂ ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಾಗಿಲ್ಲ ಎನ್ನುತ್ತಾರೆ ಎಂದರು.
ಬೆಳ್ಳಂದೂರು ಕೆರೆಯ ರೀತಿ ವರ್ತೂರು ಕೆರೆಯಲ್ಲಿ ಕೂಡ ನೊರೆ ಉಕ್ಕಿ ಹರಿಯುತ್ತಿದ್ದು ಕೆರೆ ಒತ್ತುವರಿಯ ದೂರುಗಳು ಬಂದಿವೆ ಎಂದು ಮತ್ತೊಬ್ಬ ನಿವಾಸಿ ಹೇಳುತ್ತಾರೆ.
SCROLL FOR NEXT